ಫಿಫಾ ವಿಶ್ವಕಪ್ ಫೈನಲ್ಗೂ ಮುನ್ನ ಭಾರತದಲ್ಲಿ ಸಖತ್ ಟ್ರೆಂಡ್ ಆದ ಎಸ್‌ಬಿಐ ಪಾಸ್‌ಬುಕ್..! ಕಾರಣವೇನು?
FIFA World Cup 2022: ಅತ್ತ ಮೆಸ್ಸಿ ತಂಡ ಫೈನಲ್ಗೇರುತ್ತಿದ್ದಂತೆ ಇತ್ತ ಭಾರತದಲ್ಲಿ ಪ್ರತಿಷ್ಠಿತ ಎಸ್‌ಬಿಐ ಬ್ಯಾಂಕ್ನ ಪಾಸ್‌ಬುಕ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ.
ನವೆಂಬರ್ 20 ರಂದು ಆರಂಭವಾದ ಫುಟ್ಬಾಲ್ ವಿಶ್ವಕಪ್ (FIFA World Cup) ಅಂತಿಮ ಹಂತ ತಲುಪಿದೆ. ಡಿಸೆಂಬರ್ 18 ರಂದು ನಡೆಯಲಿರುವ ಫೈನಲ್‌ನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ (argentina vs france) ಕತಾರ್‌ನ ರಾಷ್ಟ್ರೀಯ ದಿನದಂದು ಲುಸೈಲ್ ಕ್ರೀಡಾಂಗಣದಲ್ಲಿ ಟ್ರೋಫಿ ಗೆಲ್ಲಲು ಸೆಣಸಾಡಲಿವೆ. ಸೆಮಿಫೈನಲ್ನಲ್ಲಿ ಕ್ರೊವೇಷ್ಯಾ ತಂಡವನ್ನು ಮಣಿಸಿರುವ ಅರ್ಜೆಂಟೀನಾ ತಂಡ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸ್ಸಿನೊಂದಿಗೆ ಅಖಾಡಕ್ಕಿಳಿಯುತ್ತಿದೆ. ಇತ್ತ ಮೊರಾಕೋ ತಂಡವನ್ನು ಮಣಿಸಿದ ಫ್ರಾನ್ಸ್, ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸೆಣಸಾಡಲಿದೆ. ತಿಂಗಳ ಕಾಲ ನಡೆದ ಈ ಈವೆಂಟ್‌ನಲ್ಲಿ ಕೆಲವು ಅಚ್ಚರಿಯ ಫಲಿತಾಂಶಗಳು ಹೊರಬಿದ್ದವು. ಕೊನೆಗೂ ಮೊದಲ ಪಂದ್ಯದಲ್ಲಿ ಸೋತಿದ್ದ ಅರ್ಜೆಂಟೀನಾ ಫೈನಲಿಸ್ಟ್ ತಂಡವಾಗಿ ಸೀಟು ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅತ್ತ ಮೆಸ್ಸಿ (Lionel Messi) ತಂಡ ಫೈನಲ್ಗೇರುತ್ತಿದ್ದಂತೆ ಇತ್ತ ಭಾರತದಲ್ಲಿ ಪ್ರತಿಷ್ಠಿತ ಎಸ್‌ಬಿಐ ಬ್ಯಾಂಕ್ನ ಪಾಸ್‌ಬುಕ್ (SBI passbook) ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಪಾಸ್‌ಬುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದಕ್ಕೆ ಕಾರಣವೂ ಇದೆ. ಎಸ್ಬಿಐನ ಪಾಸ್‌ಬುಕ್ ಕವರ್, ನೀಲಿ ಮತ್ತು ಬಿಳಿ ಪಟ್ಟಿಗಳಿಂದ ತುಂಬಿದೆ. ನೀಲಿ ಬಣ್ಣದ ನಡುವೆ ಬಿಳಿ ಪಟ್ಟಿ ಇದ್ದು, ಅದರ ಮಧ್ಯದಲ್ಲಿ ಗಾಢ ನೀಲಿ ಬಣ್ಣದಲ್ಲಿ ವೃತ್ತಾಕಾರವನ್ನು ಕಾಣಬಹುದಾಗಿದೆ. ಆದರೆ ಎಸ್‌ಬಿಐ ಪಾಸ್‌ಬುಕ್ ಟ್ರೆಂಡ್ ಆಗುವುದಕ್ಕೂ, ಫಿಫಾ ವಿಶ್ವಕಪ್ಗೂ ಏನು ಸಂಬಂಧ ಎಂಬ ಪ್ರಶ್ನೆ ನಿಮಗೆ ಕಾಡುತ್ತಿರಬಹುದು. ಅದಕ್ಕೆ ಸೂಕ್ತ ಕಾರಣವೂ ಇಲ್ಲಿದೆ.
ಮೆಸ್ಸಿ- ಎಂಬಪ್ಪೆ! ಯಾರಿಗೆ ಸಿಗಲಿದೆ ಗೋಲ್ಡನ್ ಬೂಟ್- ಗೋಲ್ಡನ್ ಬಾಲ್ ಪ್ರಶಸ್ತಿ? ರೇಸ್ನಲ್ಲಿ ಈ ಆಟಗಾರರು
2. ಅರ್ಜೆಂಟೀನಾ ತಂಡದ ಜೆರ್ಸಿ ನಡುವೆ ಸಾಮ್ಯತೆ
ವಾಸ್ತವವಾಗಿ, ಎಸ್‌ಬಿಐ ಪಾಸ್‌ಬುಕ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಲು ಪ್ರಮುಖ ಕಾರಣ, ಈ ಪಾಸ್‌ಬುಕ್ ಹಾಗೂ ಅರ್ಜೆಂಟೀನಾ ತಂಡದ ಆಟಗಾರರು ಧರಿಸುವ ಜೆರ್ಸಿ, ಎರಡಕ್ಕೂ ಸಾಕಷ್ಟು ಹೊಲಿಕೆಗಳಿರುವುದು. ಎಸ್‌ಬಿಐ ಪಾಸ್‌ಬುಕ್ ನೀಲಿ ಹಾಗೂ ಬಿಳಿ ಬಣ್ಣದಿಂದ ಕೂಡಿದ್ದರೆ, ಇತ್ತ ಅರ್ಜೆಂಟೀನಾ ತಂಡದ ಆಟಗಾರರು ಧರಿಸುವ ಜೆರ್ಸಿಯೂ ಕೂಡ ಈ ಎರಡು ಬಣ್ಣಗಳ ಮಿಶ್ರಣದಿಂದ ಕೂಡಿದೆ. ಹೀಗಾಗಿ ಎಸ್‌ಬಿಐ ಪಾಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಇದಕ್ಕೆ ತಕ್ಕಂತೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಫನ್ನಿ ಪೋಸ್ಟ್ಗಳನ್ನು ಸಹ ಮಾಡುತ್ತಿದ್ದಾರೆ.
Reason why Indians support Argentina
Indians feel if Argentina loose they will loose all their money ?#India #FIFAWorldCup #GOAT? #FIFAWorldCupQatar2022 #Argentina #WorldCup2022 #WorldCup #finale #mumbai #Delhi #Kerala #TamilNadu #Karnataka #Bengaluru #SBI #Bank pic.twitter.com/CTi7TW5X3Y
— We want United India ?? (@_IndiaIndia) December 15, 2022
Reason why Indians ?? are biggest fan of Argentina ??SBI official partner of Argentina ???♂️? pic.twitter.com/72pXshY649
— Deep4IND (@Deep4_IND) December 15, 2022
SBI's lunch time = Argentina's Whole Match https://t.co/u2kt12FyRX
— Harshad (@_anxious_one) December 15, 2022
3. ವಿಶ್ವಕಪ್ ಫೈನಲ್ ಬಳಿಕ ಮೆಸ್ಸಿ ನಿವೃತ್ತಿ
ಮಾಧ್ಯಮ ವರದಿಗಳ ಪ್ರಕಾರ, ಅರ್ಜೆಂಟೀನಾದ ಮಾಧ್ಯಮ ಸಂಸ್ಥೆ ಡಿಯಾರಿಯೊ ಡಿಪೋರ್ಟಿವೊ ಓಲೆ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿರುವ ಮೆಸ್ಸಿ, ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಕೊನೆಗೊಳಿಸುತ್ತೇನೆ. ಈ ಸಾಧನೆ ನನಗೆ ಅತ್ಯಂತ ಖುಷಿ ನೀಡಿದೆ. ಅರ್ಜೆಂಟೀನಾ ಮತ್ತೊಮ್ಮೆ ವಿಶ್ವಕಪ್ ಫೈನಲ್ ತಲುಪಿದೆ. ಸತತ ಪ್ರಯತ್ನಗಳ ನಂತರ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ನಾವು ಇನ್ನೊಂದು ಹೆಜ್ಜೆ ಹಿಂದಿದ್ದೇವೆ. ಈ ಪ್ರಶಸ್ತಿ ಗೆಲ್ಲಲು ನಾವು ಎಲ್ಲಾ ಪ್ರಯತ್ನ ಮಾಡಲಿದ್ದೇವೆ ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ.
2014ರ ಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೋತಿದ್ದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ, 1978 ಮತ್ತು 1986ರಲ್ಲಿ ಈ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಆ ಬಳಿಕ ಕೆಲವ ಬಾರಿ ಈ ತಂಡ ಫೈನಲ್ಗೇರಿದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಮೆಸ್ಸಿ ತನ್ನ ಮೊದಲ ವಿಶ್ವಕಪ್ ಗೆಲ್ಲುವ ಮೂಲಕ ತನ್ನ ಅಸಾಮಾನ್ಯ ವೃತ್ತಿಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Sat, 17 December 22