ಏಕದಿನ ವಿಶ್ವಕಪ್ ಆತಿಥ್ಯ ಕೈಜಾರುವ ಭೀತಿಯಲ್ಲಿ ಬಿಸಿಸಿಐ; ಮಂಡಳಿ ಖಜಾನೆಗೆ 900 ಕೋಟಿ ರೂ. ನಷ್ಟ!
ODI World Cup 2023: ವರದಿಗಳ ಪ್ರಕಾರ, ತೆರಿಗೆ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಪರಿಹರಿಸದಿದ್ದರೆ, 2023ರ ವಿಶ್ವಕಪ್ ಹೋಸ್ಟಿಂಗ್ ಅವಕಾಶವನ್ನು ಭಾರತದಿಂದ ಐಸಿಸಿ ಹಿಂಪಡೆಯಲು ಯೋಚಿಸಿದೆ.
ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ (ODI World Cup 2023) ಭಾರತ ಆತಿಥ್ಯ ವಹಿಸಲು ತಯಾರಿ ನಡೆಸುತ್ತಿದೆ. ಆದರೆ ಈಗ ಹೊರಬಿದ್ದಿರುವ ಸುದ್ದಿಗಳ ಪ್ರಕಾರ, 2023ರ ವಿಶ್ವಕಪ್ ಆತಿಥ್ಯ ಭಾರತದ ಕೈತಪ್ಪುವ ಸಾಧ್ಯತೆಗಳಿವೆ. ಈ ಸುದ್ದಿ ಭಾರತೀಯ ಕ್ರಿಕೆಟ್ ಲೋಕದಲ್ಲೂ ತಲ್ಲಣ ಮೂಡಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐಗೆ (BCCI) ಎರಡು ಸಮಸ್ಯೆಗಳು ಬಿಡಿಸಲಾರದ ಕಗ್ಗಂಟ್ಟಾಗಿದ್ದು, ಈ ಸಮಸ್ಯೆಗಳೇ ಬಿಸಿಸಿಐಗೆ ಸಾಕಷ್ಟು ಹಿನ್ನಡೆಯುಂಟು ಮಾಡುತ್ತಿವೆ ಎನ್ನಲಾಗಿದೆ. ಒಂದೆಡೆ ಐಸಿಸಿ (ICC) ಮುಂದೆ ಪಾಕಿಸ್ತಾನ ನಿರಂತರವಾಗಿ ಬಿಸಿಸಿಐ ವಿರುದ್ಧ ಆರೋಪಗಳ ಸರಮಾಲೆ ಕಟ್ಟುತ್ತಿದ್ದರೆ, ಮತ್ತೊಂದೆಡೆ ತೆರಿಗೆಗೆ ಸಂಬಂಧಿಸಿದ ವಿಚಾರದಲ್ಲಿ ಮಂಡಳಿಯು ಕೇಂದ್ರ ಸರ್ಕಾರದ (central government) ಜತೆಯೂ ಹೋರಾಟ ನಡೆಸುತ್ತಿದೆ. ಅಲ್ಲದೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಐಸಿಸಿ ಮಂಡಳಿಗೆ ಎಚ್ಚರಿಕೆಯನ್ನೂ ನೀಡಿದೆ.
ವರದಿಗಳ ಪ್ರಕಾರ, ತೆರಿಗೆ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಪರಿಹರಿಸದಿದ್ದರೆ, 2023ರ ವಿಶ್ವಕಪ್ ಹೋಸ್ಟಿಂಗ್ ಅವಕಾಶವನ್ನು ಭಾರತದಿಂದ ಹಿಂಪಡೆಯಲು ಐಸಿಸಿ ಯೋಚಿಸಿದೆ. ಭಾರತ ಕೊನೆಯದಾಗಿ 2016 ರಲ್ಲಿ ಟಿ20 ವಿಶ್ವಕಪ್ ಆಯೋಜಿಸಿತ್ತು. ಆ ಸಮಯದಲ್ಲಿಯೂ ಬಿಸಿಸಿಐ ತೆರಿಗೆ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿತ್ತು. ಹೀಗಾಗಿ ಐಸಿಸಿ, ಬಿಸಿಸಿಐಗೆ ನೀಡಬೇಕಿದ್ದ ವಾರ್ಷಿಕ ಷೇರಿನಿಂದ 190 ಕೋಟಿ ರೂ.ಗಳನ್ನು ಕಡಿತಗೊಳಿಸಿತ್ತು.
2. 900 ಕೋಟಿ ನಷ್ಟವಾಗಲಿದೆ
ಈಗ ಈ ಬಾರಿ ಐಸಿಸಿ ತೆರಿಗೆ ಬಿಲ್ ಅನ್ನು ಶೇ.21.84ಕ್ಕೆ ಹೆಚ್ಚಿಸಿದ್ದು, ಒಂದು ವೇಳೆ ಬಿಸಿಸಿಐ ಕೇಂದ್ರ ಸರ್ಕಾರದಿಂದ ವಿಶ್ವಕಪ್‌ಗೆ ತೆರಿಗೆ ವಿನಾಯಿತಿ ಪಡೆಯದಿದ್ದರೆ, ಮಂಡಳಿಯು 900 ಕೋಟಿ ರೂಪಾಯಿಗೂ ಹೆಚ್ಚು ನಷ್ಟವನ್ನು ಅನುಭವಿಸಬೇಕಾಗುತ್ತದೆ.
FIFA World Cup 2022: ಮೆಸ್ಸಿ ತಂಡ ಫಿಫಾ ವಿಶ್ವಕಪ್ ಗೆದ್ದರೆ ಈ 5 ದಾಖಲೆಗಳು ಸೃಷ್ಟಿಯಾಗಲಿವೆ..!
3. ಐಸಿಸಿ ನೀತಿ ಹೇಳುವುದೇನು?
ಐಸಿಸಿ ನಿಯಮದ ಪ್ರಕಾರ ಯಾವುದೇ ದೇಶ ಐಸಿಸಿ ಈವೆಂಟ್ಗಳನ್ನು ಆಯೋಜಿಸಲು ಮುಂದಾದರೆ, ಆ ಆತಿಥೇಯ ದೇಶವು ತನ್ನ ಸರ್ಕಾರದಿಂದ ತೆರಿಗೆ ವಿನಾಯಿತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ, ಈ ಟೂರ್ನಿಯಿಂದ ಬರುವ ಆದಾಯದಲ್ಲಿ ಆತಿಥೇಯ ದೇಶಕ್ಕೆ ಸಿಗುವ ಶೇರಿನಲ್ಲಿ ತೆರಿಗೆ ಹಣವನ್ನು ಕಡಿತಗೊಳಿಸಿ, ಮಿಕ್ಕ ಹಣವನ್ನು ನೀಡುತ್ತದೆ. ಇದರ ಪ್ರಕಾರ ಹೊದರೆ, ಬಿಸಿಸಿಐ ತೆರಿಗೆ ವಿನಾಯತಿ ಪಡೆಯದಿದ್ದರೆ, ಅದರ ಬೋಕ್ಕಸಕ್ಕೆ ಭಾರಿ ನಷ್ಟವಾಗಲಿದೆ.
4. ಮೊದಲ ಬಾರಿಗೆ ಭಾರತದಲ್ಲಿ ಪೂರ್ಣ ಪಂದ್ಯಾವಳಿ
ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಇಡೀ ಟೂರ್ನಿ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲು. 1987 ರಲ್ಲಿ, ಭಾರತ ಮತ್ತು ಪಾಕಿಸ್ತಾನ ಎರಡೂ ಒಟ್ಟಿಗೆ ಆತಿಥ್ಯ ವಹಿಸಿದ್ದವು. 1996 ರಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿದ್ದವು. 2011 ರ ವಿಶ್ವಕಪ್ ಅನ್ನು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆಯೋಜಿಸಿತ್ತು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ, ಇಡೀ ಪಂದ್ಯಾವಳಿಯನ್ನು ಭಾರತ ಆಯೋಜಿಸಲಿದೆ. ಆದರೆ ಅದಕ್ಕೂ ಮೊದಲು ಮಂಡಳಿಯು ತೆರಿಗೆ ಸಂಬಂಧಿತ ಸಮಸ್ಯೆಗೆ ಸಮಯೋಚಿತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Sat, 17 December 22