AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs BAN: ಕಿಶನ್- ಕೊಹ್ಲಿ ದಾಖಲೆ ಜೊತೆಯಾಟ; ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡ ಭಾರತ

IND vs BAN: ಬಾಂಗ್ಲಾದೇಶ ಪ್ರವಾಸದಲ್ಲಿ ಮೊದಲೆರಡು ಏಕದಿನ ಪಂದ್ಯಗಳನ್ನು ಸೋಲುವುದರೊಂದಿಗೆ ಸರಣಿ ಕಳೆದುಕೊಂಡಿದ್ದ ಟೀಂ ಇಂಡಿಯಾ ಕೊನೆಯ ಏಕದಿನ ಪಂದ್ಯವನ್ನು 227 ರನ್​ಗಳ ಬೃಹತ್ ಅಂತರದಲ್ಲಿ ಗೆಲ್ಲುವುದರೊಂದಿಗೆ ಏಕದಿನ ಸರಣಿಗೆ ಸಮಾಧಾನಕರ ವಿದಾಯ ಹೇಳಿದೆ.

IND vs BAN: ಕಿಶನ್- ಕೊಹ್ಲಿ ದಾಖಲೆ ಜೊತೆಯಾಟ; ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡ ಭಾರತ
ಕೊಹ್ಲಿ- ಕಿಶನ್
TV9 Web
| Updated By: ಪೃಥ್ವಿಶಂಕರ|

Updated on:Dec 10, 2022 | 7:05 PM

Share

ಬಾಂಗ್ಲಾದೇಶ ಪ್ರವಾಸದಲ್ಲಿ ಮೊದಲೆರಡು ಏಕದಿನ ಪಂದ್ಯಗಳನ್ನು ಸೋಲುವುದರೊಂದಿಗೆ ಸರಣಿ ಕಳೆದುಕೊಂಡಿದ್ದ ಟೀಂ ಇಂಡಿಯಾ (India vs Bangladesh) ಕೊನೆಯ ಏಕದಿನ ಪಂದ್ಯವನ್ನು 227 ರನ್​ಗಳ ಬೃಹತ್ ಅಂತರದಲ್ಲಿ ಗೆಲ್ಲುವುದರೊಂದಿಗೆ ಏಕದಿನ ಸರಣಿಗೆ ಸಮಾಧಾನಕರ ವಿದಾಯ ಹೇಳಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಮಿಂಚಿದ ಇಶಾನ್ ಕಿಶನ್ (Ishan Kishan) ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದಲ್ಲದೆ, ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿ ಕೂಡ ಆದರು. ಹಾಗೆಯೇ ಕಿಶನ್​ಗೆ ಸಖತ್ ಸಾಥ್ ನೀಡಿದ ಕಿಂಗ್ ಕೊಹ್ಲಿ (Virat Kohli) ಕೂಡ ವರ್ಷಗಳ ನಂತರ ಏಕದಿನ ಕ್ರಿಕೆಟ್​ನಲ್ಲಿ ಶತಕ ಸಿಡಿಸಿ ಮಿಂಚಿದರು. ಈ ಇಬ್ಬರ ದಾಖಲೆಯ ಜೊತೆಯಾಟ ನೆರವಿನಿಂದ ಟೀಂ ಇಂಡಿಯಾ 410 ರನ್​ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ ಪಡೆ ಕೇವಲ 182 ರನ್​ಗಳಿಗೆ ಆಲ್​ಔಟ್ ಆಯಿತು.

ಇಶಾನ್- ವಿರಾಟ್ ಜೊತೆಯಾಟ

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 3 ರನ್ ಗಳಿಸಿ ಧವನ್ ಪೆವಿಲಿಯನ್ ಹಾದಿ ಹಿಡಿದರು. ಆರಂಭದಲ್ಲೇ ವಿಕೆಟ್ ಪಡೆದಿದ್ದರಿಂದ ಪಂದ್ಯದಲ್ಲಿ ಹಿಡಿತ ಸಾಧಿಸಬಹುದೆಂದುಕೊಂಡಿದ್ದ ಬಾಂಗ್ಲಾ ಪಡೆಗೆ ಕೊಹ್ಲಿ- ಕಿಶನ್ ಜೋಡಿ ಸರಿಯಾಗಿ ತಿರುಗೇಟು ನೀಡಿತು. ಈ ಇಬ್ಬರು ಎರಡನೇ ವಿಕೆಟ್​ಗೆ ದಾಖಲೆಯ ದ್ವಿಶತಕದ ಜೊತೆಯಾಟ ನಡೆಸಿದರು. ಈ ವೇಳೆ ಆರಂಭಿಕರಾಗಿ ಕಣಕ್ಕಿಳಿದ ಕಿಶನ್ ಕೇವಲ 126 ಎಸೆತಗಳಲ್ಲಿ ಏಕದಿನ ಇತಿಹಾಸದಲ್ಲೇ ಅತಿ ವೇಗದ ದ್ವಿಶತಕ ಪೂರೈಸಿದರು.

ತಮ್ಮ ಪೂರ್ಣ ಇನ್ನಿಂಗ್ಸ್‌ನಲ್ಲಿ 131 ಎಸೆತಗಳನ್ನು ಎದುರಿಸಿದ ಕಿಶನ್ 24 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಒಳಗೊಂಡಂತೆ 210 ರನ್ ಗಳಿಸಿ ಟಸ್ಕಿನ್​ಗೆ ಬಲಿಯಾದರು. ಒಂದು ವೇಳೆ ಕಿಶನ್ ಇಷ್ಟು ರನ್​ಗಳಿಗೆ ವಿಕೆಟ್ ಒಪ್ಪಿಸದೆ ಇದ್ದಿದ್ದರೆ, ಟೀಂ ಇಂಡಿಯಾ 500 ರ ಗಡಿ ದಾಟುವ ಸಾಧ್ಯತೆಯೂ ಇತ್ತು. ಹಾಗೆಯೇ ಕಿಶನ್ ಕೂಡ ರೋಹಿತ್ ಶರ್ಮಾ ದಾಖಲೆಯನ್ನು ಸುಲಭವಾಗಿಯೇ ಮುರಿಯುತ್ತಿದ್ದರು.

Ishan Kishan: ಗೇಲ್ ದಾಖಲೆ ಉಡೀಸ್; ಅಬ್ಬರದ ದ್ವಿಶತಕ ಸಿಡಿಸಿ ಬರೋಬ್ಬರಿ 10 ದಾಖಲೆ ನಿರ್ಮಿಸಿದ ಕಿಶನ್..!

ಈ ಪಂದ್ಯದಲ್ಲಿ ಇಶಾನ್ ಹೊರತುಪಡಿಸಿ, ವಿರಾಟ್ ಕೊಹ್ಲಿ ಕೂಡ ತಮ್ಮ ಏಕದಿನ ವೃತ್ತಿಜೀವನದ 44 ನೇ ಶತಕ ಸಿಡಿಸಿ ಮಿಂಚಿದರು. ಕೊಹ್ಲಿ ತಮ್ಮ ಇನ್ನಿಂಗ್ಸ್​ನಲ್ಲಿ 91 ಎಸೆತಗಳನ್ನು ಎದುರಿಸಿ 11 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಂತೆ 113 ರನ್ ಬಾರಿಸಿದರು. ಇವರಿಬ್ಬರ ನಡುವೆ ಎರಡನೇ ವಿಕೆಟ್‌ಗೆ 190 ಎಸೆತಗಳಲ್ಲಿ 290 ರನ್‌ಗಳ ಜೊತೆಯಾಟವಿತ್ತು.

ಈ ಜೋಡಿಯ ಜೊತೆಯಾಟ ಕೊನೆಗೊಂಡ ಬಳಿಕ ಟೀಂ ಇಂಡಿಯಾದಿಂದ ಮತ್ತ್ಯಾವ ಆಟಗಾರನು ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಕೊನೆಯಲ್ಲಿ ಆಲ್​ರೌಂಡರ್ ವಾಷಿಂಗ್​ಟನ್ ಸುಂದರ್ 27 ಎಸೆತಗಳಲ್ಲಿ 37 ರನ್ ಬಾರಿಸಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ಅಂತಿಮವಾಗಿ 8 ವಿಕೆಟ್​ಗಳನ್ನು ಕಳೆದುಕೊಂಡು ಟೀಂ ಇಂಡಿಯಾ 409 ರನ್​ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು.

ಬಾಂಗ್ಲಾ ಪಂದ್ಯದಲ್ಲಿಯೇ ಇರಲಿಲ್ಲ

ಈ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಆರಂಭಿಕರಿಬ್ಬರೂ ವೇಗವಾಗಿ ರನ್ ಗಳಿಸಲು ಮುಂದಾದರಾದರೂ, ಅನಾಮುಲ್ 8 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಶಕೀಬ್, ನಾಯಕ ಲಿಟನ್ ಜತೆಗೂಡಿ ತಂಡದ ಮೊತ್ತವನ್ನು ಅರ್ಧಶತಕದ ಗಡಿ ದಾಟಿಸಿದರು. ಈ ವೇಳೆ ದಾಳಿಗಿಳಿದ ಸಿರಾಜ್, ದಾಸ್ ವಿಕೆಟ್ ಉರುಳಿಸುವುದರೊಂದಿಗೆ ಈ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಕೊಂಚ ಪ್ರತಿರೋಧ ತೋರಿದ ಶಕೀಬ್, 50 ಎಸೆತಗಳಲ್ಲಿ 43 ರನ್ ಬಾರಿಸಿ ಕುಲ್ದೀಪ್​ಗೆ ಬಲಿಯಾದರು. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಯಾಸಿರ್ ಅಲಿ (25 ರನ್) ಹಾಗೂ ಮಹಮ್ಮದುಲ್ಲಾ (20 ರನ್) ಬಿಟ್ಟರೆ ಮತ್ತ್ಯಾವ ಬಾಂಗ್ಲಾ ಆಟಗಾರನು ಗೆಲುವಿಗಾಗಿ ಹೋರಾಟ ನಡೆಸಲಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತದ ಸೋಲಿಗೆ ಕಾರಣರಾಗಿದ್ದ ಹಸನ್ ಕೂಡ ಈ ಪಂದ್ಯದಲ್ಲಿ ಕೇವಲ 3 ರನ್​ಗಳಿಗೆ ಸುಸ್ತಾದರು. ಅಂತಿಮವಾಗಿ ಬಾಂಗ್ಲಾ ತಂಡ 34 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 182 ರನ್​ಗಳಿಸಲಷ್ಟೇ ಶಕ್ತವಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Sat, 10 December 22

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ