ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದಲ್ಲದೆ ಬೌಲಿಂಗ್​ನಲ್ಲೂ ಮಿಂಚಿದ ಅರ್ಜುನ್ ತೆಂಡೂಲ್ಕರ್..!

Arjun Tendulkar: ಬ್ಯಾಟಿಂಗ್​ನಲ್ಲಿ ಶತಕ ಸಿಡಿಸಿದ ನಂತರ ಬೌಲಿಂಗ್​ನಲ್ಲೂ ತಮ್ಮ ಕರಾಮತ್ತು ತೋರಿದ ಅರ್ಜುನ್ ರಾಜಸ್ಥಾನ ವಿರುದ್ಧದ ಪಂದ್ಯದ ಏಕೈಕ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದರು.

ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದಲ್ಲದೆ ಬೌಲಿಂಗ್​ನಲ್ಲೂ ಮಿಂಚಿದ ಅರ್ಜುನ್ ತೆಂಡೂಲ್ಕರ್..!
Arjun Tendulkar
Follow us
TV9 Web
| Updated By: ಪೃಥ್ವಿಶಂಕರ

Updated on:Dec 17, 2022 | 10:21 AM

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ (Ranji Trophy) ಮೊದಲ ಸುತ್ತಿನ ಪಂದ್ಯಗಳು ಕೆಲವು ಪ್ರಬಲ ಪ್ರದರ್ಶನಗಳನ್ನು ಕಂಡಿವೆ. ಅದರಲ್ಲೂ ಯುವ ಆಟಗಾರರು ಈ ಟೂರ್ನಿಯಲ್ಲಿ ಭರ್ಜರಿ ಆಟ ಪ್ರದರ್ಶಿಸುವುದರೊಂದಿಗೆ ಟೀಂ ಇಂಡಿಯಾಕ್ಕೆ ಲಗ್ಗೆ ಇಡಲು ಪ್ರಯತ್ನಿಸುತ್ತಿದ್ದಾರೆ. ಈ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಕೂಡ ಸೇರಿದ್ದು, ಸುದೀರ್ಘ ಕಾಯುವಿಕೆಯ ನಂತರ ಸಿಕ್ಕ ಚೊಚ್ಚಲ ಅವಕಾಶದಲ್ಲಿಯೇ ಅರ್ಜುನ್ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಗೋವಾ ಪರ ಚೊಚ್ಚಲ ರಣಜಿ ಪಂದ್ಯವನ್ನಾಡಿದ ಅರ್ಜುನ್, ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿದಲ್ಲದೆ, ಬೌಲಿಂಗ್​ನಲ್ಲೂ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ.

ಮುಂಬೈ ಪರ ಸಾಕಷ್ಟು ವರ್ಷ ಕ್ರಿಕೆಟ್ ಆಡಿದ ಅರ್ಜುನ್​ಗೆ ಲಿಸ್ಟ್ ಎ ಪಂದ್ಯಗಳಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಹೀಗಾಗಿ ಈ ಆವೃತ್ತಿಯಿಂದ ಗೋವಾ ಪರ ಆಡುತ್ತಿರುವ ಅರ್ಜುನ್, ತನ್ನ ಮೊದಲ ರಣಜಿ ಟ್ರೋಫಿ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಬ್ಯಾಟ್ ಮತ್ತು ಬಾಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ಮೊದಲು, ನೈಟ್ ವಾಚ್‌ಮನ್ ರೂಪದಲ್ಲಿ ಬ್ಯಾಟಿಂಗ್​ಗೆ ಇಳಿದು 120 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡುವ ಮೂಲಕ ತಂದೆ ಸಚಿನ್‌ರಂತೆಯೇ ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಸಚಿನ್ ತಮ್ಮ ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲೂ ಇದೇ ರೀತಿ ಶತಕ ಬಾರಿಸಿದ್ದರು.

ಅರ್ಜುನ್​ರಂತೆಯೇ ಚೊಚ್ಚಲ ರಣಜಿ ಪಂದ್ಯವನ್ನಾಡಿ ಭರ್ಜರಿ ದ್ವಿಶತಕ ಸಿಡಿಸಿದ ಸೌರಾಷ್ಟ್ರ ಆಟಗಾರ..!

2. ಪ್ರಮುಖ 3 ವಿಕೆಟ್ ಪಡೆದ ಅರ್ಜುನ್

ಬ್ಯಾಟಿಂಗ್​ನಲ್ಲಿ ಶತಕ ಸಿಡಿಸಿದ ನಂತರ ಬೌಲಿಂಗ್​ನಲ್ಲೂ ತಮ್ಮ ಕರಾಮತ್ತು ತೋರಿದ ಅರ್ಜುನ್ ರಾಜಸ್ಥಾನ ವಿರುದ್ಧದ ಪಂದ್ಯದ ಏಕೈಕ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದರು. ಈ ಪಂದ್ಯದಲ್ಲಿ 23.1 ಓವರ್‌ ಬೌಲಿಂಗ್ ಮಾಡಿದ ಅರ್ಜುನ್ 104 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ರಾಜಸ್ಥಾನದ ಇನ್ನಿಂಗ್ಸ್ ಅನ್ನು ಮುಕ್ತಾಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರಲ್ಲೂ ಅರ್ಜುನ್ ಪಡೆದ 3 ವಿಕೆಟ್​ಗಳೂ ಕೂಡ ಪ್ರಮುಖ ಆಟಗಾರರದ್ದೇ ಆಗಿದ್ದವು ಎಂಬುದು ಇಲ್ಲಿ ವಿಶೇಷ.

ಅರ್ಜುನ್ ತಮ್ಮ ಮೊದಲ ವಿಕೆಟ್ ರೂಪದಲ್ಲಿ ರಾಜಸ್ಥಾನದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮಹಿಪಾಲ್ ಲೊಮ್ರೋರೊ (63) ವಿಕೆಟ್ ಪಡೆದರೆ, ಎರಡನೇ ವಿಕೆಟ್ ರೂಪದಲ್ಲಿ ಸಲ್ಮಾನ್ ಖಾನ್ (40) ಅವರ ವಿಕೆಟ್‌ ಪಡೆದರು. ನಂತರ ಕೊನೆಯ ದಿನ 11ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಅನಿಕೇತ್ ಚೌಧರಿ (38) ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದರೂ, 10 ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅರಾಫತ್ ಖಾನ್ ಅವರೊಂದಿಗೆ 98 ರನ್ ಜೊತೆಯಾಟವನ್ನು ಚೌಧರಿ ಹಂಚಿಕೊಂಡಿದ್ದರು.

3. ಗೋವಾಕ್ಕೆ 3 ಅಂಕ

ಅರ್ಜುನ್ ಸೇರಿದಂತೆ ತಂಡದ ಆಟಗಾರರ ಈ ಪ್ರದರ್ಶನದ ಆಧಾರದ ಮೇಲೆ ಗೋವಾ ರಾಜಸ್ಥಾನದ ಮೊದಲ ಇನ್ನಿಂಗ್ಸ್ ಅನ್ನು 456 ರನ್‌ಗಳಿಗೆ ಅಂತ್ಯಗೊಳಿಸಿತ್ತು. ಗೋವಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 547 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಈ ಮೂಲಕ 91 ರನ್‌ಗಳ ಮುನ್ನಡೆ ಸಾಧಿಸಿದ್ದು, ಪಂದ್ಯ ಡ್ರಾ ಆಗಿದ್ದರೂ 3 ಅಂಕ ಗಳಿಸಿದೆ. ಗೋವಾದ ಮುಂದಿನ ಪಂದ್ಯವು ಡಿಸೆಂಬರ್ 20 ರಿಂದ ಜಾರ್ಖಂಡ್ ವಿರುದ್ಧ ನಡೆಯಲಿದೆ ಮತ್ತು ಅರ್ಜುನ್ ಇದೇ ರೀತಿಯ ಆಲ್‌ರೌಂಡ್ ಪ್ರದರ್ಶನವನ್ನು ಮುಂದುವರಿಸಬೇಕೆಂದು ಸಚಿನ್ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:16 am, Sat, 17 December 22

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು