7 ಆಟಗಾರರು ಖಾತೆಯನ್ನೇ ತೆರೆಯಲಿಲ್ಲ; 25 ರನ್‌ಗಳಿಗೆ ಆಲೌಟ್..! ರಣಜಿಯಲ್ಲಿ ನಡೆಯಿತು ವಿಚಿತ್ರ ಪಂದ್ಯ

Ranji Trophy 2022: ಎರಡನೇ ಇನ್ನಿಂಗ್ಸ್‌ನಲ್ಲಿ ನಾಗಾಲ್ಯಾಂಡ್‌ ತಂಡದ ಬ್ಯಾಟಿಂಗ್ ಎಷ್ಟು ಕೆಟ್ಟದಾಗಿತ್ತು ಎಂದರೆ ತಂಡದ ಏಳು ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

7 ಆಟಗಾರರು ಖಾತೆಯನ್ನೇ ತೆರೆಯಲಿಲ್ಲ; 25 ರನ್‌ಗಳಿಗೆ ಆಲೌಟ್..! ರಣಜಿಯಲ್ಲಿ ನಡೆಯಿತು ವಿಚಿತ್ರ ಪಂದ್ಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Dec 16, 2022 | 5:01 PM

ಉತ್ತರಾಖಂಡ ಕ್ರಿಕೆಟ್ ತಂಡ ಪ್ರಸಕ್ತ ಸಾಲಿನ ರಣಜಿ ಟ್ರೋಫಿಯನ್ನು (Ranji Trophy) ಅದ್ಧೂರಿಯಾಗಿ ಆರಂಭಿಸಿದೆ. ಉತ್ತರಾಖಂಡ ತಂಡ ಎ ಗುಂಪಿನ ಮೊದಲ ಪಂದ್ಯದಲ್ಲಿ ನಾಗಾಲ್ಯಾಂಡ್ ತಂಡವನ್ನು 174 ರನ್‌ಗಳಿಂದ ಸೋಲಿಸುವುದರೊಂದಿಗೆ ಗೆಲುವಿನ ಶುಭಾರಂಭ ಮಾಡಿದೆ. ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ನಾಗಾಲ್ಯಾಂಡ್ ಅತ್ಯಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆಗುವುದರೊಂದಿಗೆ ಮುಜುಗರದ ಸೋಲಿಗೆ ತುತ್ತಾಗಿದೆ. ಈ ಪಂದ್ಯದಲ್ಲಿ ನಾಗಾಲ್ಯಾಂಡ್‌ ಗೆಲುವಿಗೆ ಕೇವಲ 200 ರನ್‌ಗಳ ಅಗತ್ಯವಿತ್ತು. ಆದರೆ ಈ ಗುರಿಯನ್ನು ಸಾಧಿಸುವುದು ಹಾಗಿರಲಿ, ಪಂದ್ಯದ ಕೊನೆಯ ದಿನವಾದ ಶುಕ್ರವಾರ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಇಡೀ ತಂಡ ಕೇವಲ 25 ರನ್‌ಗಳಿಗೆ ಆಲೌಟ್ ಆಯಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಉತ್ತರಾಖಂಡ ಮೊದಲ ಇನಿಂಗ್ಸ್‌ನಲ್ಲಿ 282 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನಾಗಾಲ್ಯಾಂಡ್ ತಂಡ 389 ರನ್ ಗಳಿಸಿ, 107 ರನ್​ಗಳ ಮುನ್ನಡೆ ಸಾಧಿಸಿತು. ಇದಕ್ಕುತ್ತರವಾಗಿ ಉತ್ತರಾಖಂಡ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಏಳು ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿ, ನಾಗಾಲ್ಯಾಂಡ್​ಗೆ 200 ರನ್​ಗಳ ಗೆಲುವಿನ ಟಾರ್ಗೆಟ್ ನೀಡಿತು. ಆದರೆ ನಾಗಾಲ್ಯಾಂಡ್​ಗೆ ಈ ಸ್ಕೋರ್​ನ ಸಮೀಪಕ್ಕೂ ತಲುಪಲು ಸಾಧ್ಯವಾಗಲಿಲ್ಲ.

IND vs BAN: ಟೆಸ್ಟ್ ವೃತ್ತಿಜೀವನದ ವೇಗದ ಶತಕ ಸಿಡಿಸಿದ ಪೂಜಾರ..! ಬಾಂಗ್ಲಾಕ್ಕೆ 512 ರನ್​ಗಳ ಟಾರ್ಗೆಟ್

2. 7 ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯಲಿಲ್ಲ

ಎರಡನೇ ಇನ್ನಿಂಗ್ಸ್‌ನಲ್ಲಿ ನಾಗಾಲ್ಯಾಂಡ್‌ ತಂಡದ ಬ್ಯಾಟಿಂಗ್ ಎಷ್ಟು ಕೆಟ್ಟದಾಗಿತ್ತು ಎಂದರೆ ತಂಡದ ಏಳು ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ತಂಡದ ಪರ 10 ರನ್ ಗಳಿಸಿದ ನಗಾಹೊ ಚಿಶಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಜೋಶುವಾ ಒಜುಕುಮ್ ಮತ್ತು ಇಮ್ಲಿವಾಟಿ ಲೆಮ್ತೂರ್ ತಲಾ ಏಳು ರನ್ ಗಳಿಸಿದರೆ, ನಾಯಕ ಹೊಕೈಟೊ ಜಿಮೊಮಿ ಒಂದು ರನ್ ಗಳಿಸಿದರು. ಇವರನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ.

ಇದಕ್ಕೆ ತದ್ವೀರುದ್ದವಾಗಿ, ಉತ್ತರಾಖಂಡ ತಂಡದ ಇಬ್ಬರೇ ಇಬ್ಬರು ಬೌಲರ್‌ಗಳು ಸಂಪೂರ್ಣ ನಾಗಾಲ್ಯಾಂಡ್ ತಂಡವನ್ನು ಪೆವಿಲಿಯನ್‌ಗಟ್ಟಿದರು. ಮಯಾಂಕ್ ಮಿಶ್ರಾ ಒಂಬತ್ತು ಓವರ್​ಗಳಲ್ಲಿ ನಾಲ್ಕು ರನ್ ನೀಡಿ ಐದು ವಿಕೆಟ್ ಪಡೆದರೆ, ಸ್ವಪ್ನಿಲ್ ಸಿಂಗ್ ಒಂಬತ್ತು ಓವರ್​ಗಳಲ್ಲಿ 21 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಇನ್ನುಳಿದಂತೆ ಆರಂಭಿಕ ಆಟಗಾರ ಯುಗಂಧರ್ ಸಿಂಗ್ ಖಾತೆ ತೆರೆಯದೆ ರನೌಟ್ ಆದರು.

3. ಎರಡನೇ ಇನ್ನಿಂಗ್ಸ್​ನಲ್ಲಿ ಮಂಕಾದ ನಾಗಾಲ್ಯಾಂಡ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರಾಖಂಡ ತಂಡದ ಪರ ಕುನಾಲ್ ಚಾಂಡೇಲಾ 129 ಎಸೆತಗಳನ್ನು ಎದುರಿಸಿ 16 ಬೌಂಡರಿಗಳ ನೆರವಿನಿಂದ 92 ರನ್ ಗಳಿಸಿದರೆ, ದಿಕ್ಷಾಂಶು ನೇಗಿ 83 ರನ್‌ಗಳ ಇನಿಂಗ್ಸ್‌ ಆಡಿದರು. ಈ ಇನ್ನಿಂಗ್ಸ್‌ನಲ್ಲಿ 126 ಎಸೆತಗಳನ್ನು ಎದುರಿಸಿದ ನೇಗಿ 13 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು. ಅಖಿಲ್ ರಾವತ್ ಕೂಡ 76 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು. ಈ ಮೂವರ ಆಟದಿಂದಾಗಿ ಉತ್ತರಾಖಂಡ ಮೊದಲ ಇನಿಂಗ್ಸ್‌ನಲ್ಲಿ 282 ರನ್ ಗಳಿಸಿತ್ತು.

ಈ ಟಾರ್ಗೆಟ್ ಬೆನ್ನಟ್ಟಿದ ನಾಗಾಲ್ಯಾಂಡ್ ಪರ ಶ್ರೀಕಾಂತ್ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ್ದರು. 368 ಎಸೆತಗಳನ್ನು ಎದುರಿಸಿದ ಶ್ರೀಕಾಂತ್ 14 ಬೌಂಡರಿಗಳ ಸಹಾಯದಿಂದ 161 ರನ್ ಗಳಿಸಿದರು. ಇವರಲ್ಲದೆ ಯುಗಂಧರ್ ಸಿಂಗ್ 73 ರನ್ ಗಳಿಸಿದರು. ಉತ್ತರಾಖಂಡ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಿಯಾಂಶು ಖಂಡೂರಿ 106 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 73 ರನ್ ಗಳಿಸಿದರೆ, ಸ್ವಪ್ನಿಲ್ ಸಿಂಗ್ ಅಜೇಯ 88 ರನ್ ಗಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Fri, 16 December 22

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು