IND vs BAN: ಟೆಸ್ಟ್ ವೃತ್ತಿಜೀವನದ ವೇಗದ ಶತಕ ಸಿಡಿಸಿದ ಪೂಜಾರ..! ಬಾಂಗ್ಲಾಕ್ಕೆ 512 ರನ್‌ಗಳ ಟಾರ್ಗೆಟ್
Cheteshwar Pujara: ಬರೋಬ್ಬರಿ ಮೂರು ವರ್ಷಗಳ ನಂತರ ಅಂದರೆ 1443 ದಿನಗಳ ಬಳಿಕ ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದಾರೆ.
ಬರೋಬ್ಬರಿ ಮೂರು ವರ್ಷಗಳ ನಂತರ ಅಂದರೆ 1443 ದಿನಗಳ ಬಳಿಕ ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (Cheteshwar Pujara) ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ (India and Bangladesh) ಎರಡನೇ ಇನ್ನಿಂಗ್ಸ್‌ನಲ್ಲಿ ಪೂಜಾರ ತಮ್ಮ ಟೆಸ್ಟ್ ವೃತ್ತಿಜೀವನದ ಅತಿ ವೇಗದ ಶತಕ ಸಿಡಿಸಿದ್ದಾರೆ. ಪೂಜಾರ ಶತಕ ಪೂರೈಸಿದ ಕೂಡಲೇ ಭಾರತ (team india) ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಬಾಂಗ್ಲಾದೇಶಕ್ಕೆ 512 ರನ್‌ಗಳ ಟಾರ್ಗೆಟ್ ನೀಡಲಾಗಿದೆ. ಈ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ ಶತಕದಂಚಿನಲ್ಲಿ ಎಡವಿದ್ದ ಪೂಜಾರ 90 ರನ್ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದ ಪೂಜಾರ, 2019ರ ನಂತರ ತಮ್ಮ ಮೊದಲ ಟೆಸ್ಟ್ ಶತಕ ಸಿಡಿಸಿದ್ದಾರೆ.
ತಮ್ಮ ಇನ್ನಿಂಗ್ಸ್‌ನಲ್ಲಿ ಪೂಜಾರ 130 ಎಸೆತಗಳಲ್ಲಿ 13 ಬೌಂಡರಿ ಸಹಿತ ಅಜೇಯ 102 ರನ್ ಗಳಿಸಿದರು. ಇದರೊಂದಿಗೆ ಭಾರತ ತನ್ನ ಇನ್ನಿಂಗ್ಸ್ ಕೂಡ ಡಿಕ್ಲೇರ್ ಮಾಡಿಕೊಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಎರಡು ವಿಕೆಟ್ ನಷ್ಟಕ್ಕೆ 258 ರನ್ ಗಳಿಸುವುದರೊಂದಿಗೆ ಬಾಂಗ್ಲಾ ಗೆಲುವಿಗೆ 512 ರನ್‌ಗಳ ಟಾರ್ಗೆಟ್ ನೀಡಿದೆ.
Innings Break!#TeamIndia declare the innings on 258/2, with a lead of 512 runs.@ShubmanGill (110) & @cheteshwar1 (102*) with fine centuries in the innings.
Scorecard – https://t.co/GUHODOYOh9 #BANvIND pic.twitter.com/BUsNecqD6O
— BCCI (@BCCI) December 16, 2022
2. 52 ಇನ್ನಿಂಗ್ಸ್‌ಗಳ ನಂತರ ಶತಕ
ಈ ಶತಕದ ಮೂಲಕ ಪೂಜಾರ 52 ಇನ್ನಿಂಗ್ಸ್‌ಗಳ ನಂತರ ತಮ್ಮ ಶತಕದ ಬರ ನೀಗಿಸಿಕೊಂಡಿದ್ದಾರೆ. ಅಲ್ಲದೆ ಇದು ಅವರ ಟೆಸ್ಟ್ ವೃತ್ತಿ ಬದುಕಿನ 19ನೇ ಶತಕವೂ ಆಗಿದೆ. ಕೊನೆಯದಾಗಿ 2019 ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೂಜಾರ ಶತಕ ಬಾರಿಸಿದ್ದರು. ಅಂದಿನಿಂದ ಅವರು ಶತಕಕ್ಕಾಗಿ ಹಾತೊರೆಯುತ್ತಿದ್ದರು.
IND vs BAN: ಬಾಂಗ್ಲಾ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಶುಭ್ಮನ್ ಗಿಲ್..!
3. ಗಿಲ್ ಕೂಡ ಶತಕ
ಈ ಪಂದ್ಯದಲ್ಲಿ ಪೂಜಾರ ಹೊರತಾಗಿ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕೂಡ ಶತಕ ಸಿಡಿಸಿದ್ದರು. ಇಬ್ಬರೂ ಶತಕದ ಜೊತೆಯಾಟದ ಮೂಲಕ ಭಾರತವನ್ನು ಬಲಿಷ್ಠ ಸ್ಥಿತಿಗೆ ತಂದರು. ಇವರಿಬ್ಬರು ಎರಡನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟ ನೀಡಿದರು. ಗಿಲ್ ಒಟ್ಟು 183 ಸ್ಕೋರ್‌ನಲ್ಲಿ ಔಟಾದರು. ಇದರ ನಂತರ ಪೂಜಾರ ಅವರ ಶತಕಕ್ಕಾಗಿ ಕಾಯಲಾಗಿತ್ತು. ಇಲ್ಲಿಂದ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪೂಜಾರ, ವಿರಾಟ್ ಕೊಹ್ಲಿ ಜೊತೆ ಅರ್ಧಶತಕದ ಜೊತೆಯಾಟವಾಡಿದರು. ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 19 ರನ್ ಗಳಿಸಿ ಅಜೇಯರಾಗಿ ಉಳಿದರು.
He missed out on the three figure mark in the first innings, but gets there in style in the second innings.
A brilliant CENTURY by @cheteshwar1 off 130 deliveries.
Scorecard – https://t.co/GUHODOYOh9 #BANvIND pic.twitter.com/ITmYuDpYIp
— BCCI (@BCCI) December 16, 2022
ರೋಹಿತ್ ಶರ್ಮಾ ಗಾಯಗೊಂಡಿದ್ದರಿಂದ ಈ ಪಂದ್ಯಕ್ಕೆ ಕೆಎಲ್ ರಾಹುಲ್ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಹೀಗಾಗಿ ಉಪನಾಯಕತ್ವವನ್ನು ಪೂಜಾರಗೆ ನೀಡಲಾಗಿದೆ. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡಿರುವ ಈ ಬಲಗೈ ಬ್ಯಾಟ್ಸ್‌ಮನ್ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.
4. ತಂಡದಿಂದಲೇ ಕೈಬಿಡಲಾಯಿತು
ಈ ಹಿಂದೆ ಪೂಜಾರ ಕೂಡ ಕೆಟ್ಟ ಫಾರ್ಮ್‌ನಿಂದ ಪರದಾಡಿದರು. ಬಹಳ ದಿನಗಳಿಂದ ಅವರ ಬ್ಯಾಟ್ ಸೈಲೆಂಟ್ ಆಗಿತ್ತು. ಈ ಕಾರಣಕ್ಕಾಗಿ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ಈ ಹಿಂದೆ ಶ್ರೀಲಂಕಾ, ಭಾರತ ಪ್ರವಾಸ ಕೈಗೊಂಡಾಗ ಪೂಜಾರ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಆದರೆ ತಂಡಕ್ಕೆ ಮರಳುವ ಸಲುವಾಗಿ ಹಲವು ಕಸರತ್ತು ಮಾಡಿದ ಪೂಜಾರ ಕೌಂಟಿ ಕ್ರಿಕೆಟ್‌ನತ್ತ ಮುಖಮಾಡಿದರು. ಅಲ್ಲಿ ಸತತ ಶತಕಗಳನ್ನು ಬಾರಿಸಿದ ಪೂಜಾರಗೆ ಮತ್ತೊಮ್ಮೆ ಟೀಂ ಇಂಡಿಯಾದ ಭಾಗ್ಯದ ಬಾಗಿಲು ತೆರೆದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Fri, 16 December 22