- Kannada News Photo gallery Cricket photos Saurashtra player jay gohil hits double century in ranji trophy debut match
ಅರ್ಜುನ್ರಂತೆಯೇ ಚೊಚ್ಚಲ ರಣಜಿ ಪಂದ್ಯವನ್ನಾಡಿ ಭರ್ಜರಿ ದ್ವಿಶತಕ ಸಿಡಿಸಿದ ಸೌರಾಷ್ಟ್ರ ಆಟಗಾರ..!
Ranji Trophy: ಅಸ್ಸಾಂನ ಎಸಿಎ ಸ್ಟೇಡಿಯಂನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಜೈ ಗೋಹಿಲ್, 246 ಎಸೆತಗಳಲ್ಲಿ 227 ರನ್ ಗಳಿಸಿದರೆ, ಕೇವಲ 216 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಮಿಂಚಿದರು.
Updated on:Dec 15, 2022 | 5:15 PM

ಒಂದೆಡೆ ಅರ್ಜುನ್ ತೆಂಡೂಲ್ಕರ್ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ಮಿಂಚಿದರೆ, ಅವರಂತೆಯೇ ಮತ್ತೊಬ್ಬ ಯುವ ಆಟಗಾರ ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತ ಸಾಧನೆ ಮಾಡಿದ್ದಾರೆ. ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಸೌರಾಷ್ಟ್ರ ಬ್ಯಾಟ್ಸ್‌ಮನ್ ಜೈ ಗೋಹಿಲ್, ಅಸ್ಸಾಂ ವಿರುದ್ಧ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಅಸ್ಸಾಂನ ಎಸಿಎ ಸ್ಟೇಡಿಯಂನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಜೈ ಗೋಹಿಲ್, 246 ಎಸೆತಗಳಲ್ಲಿ 227 ರನ್ ಗಳಿಸಿದರೆ, ಕೇವಲ 216 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಮಿಂಚಿದರು.

ಚೊಚ್ಚಲ ರಣಜಿ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಸೌರಾಷ್ಟ್ರದ ಮೊದಲ ಆಟಗಾರ ಜೈ ಗೋಹಿಲ್. ಹಾಗೆಯೇ ಅಮೋಲ್ ಮಜುಂದಾರ್, ಗುಂಡಪ್ಪ ವಿಶ್ವನಾಥ್ ಅವರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಸೇರಿದಂತೆ ಇನ್ನೂ 12 ಆಟಗಾರರು ಅವರಿಗಿಂತ ಮೊದಲು ಈ ಸಾಧನೆ ಮಾಡಿದ್ದಾರೆ.

ಜೈ ಗೋಹಿಲ್ ಹೊರತಾಗಿ, ಹಾರ್ವಿಕ್ ದೇಸಾಯಿ ಕೂಡ 108 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಇನ್ನಿಂಗ್ಸ್ ಆಧಾರದ ಮೇಲೆ ಸೌರಾಷ್ಟ್ರ 487 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಗೋಹಿಲ್ ಇದುವರೆಗೆ 3 ಲಿಸ್ಟ್ ಎ ಪಂದ್ಯಗಳಲ್ಲಿ 95 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, 8 ಟಿ20 ಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 60 ರನ್ ಹೊರಬಂದಿವೆ.
Published On - 5:15 pm, Thu, 15 December 22




