FIFA World Cup 2022: ಮೆಸ್ಸಿಗೆ ಇಂಜುರಿ! ಫ್ರಾನ್ಸ್ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಲಭ್ಯ..?
Lionel Messi: ಮಂಡಿರಜ್ಜು (hamstring) ಸಮಸ್ಯೆಯಿಂದ ಬಳಲುತ್ತಿರುವ ಮೆಸ್ಸಿ ಫೈನಲ್ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನವಿದೆ ಎಂದು ವರದಿಯಾಗಿದೆ.
ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಅಂತಿಮ ಹಂತ ತಲುಪಿದೆ. ಡಿ. 18 ಭಾನುವಾರದಂದು ನಡೆಯಲ್ಲಿರುವ ಫೈನಲ್ ಕಾಳಗದಲ್ಲಿ ಅರ್ಜೆಂಟೀನಾ ಹಾಗೂ ಹಾಲಿ ಚಾಂಪಿಯನ್ ಫ್ರಾನ್ಸ್ (argentina vs france) ಮುಖಾಮುಖಿಯಾಗಲು ಸಿದ್ಧವಾಗಿವೆ. ಸೆಮಿಫೈನಲ್ನಲ್ಲಿ ಕ್ರೊವೇಷ್ಯಾ ತಂಡವನ್ನು ಮಣಿಸಿರುವ ಅರ್ಜೆಂಟೀನಾ ತಂಡ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸ್ಸಿನೊಂದಿಗೆ ಅಖಾಡಕ್ಕಿಳಿಯುತ್ತಿದೆ. ಇತ್ತ ಮೊರಾಕೋ ತಂಡವನ್ನು ಮಣಿಸಿದ ಫ್ರಾನ್ಸ್, ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸೆಣಸಾಡಲಿದೆ. ಆದರೆ ಈ ನಡುವೆ ಅರ್ಜೆಂಟೀನಾ ಪಾಳಯದಿಂದ ಕೇಳಿಬರುತ್ತಿರುವ ಸುದ್ದಿಯಿಂದ ಎಲ್ಲಾ ಅಭಿಮಾನಿಗಳು ಆತಂಕಗೊಂಡಿದ್ದಾರೆ. ವಾಸ್ತವವಾಗಿ ಅರ್ಜೆಂಟೀನಾ ತಂಡದ ಜೀವನಾಡಿ ಹಾಗೂ ತಂಡದ ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಇಂಜುರಿಯಿಂದಾಗಿ ಫೈನಲ್ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ.
ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷ್ಯಾ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸುವಲ್ಲಿ ಅರ್ಜೆಂಟೀನಾ ತಂಡ ಯಶಸ್ವಿಯಾಗಿತ್ತು. ನಾಯಕ ಮೆಸ್ಸಿ ಕೂಡ ಈ ಪಂದ್ಯದಲ್ಲಿ ಒಂದು ಗೋಲು ಭಾರಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ಮೆಸ್ಸಿ, ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯವೇ ನನ್ನ ಕೊನೆಯ ಪಂದ್ಯ ಎಂಬ ಹೇಳಿಕೆ ನೀಡಿದ್ದರು. ಹೀಗಾಗಿ ಮೆಸ್ಸಿಯ ಕೊನೆಯ ವಿಶ್ವಕಪ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರು. ಆದರೆ ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಮಂಡಿರಜ್ಜು (hamstring) ಸಮಸ್ಯೆಯಿಂದ ಬಳಲುತ್ತಿರುವ ಮೆಸ್ಸಿ ಫೈನಲ್ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನವಿದೆ ಎಂದು ವರದಿಯಾಗಿದೆ.
ಐಪಿಎಲ್ ತಂಡವನ್ನೇ ಖರೀದಿಸುವ ಸಾಮರ್ಥ್ಯ ಹೊಂದಿರುವ ಮೆಸ್ಸಿ ಎಷ್ಟು ಸಾವಿರ ಕೋಟಿಯ ಒಡೆಯ ಗೊತ್ತಾ?
2. ಅಭ್ಯಾಸಕ್ಕೆ ಗೈರು
ಇದಕ್ಕೆ ಪೂರಕವೆಂಬಂತೆ ಅರ್ಜೆಂಟೀನಾ ನಾಯಕ, ತಂಡದ ಆರಂಭಿಕ ಲೈನ್-ಅಪ್ ತರಬೇತಿಗೆ ಗೈರುಹಾಜರಾಗಿದ್ದರು. ಹೀಗಾಗಿ ಭಾನುವಾರ ಫ್ರಾನ್ಸ್ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮೆಸ್ಸಿ ಅಲಭ್ಯರಾಗುತ್ತಾರಾ ಎಂಬುದು ಅರ್ಜೆಂಟೀನಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
3. ವಿಶ್ವಕಪ್ ಫೈನಲ್ ಬಳಿಕ ಮೆಸ್ಸಿ ನಿವೃತ್ತಿ
ಮಾಧ್ಯಮ ವರದಿಗಳ ಪ್ರಕಾರ, ಅರ್ಜೆಂಟೀನಾದ ಮಾಧ್ಯಮ ಸಂಸ್ಥೆ ಡಿಯಾರಿಯೊ ಡಿಪೋರ್ಟಿವೊ ಓಲೆ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿರುವ ಮೆಸ್ಸಿ, ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಕೊನೆಗೊಳಿಸುತ್ತೇನೆ. ಈ ಸಾಧನೆ ನನಗೆ ಅತ್ಯಂತ ಖುಷಿ ನೀಡಿದೆ. ಅರ್ಜೆಂಟೀನಾ ಮತ್ತೊಮ್ಮೆ ವಿಶ್ವಕಪ್ ಫೈನಲ್ ತಲುಪಿದೆ. ಸತತ ಪ್ರಯತ್ನಗಳ ನಂತರ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ನಾವು ಇನ್ನೊಂದು ಹೆಜ್ಜೆ ಹಿಂದಿದ್ದೇವೆ. ಈ ಪ್ರಶಸ್ತಿ ಗೆಲ್ಲಲು ನಾವು ಎಲ್ಲಾ ಪ್ರಯತ್ನ ಮಾಡಲಿದ್ದೇವೆ ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ.
4. ಅದ್ಭುತ ಅಂತಾರಾಷ್ಟ್ರೀಯ ದಾಖಲೆ
2005ರಲ್ಲಿ ಅರ್ಜೆಂಟೀನಾ ಪರ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮೆಸ್ಸಿ, ಕಳೆದ 17 ವರ್ಷಗಳಲ್ಲಿ ಸಾಟಿಯಿಲ್ಲದ ಪ್ರದರ್ಶನ ನೀಡಿದ್ದಾರೆ. ಈ ಅನುಭವಿ ಆಟಗಾರ ಅರ್ಜೆಂಟೀನಾ ಪರ ಇದುವರೆಗೆ 96 ಗೋಲು ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಮೆಸ್ಸಿಯ ಸಾಧನೆಗೆ ಸಾಟಿಯೇ ಇಲ್ಲ. ಮೆಸ್ಸಿ 25 ವಿಶ್ವಕಪ್ ಪಂದ್ಯಗಳಲ್ಲಿ 19 ಗೋಲು/ಅಸಿಸ್ಟ್ ಗಳಿಸಿದ್ದಾರೆ. ಅಲ್ಲದೆ 10 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ವಿಶ್ವಕಪ್‌ನಲ್ಲಿ ಮೆಸ್ಸಿ, ಅರ್ಜೆಂಟೀನಾ ಪರ ಒಟ್ಟು 11 ಗೋಲುಗಳನ್ನು ಗಳಿಸಿದ್ದು, ಈ ದೇಶದ ಪರ ಅತಿ ಹೆಚ್ಚು ಗೋಲುಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ