ಫಿಫಾ ವಿಶ್ವಕಪ್ 2022 ರ ಫೈನಲ್ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆಯಲಿದೆ. ಮೊರಾಕೊ ವಿರುದ್ಧ ಗೆಲುವು ಸಾಧಿಸಿದ ಫ್ರಾನ್ಸ್ ಫೈನಲ್ಗೆ ಟಿಕೆಟ್ ಖಚಿತಪಡಿಸಿಕೊಂಡಿದೆ. ಆದರೆ, ಫಿಫಾ ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳಿಗೂ ಮುನ್ನ ಅತಿ ಹೆಚ್ಚು ಬಾರಿ ಫೈನಲ್ ಪಂದ್ಯಗಳನ್ನಾಡಿದ 3 ತಂಡಗಳ ವಿವರ ಇಂತಿದೆ.
ಫಿಪಾ ವಿಶ್ವಕಪ್ 8 ಬಾರಿ ಫೈನಲ್ ಪಂದ್ಯವನ್ನಾಡಿರುವ ಜರ್ಮನಿ ಈ ವಿಚಾರದಲ್ಲಿ ದಾಖಲೆ ನಿರ್ಮಿಸಿದೆ. ಅಲ್ಲದೆ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಎಂಬ ದಾಖಲೆಯನ್ನು ಹೊಂದಿದೆ. ಈ 8 ಫೈನಲ್‌ಗಳಲ್ಲಿ 4 ಬಾರಿ ಚಾಂಪಿಯನ್ ಆಗುವಲ್ಲಿ ಜರ್ಮನಿ ಯಶಸ್ವಿಯಾಗಿದೆ. 1954, 1974, 1990, 2014ರಲ್ಲಿ ಜರ್ಮನಿ ಈ ಸಾಧನೆ ಮಾಡಿದೆ.
ಜರ್ಮನಿಯ ನಂತರ ಬ್ರೆಜಿಲ್ 7 ಬಾರಿ ಫಿಫಾ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದೆ. ಇದರಲ್ಲಿ ಈ ತಂಡ 5 ಬಾರಿ ವಿಶ್ವ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಘಿದೆ. 1958, 1962, 1970, 1994 ಮತ್ತು 2002 ರಲ್ಲಿ ಬ್ರೆಜಿಲ್ ವಿಶ್ವ ವಿಜೇತ ತಂಡವಾಗಿತ್ತು.
ಅತಿ ಹೆಚ್ಚು ಫಿಫಾ ವಿಶ್ವಕಪ್ ಫೈನಲ್‌ಗಳನ್ನು ಆಡಿದ ವಿಷಯದಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ. ಈ ತಂಡ 6 ಬಾರಿ ಫೈನಲ್‌ನಲ್ಲಿ ಆಡಿದ್ದು, 4 ಬಾರಿ ಗೆಲುವು ಸಾಧಿಸಿದೆ. 1934, 1938, 1982, 2006ರಲ್ಲಿ ಇಟಲಿ ಈ ಸಾಧನೆ ಮಾಡಿತ್ತು.
ಅರ್ಜೆಂಟೀನಾ ತಂಡ ಈ ಬಾರಿ 6ನೇ ಫೈನಲ್ ಪಂದ್ಯ ಆಡುತ್ತಿದೆ. ಇದರಲ್ಲಿ ಆಡಿದ ಮೊದಲ 5 ಫಿಫಾ ವಿಶ್ವಕಪ್ ಫೈನಲ್‌ಗಳಲ್ಲಿ, ಈ ತಂಡ 1978 ಮತ್ತು 1986 ರಲ್ಲಿ 2 ಬಾರಿ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಫ್ರಾನ್ಸ್ ತಂಡ ಈ ಬಾರಿ ನಾಲ್ಕನೇ ಬಾರಿಗೆ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಲಿದೆ. ಇದಕ್ಕೂ ಮುನ್ನ 1998, 2006 ಮತ್ತು 2018ರಲ್ಲಿ ಫೈನಲ್ ಆಡಿತ್ತು. ಆದರೆ, ಫ್ರಾನ್ಸ್ ಕೇವಲ ಎರಡು ಫೈನಲ್‌ಗಳಲ್ಲಿ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, 1998 ಮತ್ತು 2018 ರ ಫ್ರಾನ್ಸ್ ವಿಶ್ವಕಪ್ ಫೈನಲ್ ಗೆದ್ದಿದೆ.
Published On - 6:04 pm, Thu, 15 December 22