Tokyo Paralympics 2020: ಮುಂದುವರೆದ ಭಾರತದ ಪದಕದ ಬೇಟೆ: ಶೂಟಿಂಗ್​ನಲ್ಲಿ ಕಂಚು ಗೆದ್ದ ಸಿಂಗರಾಜ್

ಈವರೆಗೆ ಭಾರತ ಒಟ್ಟು ಎರಡು ಚಿನ್ನ ಗೆದ್ದಿದ್ದು, ನಾಲ್ಕು ಬೆಳ್ಳಿ ಮತ್ತು ಎರಡು ಕಂಚು ತಮ್ಮದಾಗಿಸಿದೆ. ಈ ಮೂಲಕ ಒಟ್ಟು ಎಂಟು ಪದಕವನ್ನು ಮುಡಿಗೇರಿಸಿಕೊಂಡಿದೆ.

Tokyo Paralympics 2020: ಮುಂದುವರೆದ ಭಾರತದ ಪದಕದ ಬೇಟೆ: ಶೂಟಿಂಗ್​ನಲ್ಲಿ ಕಂಚು ಗೆದ್ದ ಸಿಂಗರಾಜ್
singhraj
Edited By:

Updated on: Aug 31, 2021 | 12:05 PM

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಇಂದು ಪುರುಷರ 10 ಮೀಟರ್ ಏರ್ ಪಿಸ್ತೂಲ್ಎಸ್​ಹೆಚ್​1 ಸ್ಪರ್ಧೆಯಲ್ಲಿ ಭಾರತದ ಸಿಂಗರಾಜ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಫೈನಲ್​ನಲ್ಲಿ 216.8 ಅಂಕ ಸಂಪಾದಿಸಿ ಮೂರನೇ ಸ್ಥಾನ ಪಡೆದುಕೊಂಡು ಸಿಂಗರಾಜ್ ಅವರ ಕಂಚಿನ ಪದಕ ಗೆದ್ದರು. ಭಾರತದ ಇನ್ನೋರ್ವ ಶೂಟರ್ ಮನೀಶ್ 7ನೇ ಸ್ಥಾನ ಪಡೆದರು.

 

ಫೈನಲ್ ನಲ್ಲಿ ಒಟ್ಟು 216.8 ಅಂಕಗಳನ್ನು ಗಳಿಸಿದ ಸಿಂಗ್ ರಾಜ್ ಮೂರನೇ ಸ್ಥಾನ ಪಡೆದರೆ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದ ಭಾರತದ ಇನ್ನೋರ್ವ ಶೂಟರ್ ಮನೀಶ್ ಫೈನಲ್ ನಲ್ಲಿ ಒಟ್ಟು 135.8 ಅಂಕಗಳನ್ನು ಗಳಿಸಿ 7ನೇ ಸ್ಥಾನ ಪಡೆದರು.

ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದಿದ್ದ ಸಿಂಗ್ ರಾಜ್ ಫೈನಲ್ ನ ಮೊದಲ ಹಂತದಲ್ಲಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರುವ ಮೂಲಕ ಉತ್ತಮ ಆರಂಭ ಪಡೆದಿದ್ದರು. ಈವರೆಗೆ ಭಾರತ ಒಟ್ಟು ಎರಡು ಚಿನ್ನ ಗೆದ್ದಿದ್ದು, ನಾಲ್ಕು ಬೆಳ್ಳಿ ಮತ್ತು ಎರಡು ಕಂಚು ತಮ್ಮದಾಗಿಸಿದೆ. ಈ ಮೂಲಕ ಒಟ್ಟು ಎಂಟು ಪದಕವನ್ನು ಮುಡಿಗೇರಿಸಿಕೊಂಡಿದೆ.

Published On - 11:45 am, Tue, 31 August 21