Tokyo Paralympics: ಇತಿಹಾಸ ನಿರ್ಮಿಸಿದ ಭಾವಿನಾ ಪತಿ ಭಾರತದ ವಿಶ್ವಕಪ್ ತಂಡದ ಸದಸ್ಯ ಎಂಬುದು ನಿಮಗೆ ಗೊತ್ತೇ?
Bhavina Patel: ಭಾವಿನಾ ಅವರ ಈ ವಿಶೇಷ ಸಾಧನೆಗೆ ಅವರ ಪತಿ ನಿಕುಲ್ ಪಟೇಲ್ ಕೂಡ ಕಾರಣವಂತೆ. ಆದರೆ, ನಿಮಗೊಂದು ವಿಚಾರ ಗೊತ್ತೇ? ಭಾವಿನಾ ಅವರ ಪತಿ ನಿಕುಲ್ ಕೂಡ ಒಬ್ಬ ಕ್ರೀಡಾಪಟು.
ಟೋಕಿಯೊದಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್ 2020 (Tokyo Paralympics 2020) ಕ್ರೀಡಾಕೂಟದಲ್ಲಿ ಭಾರತ ಅಮೋಘ ಪ್ರದರ್ಶನ ನೀಡುತ್ತಿದೆ. ಹೊಸ ಹೊಸ ಇತಿಹಾಸ ನಿರ್ಮಿಸುತ್ತಿರುವ ಭಾರತದ ಪ್ಯಾರಾಥ್ಲೆಟಿಕ್ಗಳು ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ಭಾರತಕ್ಕೆ ಚೊಚ್ಚಲ ಪದಕ ದಕ್ಕಿದ್ದು ಟೇಬಲ್ ಟೆನಿಸ್ನಲ್ಲಿ. ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ (Bhavina Patel) ಅವರು ಬೆಳ್ಳೆ ಪದಕಕ್ಕೆ ಕೊರಳೊಡ್ಡಿದರು.
ಟೇಬಲ್ ಟೆನಿಸ್ನ ಫೈನಲ್ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 0-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಬೆಳ್ಳಿಗೆ ತೃಪ್ತಪಟ್ಟರು. ಆದರೆ, ಪ್ಯಾರಾಲಿಂಪಿಕ್ಸ್ನ ಟೇಬಲ್ ಟೆನಿಸ್ನಲ್ಲಿ ಭಾರತ ಈವರೆಗೆ ಫೈನಲ್ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಫೈನಲ್ಗೆ ತಲುಪಿ ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆಯಾಗಿದೆ.
ಭಾವಿನಾ ಅವರ ಈ ವಿಶೇಷ ಸಾಧನೆಗೆ ಅವರ ಪತಿ ನಿಕುಲ್ ಪಟೇಲ್ ಕೂಡ ಕಾರಣವಂತೆ. ಆದರೆ, ನಿಮಗೊಂದು ವಿಚಾರ ಗೊತ್ತೇ? ಭಾವಿನಾ ಅವರ ಪತಿ ನಿಕುಲ್ ಕೂಡ ಒಬ್ಬ ಕ್ರೀಡಾಪಟು. ಅವರು 2002ರ ಅಂಡರ್- 19 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡದ ಸದಸ್ಯರಾಗಿದ್ದರು.
ಹೌದು, ಪಾರ್ಥಿವ್ ಪಟೇಲ್ ನಾಯಕತ್ವದ 2002 ಅಂಡರ್- 19 ವಿಶ್ವಕಪ್ನಲ್ಲಿ ಭಾವಿನಾ ಅವರ ಪತಿ ನಿಕುಲ್ ಕೂಡ ಸ್ಥಾನ ಪಡೆದುಕೊಂಡಿದ್ದರು. ಆದರೆ, ಅವರಿಗೆ ಆಡಲು ಅವಕಾಶ ಸಿಗಲಿಲ್ಲ. ಇವರು ಮಾಜಿ ಸ್ಟೇಟ್ ಲೆವೆಲ್ ಕ್ರಿಕೆಟರ್ ಆಗಿದ್ದಾರೆ. ಬಳಿಕ ಫ್ಯಾಮಿಲಿ ಬ್ಯುಸಿನೆಸ್ ನೋಡುಕೊಳ್ಳುವುದರಲ್ಲಿ ಬ್ಯುಸಿಯಾದ ನಿಕುಲ್ ಕ್ರಿಕೆಟ್ನಿಂದ ದೂರ ಉಳಿದರು.
2002 ಅಂಡರ್- 19 ವಿಶ್ವಕಪ್ ಟೂರ್ನಿ ನ್ಯೂಜಿಲೆಂಡ್ನಲ್ಲಿ ನಡೆದಿತ್ತು. ಪಾರ್ಥಿವ್ ಪಟೇಲ್ ಭಾರತ ತಂಡದ ನಾಯಕನಾಗಿದ್ದರು. ಇದೇ ತಂಡದಲ್ಲಿ ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಮನ್ವಿಂದರ್ ಬಿಸ್ಲಾ ಕೂಡ ಇದ್ದರು. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಿರಿಯರು ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿ ಫೈನಲ್ನಲ್ಲಿ ಸೋತರು.
Avani Lekhara: ಚಿನ್ನದ ಹುಡುಗಿ ಅವನಿಗೆ 3 ಕೋಟಿ ಬಹುಮಾನ ಘೋಷಣೆ; ಮಹೀಂದ್ರಾದಿಂದ ವಿಶೇಷ ಉಡುಗೊರೆ
IND vs ENG: 4ನೇ ಟೆಸ್ಟ್ನಲ್ಲಿ ಸೂರ್ಯಕುಮಾರ್ ಯಾದವ್ ಆಡುವುದಿಲ್ಲ! ಅಶ್ವಿನ್ಗೆ ಅವಕಾಶ ಖಚಿತ; ಆಕಾಶವಾಣಿ
(Tokyo Paralympics 2020 Bhavina Patels husband Nikul Patel was shortlisted for 2002 U-19 cricket World Cu)