AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PKL: ಪ್ರೊ ಕಬಡ್ಡಿ ಲೀಗ್‌ ವಿದೇಶಿ ಆಟಗಾರರ ಹರಾಜು; ಯಾರ್ಯಾರು ಯಾವ ತಂಡಕ್ಕೆ? ಬೆಂಗಳೂರು ಬುಲ್ಸ್ ಸೇರಿದವರ ಪಟ್ಟಿ ಹೀಗಿದೆ

PKL: ಅತ್ಯಂತ ದುಬಾರಿ ಎಂದು ಸಾಬೀತಾದ ಇರಾನ್‌ನ ಮೊಹಮ್ಮದ್ರೆಜಾ ಶಾಡ್ಲೋಯ್ ಚಿಯಾನೆಹ್ ಅವರನ್ನು ಪಾಟ್ನಾ ಪೈರೇಟ್ಸ್ 31 ಲಕ್ಷಕ್ಕೆ ಖರೀದಿಸಿತು. ಅವರ ನಂತರ, ಬೆಂಗಾಲ್ ವಾರಿಯರ್ಸ್ ಅಬೋಜರ್ ಮಿಘಾನಿಯನ್ನು ರೂ. 30.5 ಲಕ್ಷಕ್ಕೆ ಖರೀದಿಸಿತು.

PKL: ಪ್ರೊ ಕಬಡ್ಡಿ ಲೀಗ್‌ ವಿದೇಶಿ ಆಟಗಾರರ ಹರಾಜು; ಯಾರ್ಯಾರು ಯಾವ ತಂಡಕ್ಕೆ? ಬೆಂಗಳೂರು ಬುಲ್ಸ್ ಸೇರಿದವರ ಪಟ್ಟಿ ಹೀಗಿದೆ
ಪ್ರೊ ಕಬಡ್ಡಿ ಲೀಗ್‌ ವಿದೇಶಿ ಆಟಗಾರರ ಹರಾಜು
TV9 Web
| Edited By: |

Updated on: Aug 30, 2021 | 8:03 PM

Share

ಎರಡು ವರ್ಷಗಳ ಕಾಯುವಿಕೆಯ ನಂತರ, ಅಂತಿಮವಾಗಿ ಈ ವರ್ಷ ಅಭಿಮಾನಿಗಳಿಗೆ ಪ್ರೊ ಕಬಡ್ಡಿ ಲೀಗ್‌ನ ಹೊಸ ಋತುವನ್ನು ಆನಂದಿಸಲು ಅವಕಾಶ ಸಿಗುತ್ತಿದೆ. ಪಿಕೆಎಲ್‌ನ ಏಳನೇ ಸೀಸನ್‌ನ ಹರಾಜು ಪ್ರಕ್ರಿಯೆ ಭಾನುವಾರ ಆರಂಭವಾಗಿದೆ. ಇದು ಮಂಗಳವಾರದವರೆಗೆ ನಡೆಯಲಿದೆ. ಹರಾಜಿಗೆ ಮುನ್ನ 12 ತಂಡಗಳು 59 ಆಟಗಾರರನ್ನು ಉಳಿಸಿಕೊಂಡಿದ್ದರೆ, 161 ಆಟಗಾರರನ್ನು ಬಿಡುಗಡೆ ಮಾಡಿವೆ. ಮೊದಲಿಗೆ, ತಂಡಗಳು ವಿದೇಶಿ ಆಟಗಾರರನ್ನು ಬಿಡ್ ಮಾಡುತ್ತವೆ. ಭಾರತದ ಹಲವು ದೊಡ್ಡ ಆಟಗಾರರ ಹೆಸರುಗಳನ್ನು ಹರಾಜು ಪಟ್ಟಿಯಲ್ಲಿ ಸೇರಿಸಲಾಗಿದೆ ಮತ್ತು ಅವರ ಭವಿಷ್ಯವನ್ನು ಸೋಮವಾರ ನಿರ್ಧರಿಸಲಾಗುವುದು.

ಹರಾಜಿನಲ್ಲಿ ಮೊದಲ ಮತ್ತು ಎರಡನೇ ದಿನದಲ್ಲಿ ಒಟ್ಟು 22 ವಿದೇಶಿ ಆಟಗಾರರನ್ನು ಬಿಡ್ ಮಾಡಲಾಗಿದೆ. ಅವರಲ್ಲಿ, ಅತ್ಯಂತ ದುಬಾರಿ ಎಂದು ಸಾಬೀತಾದ ಇರಾನ್‌ನ ಮೊಹಮ್ಮದ್ರೆಜಾ ಶಾಡ್ಲೋಯ್ ಚಿಯಾನೆಹ್ ಅವರನ್ನು ಪಾಟ್ನಾ ಪೈರೇಟ್ಸ್ 31 ಲಕ್ಷಕ್ಕೆ ಖರೀದಿಸಿತು. ಅವರ ನಂತರ, ಬೆಂಗಾಲ್ ವಾರಿಯರ್ಸ್ ಅಬೋಜರ್ ಮಿಘಾನಿಯನ್ನು ರೂ. 30.5 ಲಕ್ಷಕ್ಕೆ ಖರೀದಿಸಿತು, ಹರಾಜಿನಲ್ಲಿ ಮಾರಾಟವಾದ ಎರಡನೇ ದುಬಾರಿ ಆಟಗಾರ ಇವರು. ಯು ಮುಂಬಾ, ಪಾಟ್ನಾ ಪೈರೇಟ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಲಾ ಮೂರು ಆಟಗಾರರನ್ನು ಖರೀದಿಸಿದೆ. ಪಾಟ್ನಾ ಪೈರೇಟ್ಸ್ ಮತ್ತೊಮ್ಮೆ ಫೈನಲ್ ಬಿಡ್ ಮ್ಯಾಚ್ (FBM) ಕಾರ್ಡ್ ಬಳಸಿ ತಮ್ಮ ತಂಡದಲ್ಲಿ ಜಾಂಗ್ ಕುನ್ ಲೀ ಅವರನ್ನು ಉಳಿಸಿಕೊಂಡಿತು.

ಹರಾಜಿನಲ್ಲಿ ಮಾರಾಟವಾದ ವಿದೇಶಿ ಆಟಗಾರರ ಸಂಪೂರ್ಣ ಪಟ್ಟಿ

ಅಬೋಜರ್ ಮಿಘಾನಿ – 30.5 ಲಕ್ಷ ರೂ.- ಬೆಂಗಾಲ್ ವಾರಿಯರ್ಸ್

ಜಾಂಗ್ ಕುನ್ ಲೀ – 20.5 ಲಕ್ಷ ರೂ.- ಪಾಟ್ನಾ ಪೈರೇಟ್ಸ್ (FBM ಕಾರ್ಡ್)

ಮೊಹ್ಸೆನ್ ಮಘಸೌದ್ಲುಜಾಫ್ರಿ -12.80 ಲಕ್ಷ ರೂ. – ಯು ಮುಂಬಾ

ವಿಕ್ಟರ್ ಒಬಿಯೆರೊ-10 ಲಕ್ಷ ರೂ. – ಪುನೇರಿ ಪಲ್ಟಾನ್

ಹಮೀದ್ ಮಿರ್ಜಿ ನಾಡರ್ -12.10 ಲಕ್ಷ ರೂ.- ಹರಿಯಾಣ ಸ್ಟೀಲರ್ಸ್

ಮೊಹಮ್ಮದ್ರೆಜಾ ಶಾಡ್ಲೋಯ್ ಚಿಯಾನೆಹ್ – 31 ಲಕ್ಷ ರೂ. – ಪಾಟ್ನಾ ಪೈರೇಟ್ಸ್

ಮೊಹಮ್ಮದ್ ಮಲಕ್ -10 ಲಕ್ಷ ರೂ.- ದಬಾಂಗ್ ದೆಹಲಿ

ಅಬೆ ಟೆಟ್ಸುರೊ -10 ಲಕ್ಷ ರೂ.- ತೆಲುಗು ಟೈಟಾನ್ಸ್

ಸೋಲೆಮನ್ ಫೆಹ್ಲ್ವಾನಿ -11.50 ಲಕ್ಷ ರೂ.- ಗುಜರಾತ್ ಜೈಂಟ್ಸ್

ಹದಿ ಒಶ್ಟೋರಕ್ -20 ಲಕ್ಷ ರೂ.- ಗುಜರಾತ್ ಜೈಂಟ್ಸ್

ಜಿಯಾ ಉರ್ ರೆಹಮಾನ್ -12.20 ಲಕ್ಷ ರೂ.- ಬೆಂಗಳೂರು ಬುಲ್ಸ್

ಅಫೋಲ್ಫಜಲ್ ಮಘಸೌಡ್ಲು – 13 ಲಕ್ಷ ರೂ.- ಬೆಂಗಳೂರು ಬುಲ್ಸ್

ಡಾಂಗ್ ಜಿಯಾನ್ ಲೀ – 12.50 ಲಕ್ಷ ರೂ.- ಬೆಂಗಳೂರು ಬುಲ್ಸ್

ಇಮಾಡ್ ಸೇಡಘಾಟ್ ನಿಯಾ -10.20 ಲಕ್ಷ ರೂ.- ದಬಾಂಗ್ ದೆಹಲಿ

ಮೊಹಮ್ಮದ್ ಇಸ್ಮಾಯಿಲ್ ಮಘಸೌಡ್ಲು -13.20 ಲಕ್ಷ ರೂ.- ಹರಿಯಾಣ ಸ್ಟೀಲರ್ಸ್

ಮೊಹಮ್ಮದ್ ಅಮಿನ್ ನೊಸ್ರಾಟಿ -11 ಲಕ್ಷ ರೂ.- ಜೈಪುರ ಪಿಂಕ್ ಪ್ಯಾಂಥರ್ಸ್

ಅಮೀರ್ ಹೊಸೈನ್ ಮೊಹಮ್ಮದ್ ಮಾಲ್ಕಿ -10 ಲಕ್ಷ ರೂ.- ಜೈಪುರ ಪಿಂಕ್ ಪ್ಯಾಂಥರ್ಸ್

ಅನ್ವರ್ ಬಾಬಾ -10 ಲಕ್ಷ ರೂ.- ತಮಿಳು ತಲೈವಾಸ್

ಮೊಹಮ್ಮದ್ ತುಹಿನ್ ತರಫ್ದರ್ -10 ಲಕ್ಷ ರೂ.- ತಮಿಳು ತಲೈವಾಸ್

ಹ್ಯುನ್ಸು ಪಾರ್ಕ್ -10 ಲಕ್ಷ ರೂ.- ತೆಲುಗು ಟೈಟಾನ್ಸ್

ಮೊಹ್ಮದ್ ಮಸೂದ್ ಕರೀಮ್ -10 ಲಕ್ಷ ರೂ. – ಯುಪಿ ಯೋಧ

ಮೊಹಮ್ಮದ್ ತಾಗಿ- 12 ಲಕ್ಷ ರೂ.- ಯುಪಿ ಯೋಧ