Tokyo Paralympics: 8 ನೇ ವಯಸ್ಸಿಗೆ ಪಾರ್ಶ್ವವಾಯು.. ಕೋಚ್ ಇಲ್ಲದೆ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಯೋಗೀಶ್ ಜೀವನಗಾಥೆಯಿದು

Tokyo Paralympics: ಯೋಗೀಶ್ ಕಥುನಿಯಾ ಅವರು ಎಂಟು ವರ್ಷದವರಾಗಿದ್ದಾಗ, ಪಾರ್ಶ್ವವಾಯು ದಾಳಿಯಿಂದಾಗಿ ಅವರಿಗೆ ದೇಹದ ಕೆಳ ಭಾಗದಲ್ಲಿ ಸಮಸ್ಯೆ ಉಂಟಾಯಿತು.

Tokyo Paralympics: 8 ನೇ ವಯಸ್ಸಿಗೆ ಪಾರ್ಶ್ವವಾಯು.. ಕೋಚ್ ಇಲ್ಲದೆ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಯೋಗೀಶ್ ಜೀವನಗಾಥೆಯಿದು
ಯೋಗೀಶ್ ಕಥುನಿಯಾ
TV9kannada Web Team

| Edited By: pruthvi Shankar

Aug 30, 2021 | 6:52 PM

ಭಾರತೀಯ ಡಿಸ್ಕಸ್ ಎಸೆತಗಾರ ಯೋಗೀಶ್ ಕಥುನಿಯಾಗೆ, ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಬೆಳ್ಳಿ ಪದಕ ಗೆದ್ದಿರಬಹುದು. ಆದರೆ ಅವರಿಗೆ ಆ ಪದಕ ಚಿನ್ನದ ಪದಕಕ್ಕೆ ಸಮನಾಗಿದೆ. ಏಕೆಂದರೆ ಅವರು ತರಬೇತುದಾರರಿಲ್ಲದೆ ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಸರಿಯಾದ ತರಬೇತಿಯಿಲ್ಲದೆ ಸಾಧನೆ ಮಾಡಿದ್ದಾರೆ. 24 ವರ್ಷದ ಅಥ್ಲೀಟ್ ಸೋಮವಾರ ತನ್ನ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ 44.38 ಮೀ ಡಿಸ್ಕಸ್ ಥ್ರೋ ಮೂಲಕ ಪುರುಷರ ಡಿಸ್ಕಸ್ ಥ್ರೋನ ಎಫ್ 56 ವರ್ಗೀಕರಣದಲ್ಲಿ ಬೆಳ್ಳಿ ಪದಕ ಗೆದ್ದರು. ಈ ಬಗ್ಗೆ ಮಾತನಾಡಿದ ಯೋಗೀಶ್, ಇದು ಅದ್ಭುತವಾದ ಅನುಭವವಾಗಿದೆ. ಬೆಳ್ಳಿ ಗೆದ್ದಿರುವುದು ನನಗೆ 2024 ರಲ್ಲಿ ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಹೆಚ್ಚು ಪ್ರೇರಣೆಯನ್ನು ನೀಡಿದೆ. ಬ್ರೆಜಿಲ್‌ನ ಕ್ಲೌಡಾನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 45.59 ಮೀ ಡಿಸ್ಕಸ್ ಎಸೆದರು ಚಿನ್ನ ಗೆದ್ದರು. ಕ್ಯೂಬಾದ ಲಿಯೊನಾರ್ಡೊ ಡಯಾಜ್ ಅಲ್ಡಾನಾ 43.36 ಮೀ ಡಿಸ್ಕಸ್ ಎಸೆಯುವ ಮೂಲಕ ಬೆಳ್ಳಿ ಗೆದ್ದರು.

ನನಗೆ ಕೋಚ್ ಕೂಡ ಇರಲಿಲ್ಲ ಲಾಕ್‌ಡೌನ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಹೆಚ್ಚಿನ ತರಬೇತಿ ಸೌಲಭ್ಯಗಳು ಸಿಗದ ಕಾರಣ ಕ್ರೀಡಾಕೂಟಕ್ಕೆ ತಯಾರಿ ಮಾಡುವುದು ಕಷ್ಟ ಎಂದು ಕಥುನಿಯಾ ಹೇಳಿದರು. ಕಳೆದ 18 ತಿಂಗಳಲ್ಲಿ ತಯಾರಿ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಭಾರತದಲ್ಲಿ ಲಾಕ್‌ಡೌನ್‌ನಿಂದಾಗಿ ಪ್ರತಿ ಕ್ರೀಡಾಂಗಣವೂ ಆರು ತಿಂಗಳು ಮುಚ್ಚಿತ್ತು. ಹೀಗಾಗಿ ನಾನು ಸ್ವಂತವಾಗಿ ಅಭ್ಯಾಸ ಮಾಡಬೇಕಾಗಿತ್ತು. ಆಗ ನನಗೆ ಕೋಚ್ ಕೂಡ ಇರಲಿಲ್ಲ ಮತ್ತು ನಾನು ಇನ್ನೂ ಕೋಚ್ ಇಲ್ಲದೆ ಅಭ್ಯಾಸ ಮಾಡುತ್ತಿದ್ದೇನೆ. ತರಬೇತುದಾರರಿಲ್ಲದಿದ್ದರೂ ನಾನು ಬೆಳ್ಳಿ ಪದಕ ಗೆಲ್ಲಲು ಸಾಧ್ಯವಾಗಿರುವುದು ಅದ್ಭುತವಾಗಿದೆ. ಮುಂದಿನ ಬಾರಿ ಚಿನ್ನದ ಪದಕ ಗೆಲ್ಲಲು ಶ್ರಮಿಸುತ್ತೇನೆ ಎಂದು ಹೇಳಿದರು.

ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ನಾನು ಚಿನ್ನದ ಪದಕಕ್ಕಿಂತ ಕೇವಲ ಒಂದು ಮೀಟರ್ ಹಿಂದೆ ಇದ್ದೆ ಆದರೆ ಪ್ಯಾರಿಸ್‌ನಲ್ಲಿ ನಾನು ವಿಶ್ವದಾಖಲೆಯನ್ನು ಮುರಿಯಲು ಪ್ರಯತ್ನಿಸುತ್ತೇನೆ. ಇಂದು ನನ್ನ ದಿನವಾಗಿರಲಿಲ್ಲ. ನಾನು ವಿಶ್ವ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದೆ ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರು.

8 ನೇ ವಯಸ್ಸಿನಲ್ಲಿ ಪಾರ್ಶ್ವವಾಯು ಯೋಗೀಶ್ ಕಥುನಿಯಾ ಅವರು ಎಂಟು ವರ್ಷದವರಾಗಿದ್ದಾಗ, ಪಾರ್ಶ್ವವಾಯು ದಾಳಿಯಿಂದಾಗಿ ಅವರಿಗೆ ದೇಹದ ಕೆಳ ಭಾಗದಲ್ಲಿ ಸಮಸ್ಯೆ ಉಂಟಾಯಿತು. ಅವರ ತಂದೆ ಸೇನೆಯಲ್ಲಿದ್ದಾರೆ. ಯೋಗೇಶ್ ದೆಹಲಿಯ ಕಿರೋರಿ ಮಾಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಇಲ್ಲಿ ಓದುತ್ತಿರುವಾಗ, ಅನೇಕ ತರಬೇತುದಾರರು ಯೋಗೀಶ್ ನೆರವಿಗೆ ಬಂದರು. ನಂತರ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ತರಬೇತುದಾರ ಸತ್ಯಪಾಲ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಯೋಗೀಶ್ ತರಬೇತಿ ಪಡೆದರು. ನಂತರ ಅವರು ತರಬೇತುದಾರ ನವಲ್ ಸಿಂಗ್ ಅವರಿಂದ ಕಲಿಯಲು ಆರಂಭಿಸಿದರು.

2018 ರಲ್ಲಿ ಬರ್ಲಿನ್‌ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ಅವರ ಮೊದಲ ಅಂತರಾಷ್ಟ್ರೀಯ ಪಂದ್ಯಾವಳಿಯಾಗಿದೆ. ಇದರಲ್ಲಿ ಅವರು ಎಫ್ 36 ವರ್ಗಕ್ಕೆ ಸೇರಿ ವಿಶ್ವ ದಾಖಲೆ ಮಾಡಿದರು. 2019 ರಲ್ಲಿ, ದುಬೈನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು 42.51 ಮೀ ಎಸೆದರು ಕಂಚು ಗೆದ್ದರು. ಈ ಕಾರಣದಿಂದಾಗಿ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದರು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada