AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

25 ಎಸೆತಗಳಲ್ಲಿ 128 ರನ್ ಬಾರಿಸಿದ್ದ ಆರೋನ್: ಫಿಂಚ್ ಸಿಡಿಲಬ್ಬರಕ್ಕೆ 8 ವರ್ಷ

Aaron finch: ಟಿ20 ಕ್ರಿಕೆಟ್​ನಲ್ಲಿ ಅಂದು ಹೊಸ ಇತಿಹಾಸ ಬರೆದಿದ್ದ ಆರೋನ್ ಫಿಂಚ್ ಆ ಬಳಿಕ ತಮ್ಮದೇ ದಾಖಲೆಯನ್ನು ಅಳಿಸಿ ಹಾಕಿದರು.

TV9 Web
| Edited By: |

Updated on: Aug 30, 2021 | 5:00 PM

Share
ಅದು 2013, ಆಗಸ್ಟ್ 29...ಸೌತಂಪ್ಟನ್​ನ ರೋಸ್ ಬೌಲ್​ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಅಂದಿನ ಇಂಗ್ಲೆಂಡ್ ನಾಯಕ ಸ್ಟುವರ್ಟ್ ಬ್ರಾಡ್ ಬೌಲಿಂಗ್ ಆಯ್ದುಕೊಂಡರು. ಆದರೆ ಮೊದಲ ಮೂರು ಓವರ್​ನಲ್ಲೇ ಬ್ರಾಡ್ ಅವರ ನಿರ್ಧಾರ ತಪ್ಪು ಎಂದು ಸಾರಿದ್ದರು ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್.

1 / 5
ಹೌದು, ಆರಂಭಿಕರಾಗಿ ಕಣಕ್ಕಿಳಿದಿದ್ದ ಫಿಂಚ್ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಎರಡನೇ ಓವರ್​ನಲ್ಲಿ ವಾರ್ನರ್ ಔಟ್ ಆಗಿ ಹೊರನಡೆದರೂ, ಅದಕ್ಕೂ ನನಗೂ ಸಂಬಂಧವೇ ಇಲ್ಲವೆಂಬಂತೆ ಫಿಂಚ್ ಅಬ್ಬರಿಸಿದ್ದರು. ಇಂಗ್ಲೆಂಡ್ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ್ದ ಆರೋನ್ ಫಿಂಚ್ ರನ್​ ಗತಿಯನ್ನು 10ರ ಸರಾಸರಿಯಲ್ಲಿ ಕೊಂಡೊಯ್ದಿದ್ದರು. ಪರಿಣಾಮ ಮೊದಲ 10 ಓವರ್ ಆಗುವಷ್ಟರಲ್ಲಿ ಆಸೀಸ್ ಮೊತ್ತ 100ರ ಗಡಿದಾಟಿತ್ತು. ಅಲ್ಲದೆ 26 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

2 / 5
ಅರ್ಧಶತಕದ ಬಳಿಕ ಅಕ್ಷರಶಃ ಅಬ್ಬರಿಸಲಾರಂಭಿಸಿದ ಫಿಂಚ್ 47 ಎಸೆತಗಳಾಗುವಷ್ಟರಲ್ಲಿ ತಮ್ಮ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದ್ದರು. ಇನ್ನು ಸೆಂಚುರಿ ಬಳಿಕ ಕೂಡ ಆಸೀಸ್ ಆರಂಭಿಕನನ್ನು ಕಟ್ಟಿಹಾಕಲು ಇಂಗ್ಲೆಂಡ್ ಬೌಲರುಗಳಿಗೆ ಸಾಧ್ಯವಾಗಲಿಲ್ಲ. ಪರಿಣಾಮ ಫಿಂಚ್ ಬ್ಯಾಟ್​ನಿಂದ 11 ಬೌಂಡರಿ ಹಾಗೂ 14 ಭರ್ಜರಿ ಸಿಕ್ಸರ್​ಗಳು ಮೂಡಿಬಂದವು. ಅಂದರೆ ಕೇವಲ 25 ಎಸೆತಗಳಲ್ಲಿ ಬೌಂಡರಿ-ಸಿಕ್ಸರ್ ಮೂಲಕ ಫಿಂಚ್ 128 ರನ್​ ಚಚ್ಚಿದ್ದರು. ಪರಿಣಾಮ 63 ಎಸೆತಗಳಲ್ಲಿ 156 ರನ್ ಬಾರಿಸಿ ತಮ್ಮ ಇನಿಂಗ್ಸ್​ ಅಂತ್ಯಗೊಳಿಸಿದರು. ಇದರೊಂದಿಗೆ ಅಂದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನ ಗರಿಷ್ಠ ಸ್ಕೋರ್ ದಾಖಲೆ ಫಿಂಚ್ ಪಾಲಾಯಿತು.

3 / 5
 ಅತ್ತ ಫಿಂಚ್ ಅಬ್ಬರದೊಂದಿಗೆ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 248 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಆಸರೆಯಾದರು. ಕೇವಲ 49 ಎಸೆತಗಳನ್ನು ಎದುರಿಸಿದ್ದ ರೂಟ್ 90 ರನ್​ ಬಾರಿಸಿದರು. ಇದಾಗ್ಯೂ ಇಂಗ್ಲೆಂಡ್ ತಂಡವು ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 209 ರನ್​ಗಳಿಸಲಷ್ಟೇ ಶಕ್ತರಾದರು. ಆಸ್ಟ್ರೇಲಿಯಾ ತಂಡವು 39 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

4 / 5
ಸ್ಪೋಟಕ ಇನಿಂಗ್ಸ್​ಗಳಿಗೆ ಸಾಕ್ಷಿಯಾಗಿದ್ದ ಈ ಪಂದ್ಯ ನಡೆದು 8 ವರ್ಷಗಳು ಕಳೆದಿವೆ. ಟಿ20 ಕ್ರಿಕೆಟ್​ನಲ್ಲಿ ಅಂದು ಹೊಸ ಇತಿಹಾಸ ಬರೆದಿದ್ದ ಆರೋನ್ ಫಿಂಚ್ ಆ ಬಳಿಕ ತಮ್ಮದೇ ದಾಖಲೆಯನ್ನು ಅಳಿಸಿ ಹಾಕಿ ಹೊಸ ರೆಕಾರ್ಡ್ ಸೃಷ್ಟಿಸಿದರು. ಹೌದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವೈಯುಕ್ತಿಕ ಗರಿಷ್ಠ ಸ್ಕೋರ್ 156 ರನ್ ಬಾರಿಸಿದ್ದ ಫಿಂಚ್ 2018 ರಲ್ಲಿ ತಮ್ಮ ದಾಖಲೆಯನ್ನು ಮುರಿದರು. ಜಿಂಬಾಬ್ವೆ ವಿರುದ್ದ ನಡೆದ ಟಿ20 ಪಂದ್ಯದಲ್ಲಿ 76 ಎಸೆತಗಳಲ್ಲಿ 172 ರನ್ ಬಾರಿಸಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದರು. ಈ ದಾಖಲೆ ಇಂದಿಗೂ ಅಚ್ಚಳಿಯದೇ ಉಳಿದಿದೆ. ಮುಂಬರುವ ಟಿ20 ವಿಶ್ವಕಪ್​ನಲ್ಲಿ ಫಿಂಚ್ ಬರೆದಿಟ್ಟಿರುವ ಈ ವಿಶ್ವ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಕಾದು ನೋಡಬೇಕಿದೆ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ