Tokyo 2020 Paralympics: ಮಹಿಳಾ ಸಿಂಗಲ್ಸ್​ನಲ್ಲಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ಭಾವಿನಾ

| Updated By: Vinay Bhat

Updated on: Aug 27, 2021 | 8:27 AM

Bhavina Patel: ರೌಂಡ್ 16ರ ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ನಡೆದ ಬ್ರೆಜಿಲ್​ನ ಜೊಯ್ಸ್ ಒಲಿವೆರಾ ವಿರುದ್ಧದ ಪಂದ್ಯದಲ್ಲಿ 3-0 ಅಂತರದಿಂದ ಗೆದ್ದು ಬೀಗಿದ ಭಾವಿನಾ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ.

Tokyo 2020 Paralympics: ಮಹಿಳಾ ಸಿಂಗಲ್ಸ್​ನಲ್ಲಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಭಾರತದ ಭಾವಿನಾ
Bhavina Patel
Follow us on

ಟೋಕಿಯೊ ಪ್ಯಾರಾಲಿಂಪಿಕ್ಸ್‌ (Tokyo 2020 Paralympics) ನಲ್ಲಿ ಭಾರತ ಆರಂಭದಲ್ಲಿ ಹಿನ್ನಡೆ ಅನುಭವಿಸಿತಾದರೂ ನಂತರದಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡುತ್ತಿದೆ. ಇಂದು ಮೂರನೇ ದಿನ ಭಾರತಕ್ಕೆ ಮತ್ತೊಂದು ಗೆಲುವು ಸಿಕ್ಕಿದ್ದು ಮಹಿಳಾ ಸಿಂಗಲ್ಸ್​ನಲ್ಲಿ ಟೆಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ (BhavinaPatel) ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ.

ರೌಂಡ್ 16ರ ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ನಡೆದ ಬ್ರೆಜಿಲ್​ನ ಜೊಯ್ಸ್ ಒಲಿವೆರಾ ವಿರುದ್ಧದ ಪಂದ್ಯದಲ್ಲಿ 3-0 ಅಂತರದಿಂದ ಗೆದ್ದು ಬೀಗಿದ ಭಾವಿನಾ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾವಿನಾ ಎದುರಾಳಿಗೆ ಒಂದು ಸೆಟ್​ನಲ್ಲೂ ಗೆಲ್ಲಲು ಅವಕಾಶ ಕೊಡಲಿಲ್ಲ.

 

ಮೊದಲ ಸುತ್ತಿನಲ್ಲಿ ಭಾವಿನಾ 12-10 ಅಂಕಗಳ ಮುನ್ನಡೆ ಸಾಧಿಸಿದರೆ ಎರಡನೇ ಸೆಟ್​ನಲ್ಲಿ 13-11 ಮತ್ತು ಅಂತಿಮ ಸೆಟ್​ನಲ್ಲಿ 11-6 ಮುನ್ನಡೆ ಸಾಧಿಸಿ 3-0 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಇಂದು ಮಧ್ಯಾಹ್ನ 3:50ಕ್ಕೆ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ.

ಪ್ಯಾರಾಲಿಂಪಿಕ್ಸ್​ನ ಮೊದಲ ದಿನ ನಡೆದ ಟೆಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾವಿನಾ ಅವರು ಚೀನಾದ ಝೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿದ್ದರು. ನಂತರ ನಡೆದ ಎರಡನೇ ಗುಂಪಿನ ಎ ಪಂದ್ಯದಲ್ಲಿ ಭಾವಿನಾ ಗ್ರೇಟ್ ಬ್ರಿಟನ್​ನ ಮೆಗನ್ ಶಾಕ್ಲೆಟನ್ ವಿರುದ್ಧ 3-1 ಅಂತರದಿಂದ ಗೆದ್ದು ಬೀಗಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದರು.