Tokyo Paralympics 2020: ಕ್ವಾರ್ಟರ್ ಫೈನಲ್​ನಲ್ಲಿ ಭಾವಿನಾ-ಸೋನಲ್ ಜೋಡಿಗೆ ಸೋಲು

| Updated By: Vinay Bhat

Updated on: Aug 31, 2021 | 8:44 AM

ಮೊದಲ ಸೆಟ್​ನಲ್ಲಿ ಚೀನಾ 2-11ರ ಅಂಕದಿಂದ ಗೆದ್ದರೆ, ಎರಡನೇ ಸೆಟ್​ನಲ್ಲಿ 4-11 ಮತ್ತು ಮೂರನೇ ಸೆಟ್​ನಲ್ಲಿ 2-11 ಅಂಕದಿಂದ ಗೆದ್ದು ಕ್ಲೀನ್​ಸ್ವೀಪ್ ಮಾಡಿಕೊಂಡಿತು.

Tokyo Paralympics 2020: ಕ್ವಾರ್ಟರ್ ಫೈನಲ್​ನಲ್ಲಿ ಭಾವಿನಾ-ಸೋನಲ್ ಜೋಡಿಗೆ ಸೋಲು
Sonal Patel and Bhavina Patel
Follow us on

ಟೋಕಿಯೊ ಪ್ಯಾರಾಲಿಂಪಿಕ್ಸ್​ನ (Tokyo Paralympics 2020) ಮಹಿಳೆಯರ ಡಬಲ್ ಕ್ಲಾಸ್ 4-5 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಭಾವಿನಾ ಪಟೇಲ್ (Bhavina Patel) ಹಾಗೂ ಸೋನಲ್ ಪಟೇಲ್ (Sonal Ptel) ಸೋಲು ಕಂಡಿದ್ದಾರೆ. ಚೀನಾದ ಜು ಯಿಂಗ್ ಮತ್ತು ಜ್ಯಾಂಗ್ ಬಿಯಾನ್ ಜೋಡಿಯಾ ಆಕ್ರಮಣ ಆಟಕ್ಕೆ ತಲೆಬಾಗಿದ ಭಾವಿನಾ-ಸೋನಲ್ 0-3 ಅಂತರದಿಂದ ಸೋಲು ಕಂಡರು.

ಮೊದಲ ಸೆಟ್​ನಲ್ಲಿ ಚೀನಾ 2-11ರ ಅಂಕದಿಂದ ಗೆದ್ದರೆ, ಎರಡನೇ ಸೆಟ್​ನಲ್ಲಿ 4-11 ಮತ್ತು ಮೂರನೇ ಸೆಟ್​ನಲ್ಲಿ 2-11 ಅಂಕದಿಂದ ಗೆದ್ದು ಕ್ಲೀನ್​ಸ್ವೀಪ್ ಮಾಡಿಕೊಂಡಿತು.

ಭಾರತಕ್ಕೆ ಚೊಚ್ಚಲ ಪದಕ ದಕ್ಕಿದ್ದು ಟೇಬಲ್ ಟೆನಿಸ್​ನಲ್ಲಿ. ಭಾರತದ ಪ್ಯಾರಾ ಟೇಬಲ್‌ ಟೆನಿಸ್‌ ಆಟಗಾರ್ತಿ ಭಾವಿನಾ ಪಟೇಲ್‌  ಅವರು ಬೆಳ್ಳೆ ಪದಕಕ್ಕೆ ಕೊರಳೊಡ್ಡಿದರು.

 

ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 0-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಬೆಳ್ಳಿಗೆ ತೃಪ್ತಪಟ್ಟರು. ಆದರೆ, ಪ್ಯಾರಾಲಿಂಪಿಕ್ಸ್​ನ ಟೇಬಲ್ ಟೆನಿಸ್​ನಲ್ಲಿ ಭಾರತ ಈವರೆಗೆ ಫೈನಲ್​ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಫೈನಲ್​ಗೆ ತಲುಪಿ ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆಯಾಗಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿದೆ. ಈವರೆಗೆ ಒಟ್ಟು ಎರಡು ಚಿನ್ನ ಗೆದ್ದಿದ್ದು, ನಾಲ್ಕು ಬೆಳ್ಳಿ ಮತ್ತು ಒಂದು ಕಂಚು ತಮ್ಮದಾಗಿಸಿದೆ. ಈ ಮೂಲಕ ಒಟ್ಟು ಏಳು ಪದಕವನ್ನು ಮುಡಿಗೇರಿಸಿಕೊಂಡಿದೆ.

Tokyo Paralympics: ಇತಿಹಾಸ ನಿರ್ಮಿಸಿದ ಭಾವಿನಾ ಪತಿ ಭಾರತದ ವಿಶ್ವಕಪ್ ತಂಡದ ಸದಸ್ಯ ಎಂಬುದು ನಿಮಗೆ ಗೊತ್ತೇ?

Avani Lekhara: ಚಿನ್ನದ ಹುಡುಗಿ ಅವನಿಗೆ 3 ಕೋಟಿ ಬಹುಮಾನ ಘೋಷಣೆ; ಮಹೀಂದ್ರಾದಿಂದ ವಿಶೇಷ ಉಡುಗೊರೆ

(Tokyo Paralympics 2020 China clinches the Womens Class 4-5 Quarterfinal match against India with a 3-0 win)