ಟೋಕಿಯೊ ಪ್ಯಾರಾಲಿಂಪಿಕ್ನಲ್ಲಿಂದು ಭಾರತಕ್ಕೆ ಶುಭ ಸೋಮವಾರ ಎಂದೇ ಹೇಳಬಹುದು. ದಿನದ ಆರಂಭದಲ್ಲೇ ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಅವನಿ ಲೆಕೇರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ ಸದ್ಯ ಪುರುಷರ ಡಿಸ್ಕಸ್ ಥ್ರೋನ ಎಫ್ 56 ವಿಭಾಗದಲ್ಲಿ ಯೋಗೇಶ್ ಕಥುನಿಯಾ ಬೆಳ್ಳೆ ಪದಕಕ್ಕೆ ಮುತ್ತಿಕ್ಕಿದ್ದಾರೆ. 44.38 ಮೀಟರ್ ಎಸೆದು ಭಾರತಕ್ಕೆ 5ನೇ ಪದಕ ತಂದುಕೊಟ್ಟಿದ್ದಾರೆ.
24 ವರ್ಷದ ಯೋಗೀಶ್ ಕಥುನಿಯಾ ಈ ಹಿಂದೆ ದುಬೈನಲ್ಲಿ ವರ್ಲ್ಡ್ ಪ್ಯಾರಾ ಅಥ್ಲಿಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿದ್ದರು. ಇನ್ನು ಯೋಗೇಶ್ ಕಥುನಿಯಾ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೋಗೇಶ್ ಕಥುನಿಯಾ ಅವರದ್ದು ಔಟ್ಸ್ಟ್ಯಾಂಡಿಂಗ್ ಪ್ರದರ್ಶನ.. ಅವರು ಚಿನ್ನ ಗೆದ್ದಿದ್ದು ಹೆಮ್ಮೆಯ ವಿಷಯ.. ಅವರ ಆಟ ಇತರರನ್ನೂ ಹುರಿದುಂಬಿಸುತ್ತದೆ. ಅವರ ಭವಿಷ್ಯ ಉತ್ತಮವಾಗಿರಲಿ ಎಂದಿದ್ದಾರೆ.
ನಿನ್ನೆಯಷ್ಟೆ ವಿನೋದ್ ಕುಮಾರ್ ಡಿಸ್ಕಸ್ ಥ್ರೋನ ಎಫ್ 52 ವಿಭಾಗದಲ್ಲಿ 19.98 ಮೀಟರ್ ಎಸೆದು ಏಷ್ಯನ್ ದಾಖಲೆ ಬರೆದರು. ವಿನೋದ್ ತನ್ನ ಆರು ಪ್ರಯತ್ನಗಳಲ್ಲಿ 17.46 ಮೀಟರ್ ಎಸೆತದಿಂದ ಆರಂಭಿಸಿದರು. ಇದರ ನಂತರ, ಅವರು 18.32 ಮೀಟರ್, 17.80 ಮೀಟರ್, 19.20 ಮೀಟರ್, 19.91 ಮೀಟರ್, 19.81 ಮೀಟರ್ ಎಸೆದರು. ಅವರ ಐದನೇ ಎಸೆತವನ್ನು 19.91 ಮೀಟರ್‌ಗಳ ಅತ್ಯುತ್ತಮ ಎಸೆತವೆಂದು ಪರಿಗಣಿಸಲಾಗಿದೆ. ಈ ಅಂತರದಿಂದ ವಿನೋದ್ ಕುಮಾರ್ ಏಷ್ಯನ್ ದಾಖಲೆ ಬರೆದರು.
#IND Yogesh Kathuniya has just bagged the #Silver medal in Men’s Discus Throw F56 with a splendid 44.38m throw! #Paralympics #Tokyo2020 pic.twitter.com/L31eHp9JSl
— Doordarshan Sports (@ddsportschannel) August 30, 2021
ಇವರ ಬೆಳ್ಳಿಯ ಪದಕದೊಂದಿಗೆ ಭಾರತ ಈ ವರೆಗೆ 1 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಒಟ್ಟು 5 ಪದಕ ಗೆದ್ದಂತಾಗಿದೆ.
Published On - 8:33 am, Mon, 30 August 21