2012 ರಲ್ಲಿ ನಡೆದ ಅಪಘಾತ ಬದುಕನ್ನೇ ಬದಲಿಸಿತು; ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಅವನಿ ಲೆಕೇರಾ ಬಗ್ಗೆ ನಿಮಗೆಷ್ಟು ಗೊತ್ತು?
Tokyo Paralympics: ಜೈಪುರದವರಾದ 19 ವರ್ಷದ ಅವ್ನಿ, ಈವೆಂಟ್‌ನ ಫೈನಲ್‌ನಲ್ಲಿ 249.6 ಅಂಕಗಳನ್ನು ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಸರಿಗಟ್ಟಿದರು ಮತ್ತು ಮೊದಲ ಸ್ಥಾನವನ್ನು ಪಡೆದರು.
ಭಾರತದ ಕ್ರೀಡಾ ಇತಿಹಾಸದಲ್ಲಿ ಆಗಸ್ಟ್ 30 ರ ದಿನ ಶಾಶ್ವತವಾಗಿ ಚಿರಸ್ಥಾಯಿಯಾಗಿದೆ. ಇದರ ಶ್ರೇಯ ಪ್ಯಾರಾ ಶೂಟರ್ ಅವನಿ ಲೆಕೇರಾಗೆ ಸಲ್ಲುತ್ತದೆ. ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ, ಮಹಿಳಾ ಆರ್ -2 10 ಎಂ ಏರ್ ರೈಫಲ್‌ನ ಎಸ್‌ಎಚ್ 1 ಕ್ಲಾಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅವನಿ ಇತಿಹಾಸ ಸೃಷ್ಟಿಸಿದರು. ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮಹಿಳಾ ಆಟಗಾರ್ತಿ ಅವನಿ.
ಜೈಪುರದವರಾದ 19 ವರ್ಷದ ಅವ್ನಿ, ಈವೆಂಟ್‌ನ ಫೈನಲ್‌ನಲ್ಲಿ 249.6 ಅಂಕಗಳನ್ನು ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಸರಿಗಟ್ಟಿದರು ಮತ್ತು ಮೊದಲ ಸ್ಥಾನವನ್ನು ಪಡೆದರು. ಅವರು ಚೀನಾದ ಜಾಂಗ್ ಕುಪಿಂಗ್ (248.9 ಪಾಯಿಂಟ್ಸ್) ಅನ್ನು ಹಿಂದಿಕ್ಕಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. 10 ವರ್ಷಗಳ ಸತತ ಪರಿಶ್ರಮದ ನಂತರ, ಅವನಿ ಅಂತಿಮವಾಗಿ ಕ್ರೀಡೆಯ ದೊಡ್ಡ ವೇದಿಕೆಯಲ್ಲಿ ತನ್ನನ್ನು ತಾನು ಸಾಬೀತುಪಡಿಸಿದರು.
ಒಂದು ಅಪಘಾತ ಜೀವನವನ್ನು ಬದಲಾಯಿಸಿತು ಅವ್ನಿ ಗಾಲಿ ಕುರ್ಚಿಯ ಮೇಲೆ ಕುಳಿತು ತನ್ನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅವ್ನಿ ಈ ಹಿಂದೆ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದರು. ಆದರೆ 2012 ರಲ್ಲಿ ನಡೆದ ಒಂದು ಅಪಘಾತ ಅವರ ಜೀವನವನ್ನು ಬದಲಿಸಿತು. ಅವ್ನಿ ಕಾರು ಅಪಘಾತಕ್ಕೀಡಾದ ಕಾರಣ ಆಕೆಯ ಬೆನ್ನುಹುರಿ ಮುರಿಯಿತು. ಇದರ ನಂತರ ಅವರ ಜೀವನ ಚಕ್ರದ ಕುರ್ಚಿಯ ಮೇಲೆ ನಡೆಯುವಂತ್ತಾಯಿತು. ಅವ್ನಿ ಜೈಪುರದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಅಪಘಾತವಾದ ಬಳಿಕ ಅವರು ಅಧ್ಯಯನದತ್ತ ಗಮನ ಹರಿಸಿದರು. ಅವ್ನಿಯ ತಂದೆ ಮಗಳನ್ನು ಕ್ರೀಡಾ ಜಗತ್ತಿಗೆ ಹೋಗಲು ಪ್ರೇರೇಪಿಸಿದರು. ಅವ್ನಿ ಶೂಟಿಂಗ್ ಮೊದಲು ಬಿಲ್ಲುಗಾರಿಕೆ ಮಾಡುತ್ತಿದ್ದರು. ಆದಾಗ್ಯೂ, ಅವರು ಶೂಟಿಂಗ್ ಅನ್ನು ಹೆಚ್ಚು ಆನಂದಿಸಲು ಪ್ರಾರಂಭಿಸಿದರು ಮತ್ತು ಅದನ್ನು ಮುಂದುವರಿಸಿದರು. ಈ ಸಮಯದಲ್ಲಿ ಅವರು ಅಭಿನವ್ ಬಿಂದ್ರಾ ಅವರ ‘ಎ ಶಾಟ್ ಅಟ್ ಹಿಸ್ಟರಿ’ ಪುಸ್ತಕವನ್ನು ಓದಿದರು. ಅದು ಅವರಿಗೆ ಇನ್ನಷ್ಟು ಸ್ಫೂರ್ತಿ ನೀಡಿತು.
2015 ರಲ್ಲಿ ತರಬೇತಿ ಆರಂಭ 2015 ರಲ್ಲಿ, ಅವನಿ ತನ್ನ ತರಬೇತಿಯನ್ನು ಆರಂಭಿಸಿದರು. ತನ್ನ ತರಬೇತುದಾರರಿಂದ ರೈಫಲ್ ಅನ್ನು ಎರವಲು ಪಡೆದ ಅವರು ರಾಜಸ್ಥಾನ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರು ಮತ್ತು ಚಿನ್ನದ ಪದಕವನ್ನು ಗೆದ್ದರು. ಅವ್ನಿ 2017 ರಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿದರು. ಅವರು ಯುಎಇಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾಗವಹಿಸಿದರು. 2019 ರಲ್ಲಿ, ಗೋಸ್ಪೋರ್ಟ್ಸ್ ಫೌಂಡೇಶನ್ ಅವರನ್ನು ಭಾರತದ ಅತ್ಯಂತ ಭರವಸೆಯ ಪ್ಯಾರಾಲಿಂಪಿಕ್ ಕ್ರೀಡಾಪಟು ಎಂದು ಹೆಸರಿಸಲಾಯಿತು. 2018 ರಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅವನಿ ಭಾಗವಹಿಸಿದ್ದರು.