Tokyo Paralympics: ಚೊಚ್ಚಲ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಭಾರತೀಯ ಕ್ರೀಡಾಪಟುಗಳು ಇವರೇ ನೋಡಿ
Tokyo Paralympics: ಭಾವಿನಾ ಪಟೇಲ್ ತನ್ನ ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಅವರು ಟೋಕಿಯೊದಲ್ಲಿ ತಮ್ಮ ಪದಕದೊಂದಿಗೆ ಭಾರತದ ಖಾತೆಯನ್ನು ತೆರೆದರು.
Updated on: Aug 30, 2021 | 2:56 PM

ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್. ಭಾವಿನಾ ಪಟೇಲ್ ತನ್ನ ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಅವರು ಟೋಕಿಯೊದಲ್ಲಿ ತಮ್ಮ ಪದಕದೊಂದಿಗೆ ಭಾರತದ ಖಾತೆಯನ್ನು ತೆರೆದರು.

ಹಿಮಾಚಲದ ರೈತನ ಮಗ ಭಾನುವಾರ ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಹೈಜಂಪ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಉನಾ ಜಿಲ್ಲೆಯ ಅಂಬ್ ಉಪ ವಿಭಾಗದ ಬಡೌನ್ ನಿವಾಸಿಯಾದ ನಿಶಾದ್ ಬೆಳ್ಳಿ ಗೆದ್ದ ಮೊದಲ ಹಿಮಾಚಲಿ ಆಟಗಾರ ಎನಿಸಿಕೊಂಡಿದ್ದಾರೆ. ಅವರು 2.06 ಮೀಟರ್ ಎತ್ತರ ಜಿಗಿಯುವ ಮೂಲಕ ಏಷ್ಯನ್ ದಾಖಲೆ ಮಾಡಿದರು.

ಭಾರತದ ಅವನಿ ಲೇಖರ ಸೋಮವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳೆಯರ ಆರ್ -2 10 ಮೀ ಏರ್ ರೈಫಲ್ ಕ್ಲಾಸ್ ಎಸ್‌ಎಚ್ 1 ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದು ಅವರ ಮೊದಲ ಪ್ಯಾರಾಲಿಂಪಿಕ್ ಕ್ರೀಡಾಕೂಟ.

ಪುರುಷರ ಡಿಸ್ಕಸ್ ಥ್ರೋನ F56 ಸ್ಪರ್ಧೆಯಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಪದಕ ಗೆದ್ದರು. ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ 44.43 ಮೀಟರ್ ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಕಥುನಿಯಾ ಭಾರತಕ್ಕೆ ನಾಲ್ಕನೇ ಪದಕ ನೀಡಿದರು. ಇದು ಯೋಗೀಶ್ ಅವರ ಮೊದಲ ಪ್ಯಾರಾಲಿಂಪಿಕ್ಸ್.

ಪ್ಯಾರಾಲಿಂಪಿಕ್ ಆಟಗಾರ ಸುಂದರ್ ಗುರ್ಜಾರ್ ಜಪಾನ್‌ನ ಟೋಕಿಯೊದಲ್ಲಿ 64.01 ಮೀ ಜಾವೆಲಿನ್ ಎಸೆದು ಕಂಚಿನ ಪದಕ ಗೆದ್ದರು. ಸುಂದರ್ ಅವರು 2016 ರ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಆದರೆ ಒಲಿಂಪಿಕ್ಸ್ ನಿಯಮಗಳನ್ನು ಸರಿಯಾಗಿ ಪಾಲಿಸದ ಅವರನ್ನು ಅನರ್ಹಗೊಳಿಸಲಾಯಿತು.



















