Tokyo Paralympics: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಭಾರತದ ವಿನೋದ್ ಕುಮಾರ್​ಗೆ ಕೈತಪ್ಪಿದ ಕಂಚಿನ ಪದಕ! ಕಾರಣ ಇಲ್ಲಿದೆ

Tokyo Paralympics:ನಿಯಮದ ಪ್ರಕಾರ ವಿನೋದ್ ಎಫ್52ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಾಗಿ ಸಂಘಟಕರು ವಿನೋದ್ ಕುಮಾರ್ ಅವರನ್ನು ಅನರ್ಹಗೊಳಿಸಿದ್ದಾರೆ ಮತ್ತು ಅವರ ಫಲಿತಾಂಶವನ್ನು ರದ್ದುಗೊಳಿಸಲಾಗಿದೆ.

Tokyo Paralympics: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ; ಭಾರತದ ವಿನೋದ್ ಕುಮಾರ್​ಗೆ ಕೈತಪ್ಪಿದ ಕಂಚಿನ ಪದಕ! ಕಾರಣ ಇಲ್ಲಿದೆ
ವಿನೋದ್ ಕುಮಾರ್
Follow us
TV9 Web
| Updated By: ಪೃಥ್ವಿಶಂಕರ

Updated on:Aug 30, 2021 | 5:03 PM

ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಭಾರತದ ವಿನೋದ್ ಕುಮಾರ್ ಡಿಸ್ಕಸ್ ಥ್ರೋನಲ್ಲಿ ಗೆದಿದ್ದ ಕಂಚಿನ ಪದಕ ಕಳೆದುಕೊಂಡಿದ್ದಾರೆ. ನಿಯಮದ ಪ್ರಕಾರ ವಿನೋದ್ ಎಫ್52ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಾಗಿ ಸಂಘಟಕರು ವಿನೋದ್ ಕುಮಾರ್ ಅವರನ್ನು ಅನರ್ಹಗೊಳಿಸಿದ್ದಾರೆ ಮತ್ತು ಅವರ ಫಲಿತಾಂಶವನ್ನು ರದ್ದುಗೊಳಿಸಲಾಗಿದೆ. ವಿನೋದ್ ಕುಮಾರ್ ಪುರುಷರ ಎಫ್ 52 ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಆದರೆ ಇದರ ನಂತರ ಇತರ ಸ್ಪರ್ಧಿಗಳು ಈ ವರ್ಗದಲ್ಲಿ ಅವರ ಸೇರ್ಪಡೆ ಕುರಿತು ಪ್ರಶ್ನೆಗಳನ್ನು ಎತ್ತಲಾಯಿತು. ಕಾರ್ಯಕ್ರಮದ ನಂತರ ಫಲಿತಾಂಶವನ್ನು ತಡೆಹಿಡಿಯಲಾಯಿತು. ಅಲ್ಲದೆ ಪದಕ ಸಮಾರಂಭವನ್ನು ಆಗಸ್ಟ್ 30 ರ ಸಂಜೆಯವರೆಗೆ ಮುಂದೂಡಲಾಯಿತು.

41 ವರ್ಷದ ವಿನೋದ್ ಕುಮಾರ್ 19.91 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದು ಬೆಳ್ಳಿ ಗೆದಿದ್ದರು. ಪೋಲೆಂಡ್‌ನ ಪಿಯೊಟರ್ ಕೊಸೆವಿಚ್ (20.02 ಮೀ) ಮತ್ತು ಕ್ರೊಯೇಷಿಯಾದ ವೆಲಿಮಿರ್ ಸ್ಯಾಂಡರ್ (19.98 ಮೀ) ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದರು. ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ವಿನೋದ್ ಕುಮಾರ್ ಸೋಲಿನಿಂದ ಭಾರತ ಒಂದು ಪದಕ ಕಳೆದುಕೊಂಡಿದೆ. ಈಗ ಭಾರತ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚು ಹೊಂದಿದೆ. ಜೊತೆಗೆ ಪದಕ ಪಟ್ಟಿಯಲ್ಲಿ 26 ನೇ ಸ್ಥಾನದಲ್ಲಿದೆ.

ವಿನೋದ್ 2016 ರ ನಂತರ ಆಡಲು ಆರಂಭಿಸಿದರು ವಿನೋದ್ ಅವರ ತಂದೆ 1971 ರ ಭಾರತ-ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದರು. ತಂದೆಯ ದಾರಿಯನ್ನೆ ಹಿಡಿದ ವಿನೋದ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಗೆ ಸೇರಿದ್ದರು. ನಂತರ ತರಬೇತಿ ಪಡೆಯುತ್ತಿದ್ದಾಗ, ಅವರು ಲೆಹ್ನಲ್ಲಿ ಶಿಖರದಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡರು. ಈ ಕಾರಣದಿಂದಾಗಿ, ಅವರು ಸುಮಾರು 10 ವರ್ಷಗಳ ಕಾಲ ಹಾಸಿಗೆಯಲ್ಲಿರಬೇಕಾಯಿತು. ಈ ಸಮಯದಲ್ಲಿ ಅವರ ಪೋಷಕರಿಬ್ಬರೂ ನಿಧನರಾದರು. 2012 ರ ಸುಮಾರಿಗೆ ಅವರ ಸ್ಥಿತಿಯು ಸುಧಾರಿಸಿತು.

2016 ರಿಯೋ ಗೇಮ್ಸ್ ನಂತರ ಅವರ ವೃತ್ತಿಜೀವನ ಆರಂಭವಾಯಿತು. ರೋಹ್ಟಕ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಅಭ್ಯಾಸವನ್ನು ಆರಂಭಿಸಿದರು. ನಂತರ ರಾಷ್ಟ್ರೀಯ ಸ್ಪರ್ಧೆಯಲ್ಲಿ ಎರಡು ಬಾರಿ ಕಂಚಿನ ಪದಕಗಳನ್ನು ಗೆದ್ದರು. 2019 ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಪ್ಯಾರಿಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಭಾಗವಹಿಸಿದರು. ನಂತರ ಈ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು.

ಎಫ್ 52 ಸ್ಪರ್ಧೆ ಎಂದರೇನು? F52 ಈವೆಂಟ್‌ನಲ್ಲಿ ಪ್ಯಾರಾಲಂಪಿಕ್ಸ್ ಸಮಿತಿ ಹೇಳಿರುವ ಪ್ರಕಾರ ದುರ್ಬಲ ಮಾಂಸ ಖಂಡಗಳಿರುವವರು, ನಿಧಾನಗತಿಯ ಚಲನೆ ಹೊಂದಿರುವವರು ಮತ್ತು ಕಾಲಿನಲ್ಲಿ ಸಮತೋಲನ ಶಕ್ತಿ ಇಲ್ಲದವರು ಭಾಗವಹಿಸಬಹುದು ಜೊತೆಗೆ ಬೆನ್ನುಹುರಿ ಗಾಯಗೊಂಡವರು ಅಥವಾ ಅಂಗವನ್ನು ಕತ್ತರಿಸಿದ ಆಟಗಾರರು ಕೂಡ ಈ ವಿಭಾಗದಲ್ಲಿ ಭಾಗವಹಿಸುತ್ತಾರೆ. ಪ್ಯಾರಾ ಆಟಗಾರರನ್ನು ಅವರ ದೈಹಿಕ ನ್ಯೂನತೆಗಳ ಆಧಾರದ ಮೇಲೆ ವಿವಿಧ ವರ್ಗಗಳಲ್ಲಿ ಇರಿಸಲಾಗಿದೆ. ವರ್ಗೀಕರಣ ವ್ಯವಸ್ಥೆಯು ಒಂದೇ ರೋಗ ಅಥವಾ ಕೊರತೆಯನ್ನು ಹೊಂದಿರುವ ಆಟಗಾರರಿಗೆ ಸ್ಪರ್ಧಿಸಲು ಅವಕಾಶ ನೀಡುತ್ತದೆ.

Published On - 4:07 pm, Mon, 30 August 21