AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Paralympics: ಭಾರತಕ್ಕೆ ಎರಡನೇ ಬಂಗಾರ; ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಸುಮಿತ್ ಆಂಟಿಲ್!

ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಸುಮಿತ್ ಆಂಟಿಲ್ ಜಾವೆಲಿನ್ ಥ್ರೋನ ಎಫ್ 64 ವಿಭಾಗದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ ಎರಡನೇ ಚಿನ್ನ ಸೇರಿದಂತೆ ಏಳನೇ ಪದಕವಾಗಿದೆ. ಅದಕ್ಕೂ ಮೊದಲು, ಸೋಮವಾರವೇ, ಅವನಿ ಲೇಖಾರಾ ಟೋಕಿಯೊದಲ್ಲಿ ಶೂಟಿಂಗ್‌ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ನೀಡಿದ್ದರು. ಸುಮಿತ್ ತನ್ನದೇ ವಿಶ್ವದಾಖಲೆಯನ್ನು ಒಂದಲ್ಲ, ಎರಡಲ್ಲ, ಮೂರು ಬಾರಿ ಇಲ್ಲಿಯೇ ಮುರಿದರು. ಈ ಸಂದರ್ಭದಲ್ಲಿ, ಪ್ರತಿ ಆಟಗಾರನಿಗೆ ಆರು […]

Tokyo Paralympics: ಭಾರತಕ್ಕೆ ಎರಡನೇ ಬಂಗಾರ; ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಸುಮಿತ್ ಆಂಟಿಲ್!
ಸುಮಿತ್ ಆಂಟಿಲ್
TV9 Web
| Edited By: |

Updated on:Aug 30, 2021 | 4:57 PM

Share

ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಸುಮಿತ್ ಆಂಟಿಲ್ ಜಾವೆಲಿನ್ ಥ್ರೋನ ಎಫ್ 64 ವಿಭಾಗದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ ಎರಡನೇ ಚಿನ್ನ ಸೇರಿದಂತೆ ಏಳನೇ ಪದಕವಾಗಿದೆ. ಅದಕ್ಕೂ ಮೊದಲು, ಸೋಮವಾರವೇ, ಅವನಿ ಲೇಖಾರಾ ಟೋಕಿಯೊದಲ್ಲಿ ಶೂಟಿಂಗ್‌ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕವನ್ನು ನೀಡಿದ್ದರು.

ಸುಮಿತ್ ತನ್ನದೇ ವಿಶ್ವದಾಖಲೆಯನ್ನು ಒಂದಲ್ಲ, ಎರಡಲ್ಲ, ಮೂರು ಬಾರಿ ಇಲ್ಲಿಯೇ ಮುರಿದರು. ಈ ಸಂದರ್ಭದಲ್ಲಿ, ಪ್ರತಿ ಆಟಗಾರನಿಗೆ ಆರು ಪ್ರಯತ್ನಗಳನ್ನು ನೀಡಲಾಗುತ್ತದೆ. ಸುಮಿತ್ ಮೊದಲ ಪ್ರಯತ್ನದಲ್ಲಿ 66.95 ಮೀಟರ್ ದೂರ ಜಾವೆಲಿನ್ ಎಸೆದರು. ಈ ಥ್ರೋ ಮೂಲಕ, ಅವರು 2019 ರಲ್ಲಿ ದುಬೈನಲ್ಲಿ ನಿರ್ಮಿಸಿದ ತನ್ನ ವಿಶ್ವ ದಾಖಲೆಯನ್ನು ತಾವೇ ಮುರಿದರು. ಎರಡನೇ ಥ್ರೋನಲ್ಲಿ, ಅವರು 68.08 ಮೀಟರ್ ಎಸೆತದೊಂದಿಗೆ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಮೂರನೇ ಮತ್ತು ನಾಲ್ಕನೇ ಪ್ರಯತ್ನಗಳ ಎಸೆತಗಳು ವಿಶ್ವ ದಾಖಲೆಗಿಂತ ಕೊಂಚ ಕಡಿಮೆ ಇದ್ದವು. ಐದನೇ ಪ್ರಯತ್ನದಲ್ಲಿ 68.55 ಮೀಟರ್ ಎಸೆತದೊಂದಿಗೆ ಅವರು ಮೂರನೇ ಬಾರಿಗೆ ವಿಶ್ವ ದಾಖಲೆ ನಿರ್ಮಿಸಿದರು.

ಕುಸ್ತಿಪಟುವಾಗಲು ಬಯಸಿದ್ದ ಸುಮಿತ್ ಸುಮಿತ್ ಕುಸ್ತಿಪಟುವಾಗಬೇಕೆಂದು ಬಯಸಿದ್ದರು. ಆದಾಗ್ಯೂ, ಅಪಘಾತವು ಕುಸ್ತಿಪಟುವಾಗುವ ಅವರ ಕನಸನ್ನು ನುಚ್ಚುನೂರು ಮಾಡಿತು. ಯೋಗಿಶ್ವರ್ ದತ್ ಅವರನ್ನು ತಮ್ಮ ಸ್ಫೂರ್ತಿಯೆಂದು ಪರಿಗಣಿಸಿದ ಆಂಟಿಲ್ 2015 ರಲ್ಲಿ ರಸ್ತೆ ಅಪಘಾತಕ್ಕೀಡಾದರು. ಅವರು ಬೈಕ್​ನಲ್ಲಿ ಹೋಗುತ್ತಿದ್ದಾಗ ಟ್ರಾಕ್ಟರ್ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಆತ ಬೈಕ್​ನಿಂದ ಕೆಳಗೆ ಬಿದ್ದಿದ್ದು, ಟ್ರ್ಯಾಕ್ಟರ್ ಅವರ ಕಾಲಿನ ಮೇಲೆ ಹರಿದು ಹೋಗಿದೆ. ಇದರಿಂದಾಗಿ ಅವರ ಕಾಲು ಸಂಪೂರ್ಣವಾಗಿ ಮುರಿದುಹೋಗಿತ್ತು. ಹೀಗಾಗಿ ವೈದ್ಯರು ಅವರ ಕಾಲನ್ನು ತೆಗೆಯಬೇಕಾಯಿತು.

2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದರು ಸುಮಿತ್ ಆಂಟಿಲ್, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ನವಲ್ ಸಿಂಗ್ ಅವರ ಆಜ್ಞೆಯ ಮೇರೆಗೆ ಜಾವೆಲಿನ್ ಥ್ರೋ ತರಬೇತಿ ಆರಂಭಿಸಿದರು. ಸುಮಿತ್ 2018 ರಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು, ಆದರೆ 5 ನೇ ರ್ಯಾಂಕ್​ಗೆ ತೃಪ್ತಿಪಡಬೇಕಾಯಿತು. ಆದಾಗ್ಯೂ, ಮುಂದಿನ ವರ್ಷ 2019 ರಲ್ಲಿ, ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು ಮತ್ತು ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

Published On - 4:46 pm, Mon, 30 August 21