Tokyo Paralympics: ಅಪ್ಪನ ಆಸೆಯನ್ನು ಈಡೇರಿಸಿದ್ದೇನೆ; ಪದಕವನ್ನು ದಿವಂಗತ ತಂದೆಗೆ ಅರ್ಪಿಸಿದ ದೇವೇಂದ್ರ ಜಜಾರಿಯಾ
Tokyo Paralympics: ಖಂಡಿತ ಈ ಪದಕ ದೇಶವಾಸಿಗಳಿಗೆ. ಆದರೆ ನಾನು ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆಲ್ಲಬೇಕೆಂದು ಬಯಸಿದ ನನ್ನ ದಿವಂಗತ ತಂದೆಗೆ ಅರ್ಪಿಸಲು ಬಯಸುತ್ತೇನೆ ಎಂದು ಜಜಾರಿಯಾ ತಿಳಿಸಿದರು.
ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ದೇವೇಂದ್ರ ಜಜಾರಿಯಾ ಹ್ಯಾಟ್ರಿಕ್ ಚಿನ್ನದ ಪದಕವನ್ನು ಕಳೆದುಕೊಂಡಿರಬಹುದು. ಆದರೆ ಜಾವೆಲಿನ್ ಥ್ರೋನಲ್ಲಿ ಅವರ ಬೆಳ್ಳಿ ಪದಕ ಖಂಡಿತವಾಗಿಯೂ ಅವರನ್ನು ಭಾರತದ ಅತ್ಯಂತ ಯಶಸ್ವಿ ಒಲಿಂಪಿಯನ್ ಆಗಿ ಮಾಡಿದೆ. ಇಲ್ಲಿಯವರೆಗೆ ಭಾರತದಲ್ಲಿ ಯಾವುದೇ ಆಟಗಾರ ಒಲಿಂಪಿಕ್ ಅಥವಾ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಮೂರು ಪದಕಗಳನ್ನು ಗೆದ್ದಿಲ್ಲ. ದೇವೇಂದ್ರ ಈ ಪದಕವನ್ನು ತನ್ನ ದಿವಂಗತ ತಂದೆಗೆ ಅರ್ಪಿಸಿದರು.
ದೇವೇಂದ್ರ ಕಳೆದ ವರ್ಷ ತಂದೆಯನ್ನು ಕಳೆದುಕೊಂಡರು ದೇವೇಂದ್ರ ಅವರು ಸಾಯಿ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಅವರ ತಂದೆಗೆ ಕ್ಯಾನ್ಸರ್ ಇದೆ ಎಂದು ತಿಳಿಯಿತು. ಈ ವಿಷಯ ತಿಳಿದ ತಕ್ಷಣ ದೇವೇಂದ್ರ ಮನೆಗೆ ಹೋದರು. ಆದರೆ, ದೇವೇಂದ್ರ ಅವರ ತಂದೆ ಅವನನ್ನು, ಮಗ ಮತ್ತೊಮ್ಮೆ ದೇಶಕ್ಕಾಗಿ ಪದಕ ತರಬೇಕೆಂದು ಬಯಸಿ ವಾಪಸ್ ಕಳುಹಿಸಿದ್ದರು.
ಈ ಬಗ್ಗೆ ಮಾತನಾಡಿದ ದೇವೇಂದ್ರ, ಖಂಡಿತ ಈ ಪದಕ ದೇಶವಾಸಿಗಳಿಗೆ. ಆದರೆ ನಾನು ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆಲ್ಲಬೇಕೆಂದು ಬಯಸಿದ ನನ್ನ ದಿವಂಗತ ತಂದೆಗೆ ಅರ್ಪಿಸಲು ಬಯಸುತ್ತೇನೆ ಎಂದು ಜಜಾರಿಯಾ ತಿಳಿಸಿದರು. ನನ್ನ ತಂದೆ ಪ್ರಯತ್ನ ಮಾಡದಿದ್ದರೆ, ನಾನು ಇಲ್ಲಿ ಇರುತ್ತಿರಲಿಲ್ಲ. ಅವರು ನನಗೆ ಕಠಿಣ ತರಬೇತಿ ನೀಡಲು ಮತ್ತು ಇನ್ನೊಂದು ಪದಕ ಗೆಲ್ಲಲು ಸ್ಫೂರ್ತಿ ನೀಡಿದರು. ಇಂದು ನಾನು ಅವರ ಕನಸನ್ನು ಈಡೇರಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದರು.
ಹ್ಯಾಟ್ರಿಕ್ ಪದಕ ಗೆದ್ದಿದ್ದಾರೆ ನಲವತ್ತು ವರ್ಷದ ಜಜಾರಿಯಾ ಈಗಾಗಲೇ ಭಾರತದ ಶ್ರೇಷ್ಠ ಪ್ಯಾರಾಲಿಂಪಿಯನ್ ಆಗಿದ್ದು, 2004 ಮತ್ತು 2016 ರಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಸೋಮವಾರ 64.43 ಮೀಟರ್ ಎಸೆದು ಜಾವಲಿನ್ ಥ್ರೋ ಎಫ್ 46 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಜಜಾರಿಯಾ ಎಂಟು ವರ್ಷದವನಿದ್ದಾಗ, ಮರವನ್ನು ಹತ್ತುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ, ಅವರು ತನ್ನ ಎಡಗೈಯನ್ನು ಕಳೆದುಕೊಂಡರು.