AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್, ಗವಾಸ್ಕರ್, ದ್ರಾವಿಡ್, ರೋಹಿತ್ ಮುಂತಾದ ದಂತಕಥೆಗಳಿಗೆ ಕ್ರಿಕೆಟ್ ಕಲಿಸಿದ ಕೋಚ್ ವಾಸು ಪರಾಂಜಪೆ ನಿಧನ

ಮುಂಬೈನ ಮಾಜಿ ಕ್ರಿಕೆಟಿಗ ಹಾಗೂ ಪ್ರಸಿದ್ಧ ಕೋಚ್ ವಾಸು ಪರಾಂಜಪೆ ಸೋಮವಾರ (ಆಗಸ್ಟ್ 30) ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಸಚಿನ್, ಗವಾಸ್ಕರ್, ದ್ರಾವಿಡ್, ರೋಹಿತ್ ಮುಂತಾದ ದಂತಕಥೆಗಳಿಗೆ ಕ್ರಿಕೆಟ್ ಕಲಿಸಿದ ಕೋಚ್ ವಾಸು ಪರಾಂಜಪೆ ನಿಧನ
ವಾಸು ಪರಾಂಜಪೆ
TV9 Web
| Edited By: |

Updated on: Aug 30, 2021 | 7:22 PM

Share

ಮುಂಬೈನ ಮಾಜಿ ಕ್ರಿಕೆಟಿಗ ಹಾಗೂ ಪ್ರಸಿದ್ಧ ಕೋಚ್ ವಾಸು ಪರಾಂಜಪೆ ಸೋಮವಾರ (ಆಗಸ್ಟ್ 30) ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ವಾಸು ಅವರು 1956 ಮತ್ತು 1970 ರ ನಡುವೆ ಮುಂಬೈ ಮತ್ತು ಬರೋಡಾ ಪರವಾಗಿ 29 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅವರು 23.78 ಸರಾಸರಿಯಲ್ಲಿ 785 ರನ್ ಗಳಿಸಿದ್ದರು. ಹಾಗೆಯೇ ಒಂಬತ್ತು ವಿಕೆಟ್ ಪಡೆದರು. ವಾಸು ಪರಂಜಪೆ ಅವರು 21 ನವೆಂಬರ್ 1938 ರಂದು ಗುಜರಾತ್‌ನಲ್ಲಿ ಜನಿಸಿದರು. ಜತಿನ್ ಪರಂಜಪೆ ಅವರ ಮಗ ಭಾರತಕ್ಕಾಗಿ ಆಡಿದ್ದಾರೆ. ಇದರೊಂದಿಗೆ ಜತಿನ್ ಕೂಡ ರಾಷ್ಟ್ರೀಯ ಆಯ್ಕೆಗಾರರಾಗಿದ್ದಾರೆ.

ಆಟಗಾರನಾಗಿ ನಿವೃತ್ತರಾದ ನಂತರ, ವಾಸು ಪರಂಜಪೆ ತರಬೇತುದಾರರಾದರು ಮತ್ತು ಅನೇಕ ಕ್ರಿಕೆಟಿಗರು ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಸಹಾಯ ಮಾಡಿದರು. ಇವರುಗಳಲ್ಲಿ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಮುಂತಾದ ಹೆಸರುಗಳು ಸೇರಿವೆ. ವಾಸು ಹಲವು ತಂಡಗಳಿಗೆ ಕೋಚ್ ಆಗಿದ್ದರು. ಜೊತೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕೋಚ್ ಕೂಡ ಆಗಿದ್ದರು. ಅವರ ನಿಧನಕ್ಕೆ ರವಿಶಾಸ್ತ್ರಿ, ವಿನೋದ್ ಕಾಂಬ್ಳಿ ಸೇರಿದಂತೆ ಅನೇಕ ಹಿರಿಯರು ಸಂತಾಪ ಸೂಚಿಸಿದ್ದಾರೆ.

ವಾಸು ಸರ್ ಅವರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ರೋಹಿತ್ ಶರ್ಮಾ ಕಳೆದ ವರ್ಷವಷ್ಟೇ ನನ್ನ ವೃತ್ತಿಜೀವನದ ಪ್ರಗತಿಯಲ್ಲಿ ವಾಸು ಪರಂಜಪೆಯವರ ದೊಡ್ಡ ಕೊಡುಗೆ ಇದೆ ಎಂದು ಹೇಳಿದ್ದರು. ನಾನು ಇನ್ನೂ ವಾಸು ಸರ್ ಅವರ ಸಂದೇಶಕ್ಕಾಗಿ ಕಾಯುತ್ತಿದ್ದೇನೆ. ನನಗೆ ಗೊತ್ತು ವಾಸು ಸರ್ ಅವರು ಅವಕಾಶ ಸಿಕ್ಕಾಗಲೆಲ್ಲಾ ನನ್ನ ಪಂದ್ಯಗಳನ್ನು ನೋಡುತ್ತಿದ್ದರು. ನನ್ನನ್ನು ನಂಬಿರಿ, ಅವರ ಯಾವುದೇ ಸಣ್ಣ ಸಲಹೆಯು ತುಂಬಾ ಮೌಲ್ಯಯುತವಾಗಿದೆ. ಪ್ರತಿ ಇನ್ನಿಂಗ್ಸ್ ನಂತರ, ನಾನು ಅವರ ಸಲಹೆಯನ್ನು ಕೇಳಲು ಎದುರು ನೋಡುತ್ತಿದ್ದೇನೆ ಎಂದಿದ್ದರು.

ಸಂದೀಪ್ ಪಾಟೀಲ್ ಮದುವೆಗೆ ಸಹಾಯ ಸುನಿಲ್ ಗವಾಸ್ಕರ್ಗೆ ಸನ್ನಿ ಎಂಬ ಅಡ್ಡಹೆಸರನ್ನು ಇಟ್ಟವರೆ ವಾಸು ಪರಂಜಪೆ. ಕ್ರಿಕೆಟ್ ಜೊತೆಗೆ, ವಾಸು ಪರಂಜಪೆ ಇತರ ವಿಷಯಗಳಲ್ಲೂ ಕ್ರಿಕೆಟಿಗರಿಗೆ ಸಹಾಯ ಮಾಡುತ್ತಿದ್ದರು. ಅವರ ಇಂತಹ ಒಂದು ಪ್ರಸಂಗ ಸಂದೀಪ್ ಪಾಟೀಲ್ ಜೊತೆಗಿನದ್ದಾಗಿದೆ. ವಾಸ್ತವವಾಗಿ ಸಂದೀಪ್ ಪಾಟೀಲ್ ಮದುವೆಯಾಗಲು ಬಯಸಿದ್ದರು ಆದರೆ ಹುಡುಗಿಯ ಮನೆಯವರು ಸಂದೀಪ್ಗೆ ಮಗಳನ್ನು ನೀಡಲು ಒಪ್ಪುತ್ತಿರಲಿಲ್ಲ. ಆಗ ವಾಸು ಹುಡುಗಿಯ ಹೆತ್ತವರ ಬಳಿ ಹೋಗಿ, ನನಗೆ ಮಗಳಿದ್ದರೆ, ನಾನು ಅವಳನ್ನು ಸಂದೀಪ್ಗೆ ಮದುವೆ ಮಾಡುತ್ತಿದ್ದೆ ಎಂದಿದ್ದರಂತೆ. ಇದರ ನಂತರ ಸಂದೀಪ್ ದೀಪಾರನ್ನು ವಿವಾಹವಾದರು.

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ