AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Tigers & Tigresses: Tv9 ಅತಿ ದೊಡ್ಡ ಕಾರ್ಯಕ್ರಮ, ನಿಮ್ಮ ಮಕ್ಕಳ ಫುಟ್ಬಾಲ್ ಭವಿಷ್ಯಕ್ಕೆ ಇಲ್ಲಿದೆ ವೇದಿಕೆ

ದೇಶದ ನಂಬರ್-1 ಸುದ್ದಿ ನೆಟ್‌ವರ್ಕ್ ಟಿವಿ9, ‘ಇಂಡಿಯನ್ ಟೈಗರ್ಸ್ ಮತ್ತು ಇಂಡಿಯನ್ ಟೈಗ್ರೆಸಸ್’ (Indian Tigers & Tigresses) ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಡಿಯಲ್ಲಿ ಯುವ ಫುಟ್‌ಬಾಲ್ (football) ಪ್ರತಿಭೆಗಳ ಹುಡುಕಾಟಕ್ಕಾಗಿ ಬೃಹತ್ ವೇದಿಕೆಯನ್ನು ಸಿದ್ದಪಡಿಸಿದೆ. ಇದರಲ್ಲಿ ನೀವೂ ಭಾಗಿಯಾಗಿ.

Indian Tigers & Tigresses: Tv9 ಅತಿ ದೊಡ್ಡ ಕಾರ್ಯಕ್ರಮ, ನಿಮ್ಮ ಮಕ್ಕಳ ಫುಟ್ಬಾಲ್ ಭವಿಷ್ಯಕ್ಕೆ ಇಲ್ಲಿದೆ ವೇದಿಕೆ
ಇಂಡಿಯನ್ ಟೈಗರ್ಸ್ ಮತ್ತು ಇಂಡಿಯನ್ ಟೈಗ್ರೆಸಸ್
ಆಯೇಷಾ ಬಾನು
|

Updated on: Jun 15, 2024 | 7:24 AM

Share

ಫುಟ್‌ಬಾಲ್‌ನಲ್ಲೂ ಭಾರತ ಏಷ್ಯಾ ಚಾಂಪಿಯನ್ ಆಗಿದ್ದ ಕಾಲವೊಂದಿತ್ತು. ಫುಟ್ಬಾಲ್ ಅನ್ನು ಮತ್ತೊಮ್ಮೆ ಪ್ರಸಿದ್ಧಿಗೊಳಿಸುವ ಪ್ರಯತ್ನದಲ್ಲಿ ಟಿವಿ9 ನೆಟ್‌ವರ್ಕ್ ಯುರೋಪಿಯನ್ ಕ್ಲಬ್‌ಗಳ ಸಹಯೋಗದೊಂದಿಗೆ ಟ್ಯಾಲೆಂಟ್ ಹಂಟ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದರಿಂದಾಗಿ ಭಾರತದ ಲಕ್ಷಾಂತರ ಮಕ್ಕಳು ಈ ಸುಂದರ ಆಟದಲ್ಲಿ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಉತ್ತಮ ಅವಕಾಶವನ್ನು ಪಡೆಯುತ್ತಿದ್ದಾರೆ. ಇಂಡಿಯನ್ ಟೈಗರ್ಸ್‌ ಅಂಡ್‌ ಟೈಗ್ರೆಸ್ಸಸ್ ಹೆಸರಿನಲ್ಲಿ ಪ್ರತಿಭೆಗಳನ್ನು ಹುಡುಕುವ ವಿಶ್ವದ ಅತಿ ದೊಡ್ಡ ಕಾರ್ಯಕ್ರಮವು (Football Tallent Hunt – Indian Tigers And Tigresses) ಭಾರತದಲ್ಲಿ ಫುಟ್‌ಬಾಲ್‌ಗೆ ಉತ್ತಮ ಭವಿಷ್ಯದ ಪ್ರಮುಖ ಹೆಜ್ಜೆಯಾಗಿದೆ.

ಜರ್ಮನಿಯಲ್ಲಿ ಯುರೋ ಕಪ್ ನಡೆಯುತ್ತಿದ್ದು, ಭಾರತದಲ್ಲೂ ಅದರ ಕ್ರೇಜ್ ಕಡಿಮೆಯಿಲ್ಲ. ವಿಶೇಷವಾಗಿ ಮಕ್ಕಳು ಈ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ದೇಶದಲ್ಲಿ ಫುಟ್‌ಬಾಲ್‌ಗೆ ಹೊಸ ದಿಕ್ಕು ತೋರುವ ಚಿಂತನೆಯೊಂದಿಗೆ ದೇಶದ ಅತಿದೊಡ್ಡ ಸುದ್ದಿ ಚಾನಲ್ ಟಿವಿ9 Football Tallent Hunt – Indian Tigers And Tigresses ಕಾರ್ಯಕ್ರಮದ ಮೂಲಕ ಮುಂದಾಗಿದೆ. ಈ ಮೂಲಕ 12ರಿಂದ 14 ವರ್ಷದ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಹೆಚ್ಚಿನ ತರಬೇತಿಯೊಂದಿಗೆ ಅವಕಾಶ ನೀಡಲಾಗುತ್ತದೆ.

ಈ ಪ್ರತಿಭಾನ್ವೇಷಣೆಯಲ್ಲಿ 50 ಸಾವಿರ ಶಾಲೆಗಳ ಸುಮಾರು 10 ಲಕ್ಷ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಇವರಲ್ಲಿ ಉತ್ತಮ 20 ಹುಡುಗಿಯರು ಮತ್ತು 20 ಹುಡುಗರನ್ನು ತರಬೇತಿಗಾಗಿ ಆಸ್ಟ್ರಿಯಾಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲದೆ, ಆಗಸ್ಟ್‌ನಲ್ಲಿ ನಡೆಯಲಿರುವ ಜರ್ಮನ್ ಸೂಪರ್‌ಕಪ್ ಫೈನಲ್‌ನಲ್ಲಿ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಈ ಮಕ್ಕಳನ್ನು ಗೌರವಿಸಲಾಗುತ್ತದೆ. ಈ ಎಲ್ಲ ಮಕ್ಕಳ ತರಬೇತಿ, ಪ್ರಯಾಣ ಮತ್ತು ವಸತಿ ವೆಚ್ಚವನ್ನು ಟಿವಿ 9 ನೆಟ್‌ವರ್ಕ್ ಒದಗಿಸಲಿದೆ. ಈ ಟ್ಯಾಲೆಂಟ್ ಹಂಟ್ ಕಾರ್ಯಕ್ರಮವನ್ನು ಅನನ್ಯವಾಗಿಸಲು TV9 ನೆಟ್‌ವರ್ಕ್ ದೇಶ ಮತ್ತು ಪ್ರಪಂಚದ ದೊಡ್ಡ ಫುಟ್‌ಬಾಲ್ ಸಂಸ್ಥೆಗಳಾದ DFB, ಬುಂಡೆಸ್ಲಿಗಾ, ಇಂಡಿಯಾ ಫುಟ್‌ಬಾಲ್ ಸೆಂಟರ್, IFI, BVB ಮತ್ತು Reispo ನೊಂದಿಗೆ ಕೈ ಜೋಡಿಸಿದೆ.

ಇದನ್ನೂ ಓದಿ:‘ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ’; ಭಾರತದ ಫುಟ್ಬಾಲ್ ಬಗ್ಗೆ ಡಿಎಫ್‌ಬಿ ಅಧ್ಯಕ್ಷ ಬರ್ಂಡ್ ನ್ಯೂಯೆಂಡಾರ್ಫ್ ಹೇಳಿದ್ದಿದು

ನೀವು 12 ರಿಂದ 14 ವರ್ಷ ವಯಸ್ಸಿನವರಾಗಿದ್ದರೆ, ಈ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿಗಾಗಿ ವೆಬ್‌ಸೈಟ್‌ www.indiantigersandtigresses.com ಗೆ ಭೇಟಿ ನೀಡಿ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ. ಮೊದಲ ಸುತ್ತಿನಲ್ಲಿ ನಿಮ್ಮನ್ನು AI ಸಹಾಯದಿಂದ ಮೌಲ್ಯಮಾಪನ ಮಾಡಲಾಗುತ್ತದೆ.

ಇದರ ನಂತರ, ಹಂತ-2ರಲ್ಲಿ ದೇಶಾದ್ಯಂತ ವಿವಿಧ ನಗರಗಲ್ಲಿ ನೂರು ಶಿಬಿರಗಳನ್ನು ಆಯೋಜಿಸಿ ಅಂತಾರಾಷ್ಟ್ರೀಯ ತಜ್ಞರು AI ಸಹಾಯದಿಂದ ಮೊದಲ ಸುತ್ತಿನಲ್ಲಿ 10 ಸಾವಿರ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದಾದ ನಂತರ ಎರಡನೇ ಸುತ್ತಿನಲ್ಲಿ 200 ಹುಡುಗರು ಮತ್ತು 200 ಹುಡುಗಿಯರನ್ನು ಆಯ್ಕೆ ಮಾಡಲಾಗುತ್ತದೆ.

3 ನೇ ಸುತ್ತಿನಲ್ಲಿ, ಆಯ್ಕೆಯಾದ 400 ಮಕ್ಕಳಿಗೆ ಪುಣೆಯಲ್ಲಿ 5 ದಿನಗಳ ಶಿಬಿರವನ್ನು ಆಯೋಜಿಸಲಾಗುತ್ತದೆ. ಅಲ್ಲಿ ಅವರಿಗೆ ತರಬೇತಿ ನೀಡಲಾಗುತ್ತದೆ. ಇವರಲ್ಲಿ ಆಸ್ಟ್ರಿಯಾ ಮತ್ತು ಜರ್ಮನಿಗೆ ಪ್ರಯಾಣಿಸುವ 20 ಹುಡುಗರು ಮತ್ತು 20 ಹುಡುಗಿಯರನ್ನು ಆಯ್ಕೆ ಮಾಡಲಾಗುತ್ತದೆ.

ನೀವು ಸಹ ಫುಟ್ಬಾಲ್ ಜಗತ್ತಿನಲ್ಲಿ ನಿಮ್ಮ ಹೆಸರನ್ನು ಮಾಡಲು ಬಯಸಿದರೆ, ವಿಶ್ವದ ಅತಿದೊಡ್ಡ ಫುಟ್ಬಾಲ್ ಟ್ಯಾಲೆಂಟ್ ಹಂಟ್‌ನಲ್ಲಿ ಭಾಗವಹಿಸಿ ಮತ್ತು ನಿಮ್ಮ ಕನಸುಗಳಿಗೆ ಹೊಸ ಚೈತನ್ಯ ನೀಡಲು ಇಂದೇ ಹೆಸರನ್ನು ನೋಂದಾಯಿಸಿಕೊಳ್ಳಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್