ಟೆನಿಸ್ ಲೋಕದಲ್ಲಿ ಮಹತ್ವದ ದಾಖಲೆಯೊಂದನ್ನು ನಿರ್ಮಿಸುವಲ್ಲಿ ವಿಶ್ವದ ನಂ.1 ಶ್ರೇಯಾಂಕಿತ ಟೆನಿಸಿಗ ನೊವಾಕ್ ಜೋಕೊವಿಚ್ಗೆ (Novak Djokovic) ಎಡವಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಮಧ್ಯರಾತ್ರಿ ನಡೆದ ಯುಎಸ್ ಓಪನ್ ನ ಪುರುಷರ ಸಿಂಗಲ್ ಫೈನಲ್ನಲ್ಲಿ (US Open Final) ರಷ್ಯಾದ ಡಾನಿಲ್ ಮಡ್ವೆಡೆವ್ (Daniil Medvedev) ಅವರ ವಿರುದ್ಧ ಸೋಲುವ ಮೂಲಕ ಇತಿಹಾಸ ಸೃಷ್ಟಿಸುವ ಅವಕಾಶ ಕಳೆದಕೊಂಡರು. ಇತ್ತ ಮಡ್ವೆಡೆವ್ ಚೊಚ್ಚಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದ ಸಾಧನೆ ಮಾಡಿದ್ದಾರೆ.
ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಉಭಯ ಆಟಗಾರರು ಗೆಲುವಿನ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದರು. ಆದರೆ, ಮೂರೂ ಸೆಟ್ನಲ್ಲಿ ಮಡ್ವೆಡೆವ್ ಮುನ್ನಡೆ ಸಾಧಿಸಿ ಗೆದ್ದು ಬೀಗಿದರು. ಜೋಕೊವಿಚ್ಗೆ ಕಮ್ಬ್ಯಾಕ್ ಮಾಡಲು ಅವಕಾಶ ಕೊಡಲೇಯಿಲ್ಲ. ಮೊದಲ ಸೆಟ್ನಲ್ಲಿ 6-4, ಎರಡನೇ ಸೆಟ್ನಲ್ಲೂ 6-4 ಹಾಗೂ ಅಂತಿಮ ಮೂರನೇ ಸೆಟ್ನಲ್ಲೂ 6-4 ಪಾಯಿಂಟ್ಗಳ ಮುನ್ನಡೆ ಸಾಧಿಸಿ ರಷ್ಯಾದ ಎರಡನೇ ಶ್ರೇಯಾಂಕಿತ ಆಟಗಾರ ಮಡ್ವೆಡೆವ್ ಭರ್ಜರಿ ಜಯ ತಮ್ಮದಾಗಿಸಿದರು.
ಕಳೆದ ತಿಂಗಳಷ್ಟೇ ಮುಕ್ತಾಯವಾದ ಟೋಕಿಯೊ ಒಲಿಂಪಿಕ್ಸ್‌ನ ಟೆನಿಸ್ ಸೆಮಿಫೈನಲ್‌ನಲ್ಲಿ ಜೋಕೊವಿಚ್ ಸೋಲುವ ಮೂಲಕ ಗೋಲ್ಡನ್ ಗ್ರ್ಯಾನ್ ಸ್ಲಾಂ ಗೆಲ್ಲುವಲ್ಲಿ ಎಡವಿದರು. ಇದೀಗ ಯುಎಸ್ ಓಪನ್ ಫೈನಲ್‌ನಲ್ಲೂ ಸೋಲು ಕಂಡಿದ್ದಾರೆ. ರಾಡ್ ಲೆವರ್ ದಾಖಲೆ ಸರಿಗಟ್ಟುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.
IPL 2021: ಐಪಿಎಲ್ ಇತಿಹಾಸದ ಬೆಸ್ಟ್ ಓಪನರ್ ಯಾರು ಗೊತ್ತಾ?
(US Open Final Daniil Medvedev cruised past Novak Djokovic to win his maiden Grand Slam title)
Published On - 7:04 am, Mon, 13 September 21