US Open Final: ಯುಎಸ್ ಓಪನ್ ರೋಚಕ ಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡ ಹಾಲಿವುಡ್ನ ಸ್ಟಾರ್ ನಟ-ನಟಿಯರು
ಹಾಲಿವುಡ್ನ ಬ್ರಾಡ್ ಪಿಟ್, ಬ್ರ್ಯಾಡ್ಲೆ ಕೂಪರ್, ಲಿಯಾನಾರ್ಡೊ ಡಿಕಾಪ್ರಿಯೊ, ಆಸ್ಕರ್ ಪ್ರಶಸ್ತಿ ಗೆದ್ದ ರಮಿ ಮಲೆಕ್ ಸೇರಿದಂತೆ ಅನೇಕ ಸ್ಟಾರ್ಗಳು ಯುಎಸ್ ಓಪನ್ ಪೈನಲ್ ಪಂದ್ಯ ವೀಕ್ಷಿಸಲು ಬಂದಿದ್ದರು.
ನ್ಯೂಯಾರ್ಕ್ ನಲ್ಲಿ ನಿನ್ನೆ ಮುಕ್ತಾಯಗೊಂಡ ಯುಎಸ್ ಓಪನ್ ಫೈನಲ್ (US OPen Final) ಪಂದ್ಯದಲ್ಲಿ ನೇರ ಸೆಟ್ ಗಳ ಗೆಲುವಿನೊಂದಿಗೆ ಡ್ಯಾನಿಲ್ ಮೆಡ್ವೆಡೆವ್ (Daniil Medvedev) ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಬಾಜಿಕೊಂಡರು. ರಷ್ಯಾದ ಎರಡನೇ ರ್ಯಾಂಕಿನ ಆಟಗಾರ ಮೆಡ್ವೆಡೆವ್ ಜೊಕೊವಿಚ್ (Novak Djokovic) ವಿರುದ್ಧ 6-4, 6-4, 6-4 ನೇರ ಸೆಟ್ ಗಳ ಅಂತರದಿಂದ ಸೋಲಿಸಿದರು. ಈ ಮೂಲಕ 21 ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆದ್ದು 22ನೇ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲುತ್ತೇನೆಂದು ಎದುರು ನೋಡುತ್ತಿದ್ದ ಸರ್ಬಿಯಾ ಬಲಿಷ್ಠ ನೊವಾಕ್ ಜೊಕೋವಿಕ್‌ಗೆ ಆಘಾತ ಉಂಟಾಯಿತು. ಈ ರೋಚಕ ಪಂದ್ಯ ವೀಕ್ಷಿಸಲು ಹಾಲಿವುಡ್ನ ಸ್ಟಾರ್ ನಟ- ನಟಿಯರು ಟೆನಿಸ್ ಕೋರ್ಟ್ನಲ್ಲಿ ಹಾಜರಿದ್ದರು.
ಹಾಲಿವುಡ್ನ ಬ್ರಾಡ್ ಪಿಟ್, ಬ್ರ್ಯಾಡ್ಲೆ ಕೂಪರ್, ಲಿಯಾನಾರ್ಡೊ ಡಿಕಾಪ್ರಿಯೊ, ಆಸ್ಕರ್ ಪ್ರಶಸ್ತಿ ಗೆದ್ದ ರಮಿ ಮಲೆಕ್ ಸೇರಿದಂತೆ ಅನೇಕ ಸ್ಟಾರ್ಗಳು ಯುಎಸ್ ಓಪನ್ ಪೈನಲ್ ಪಂದ್ಯ ವೀಕ್ಷಿಸಲು ಬಂದಿದ್ದರು. ಇವರ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
View this post on Instagram
ರಷ್ಯಾದ ಡಾನಿಲ್ ಮಡ್ವೆಡೆವ್ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟಕ್ಕೆ ಮುತ್ತಿಟ್ಟ ಸಾಧನೆ ಮಾಡಿದರು. ಫೈನಲ್ ಪಂದ್ಯ ನಡೆದ ಆರ್ಥುರ್ ಆಶ್ ಸ್ಟೇಡಿಯಂನಲ್ಲಿ ಜೋಕೊವಿಚ್ ಅವರು ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ನಷ್ಟು ಪ್ರಿತಿಸುವ ಅಭಿಮಾನಿ ಬಳಗವನ್ನು ಹೊಂದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಜೋಕೊವಿಚ್ ಆರ್ಥುರ್ ಆಶ್ ಸ್ಟೇಡಿಯಂಗೆ ಫೈನಲ್ ಪಂದ್ಯಕ್ಕಾಗಿ ಕಾಲಿಟ್ಟ ಸಂದರ್ಭ ಇವರ ಹೆಸರನ್ನು ಕೂಗಿತು.
ಜೋಕೊವಿಚ್ಗೆ ಊಹಿಸಲಾಗದ ಬೆಂಬಲ ಸಿಕ್ಕಿತಾದರೂ ಇತಿಹಾಸ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಮೊದಲ ಸೆಟ್ನಲ್ಲಿ 6-4, ಎರಡನೇ ಸೆಟ್ನಲ್ಲೂ 6-4 ಹಾಗೂ ಅಂತಿಮ ಮೂರನೇ ಸೆಟ್ನಲ್ಲೂ 6-4 ಪಾಯಿಂಟ್ಗಳ ಮುನ್ನಡೆ ಸಾಧಿಸಿ ರಷ್ಯಾದ ಎರಡನೇ ಶ್ರೇಯಾಂಕಿತ ಆಟಗಾರ ಮಡ್ವೆಡೆವ್ ಭರ್ಜರಿ ಜಯ ತಮ್ಮದಾಗಿಸಿದರು.
ಇದರೊಂದಿಗೆ ಜೋಕೊವಿಚ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಮಡ್ವೆಡೆವ್ ಸೇಡು ತೀರಿಸಿಕೊಂಡರು. ಜೋಕೊವಿಚ್ ಇತಿಹಾಸದಲ್ಲೇ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್ ಸಾಧನೆ ಮಾಡಿದ ಮೂರನೇ ಕ್ರೀಡಾಪಟು ಎನಿಸಿಕೊಳ್ಳುವ ಸುವರ್ಣಾವಕಾಶದಿಂದ ವಂಚಿತರಾದರು. ಈ ಸೋಲಿನ ಮಹತ್ವವನ್ನು ಅರಿತುಕೊಂಡಿರುವ ಜೋಕೊವಿಚ್, ಕೋರ್ಟ್ನಲ್ಲೇ ಕಣ್ಣೀರಿಟ್ಟ ಘಟನೆಯೂ ನಡೆಯಿತು.
IPL 2021: ಹೋಟೆಲ್ ರೂಮ್ನಲ್ಲೇ ಅಭ್ಯಾಸ ಆರಂಭಿಸಿದ ಸನ್ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್
Virat Kohli: ಆರ್ಸಿಬಿ ತಂಡ ಸೇರಿಕೊಂಡ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್
(US Open Final Leonardo DiCaprio Bradley Cooper Brad Pitt others add Hollywood spice to US Open)