Novak Djokovic: ಇತಿಹಾಸ ಸೃಷ್ಟಿಸಲು ತಯಾರಾದ ನೊವಾಕ್ ಜೋಕೊವಿಚ್: ಫೈನಲ್​ನಲ್ಲಿ ಗೆದ್ದರೆ ಏನಾಗಲಿದೆ?

US Open 2021 Final: 2021ನೇ ಸಾಲಿನಲ್ಲಿ ಜೋಕೊವಿಚ್ ಈಗಾಗಲೇ ಆಸ್ಟ್ರೇಲಿಯಾ ಓಪನ್‌, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಜಯಿಸಿದ್ದು, ಇದೀಗ ಯುಎಸ್ ಓಪನ್ ಜಯಿಸಿದರೆ, ಕ್ಯಾಲಂಡರ್‌ ಗ್ರ್ಯಾನ್‌ ಸ್ಲಾಂ ಜಯಿಸಿದ ಎರಡನೇ ಟೆನಿಸಿಗ ಎನಿಸಿಕೊಳ್ಳಲಿದ್ದಾರೆ.

Novak Djokovic: ಇತಿಹಾಸ ಸೃಷ್ಟಿಸಲು ತಯಾರಾದ ನೊವಾಕ್ ಜೋಕೊವಿಚ್: ಫೈನಲ್​ನಲ್ಲಿ ಗೆದ್ದರೆ ಏನಾಗಲಿದೆ?
ಇನ್ನೂ ಟೆನಿಸ್ ಲೋಕದಲ್ಲಿ ಮಹತ್ವದ ದಾಖಲೆಯೊಂದನ್ನು ನಿರ್ಮಿಸಲು ವಿಶ್ವದ ನಂ.1 ಶ್ರೇಯಾಂಕಿತ ಟೆನಿಸಿಗ ನೊವಾಕ್ ಜೋಕೊವಿಚ್ಗೆ ಇನ್ನು ಕೇವಲ ಒಂದು ಗೆಲುವಷ್ಟೇ ಬೇಕಾಗಿದೆ. ರಷ್ಯಾದ ಡಾನಿಲ್ ಮಡ್ವೆಡೆವ್ ಅವರ ವಿರುದ್ಧ ಭಾನುವಾರ ನಡೆಯಲಿರುವ ಫೈನಲ್ ಕಾದಾಟದಲ್ಲಿ ಗೆಲುವು ಸಾಧಿಸಿದರೆ ವಿಶೇಷ ದಾಖಲೆ ಬರೆಯಲಿದ್ದಾರೆ.
Follow us
TV9 Web
| Updated By: Vinay Bhat

Updated on: Sep 12, 2021 | 8:49 AM

ಟೆನಿಸ್ ಲೋಕದಲ್ಲಿ ಮಹತ್ವದ ದಾಖಲೆಯೊಂದನ್ನು ನಿರ್ಮಿಸಲು ವಿಶ್ವದ ನಂ.1 ಶ್ರೇಯಾಂಕಿತ ಟೆನಿಸಿಗ ನೊವಾಕ್ ಜೋಕೊವಿಚ್​ಗೆ (Novak Djokovic) ಇನ್ನು ಕೇವಲ ಒಂದು ಗೆಲುವಷ್ಟೇ ಬೇಕಾಗಿದೆ. ರಷ್ಯಾದ ಡಾನಿಲ್ ಮಡ್ವೆಡೆವ್ ಅವರ ವಿರುದ್ಧ ಭಾನುವಾರ ನಡೆಯಲಿರುವ ಫೈನಲ್ ಕಾದಾಟದಲ್ಲಿ ಗೆಲುವು ಸಾಧಿಸಿದರೆ, 1969ರ ನಂತರ ಕ್ಯಾಲೆಂಡರ್ ವರ್ಷವೊಂದರಲ್ಲಿ ಎಲ್ಲ ಗ್ರ್ಯಾನ್ ಸ್ಲಾಂ (Grand Slams) ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ಆಟಗಾರ ಎಂಬ ವಿಶೇಷ ದಾಖಲೆ ಬರೆಯಲಿದ್ದಾರೆ.

ಕಳೆದ ತಿಂಗಳಷ್ಟೇ ಮುಕ್ತಾಯವಾದ ಟೋಕಿಯೊ ಒಲಿಂಪಿಕ್ಸ್‌ನ ಟೆನಿಸ್ ಸೆಮಿಫೈನಲ್‌ನಲ್ಲಿ ಜೋಕೊವಿಚ್ ಸೋಲುವ ಮೂಲಕ ಗೋಲ್ಡನ್‌ ಗ್ರ್ಯಾನ್‌ ಸ್ಲಾಂ ಗೆಲ್ಲುವಲ್ಲಿ ಎಡವಿದರು. ಇದೀಗ ಯುಎಸ್‌ ಓಪನ್‌ ಸೆಮಿಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿ ಫೈನಲ್​ಗೆ ತಲುಪದ್ದಾರೆ. 52 ವರ್ಷಗಳ ಹಿಂದೆ ರಾಡ್ ಲೆವರ್ ವರ್ಷವೊಂದರಲ್ಲೇ ಸತತ 4 ಗ್ರ್ಯಾನ್‌ ಸ್ಲಾಂ ಜಯಿಸುವ ಮೂಲಕ ಕ್ಯಾಲಂಡರ್ ಗ್ರ್ಯಾನ್‌ ಸ್ಲಾಂ ಜಯಿಸಿದ ಮೊದಲ ಹಾಗೂ ಏಕೈಕ ಟೆನಿಸಿಗ ಎನಿಸಿದ್ದಾರೆ. ಇದೀಗ ರಾಡ್ ಲೆವರ್ ದಾಖಲೆ ಸರಿಗಟ್ಟುವ ಅವಕಾಶ ಜೋಕೋವಿಚ್‌ಗಿದೆ.

ಫೈನಲ್‌ ತಲುಪುವ ಉತ್ಸಾಹದೊಂದಿಗೆ ಕಣಕ್ಕೆ ಇಳಿದಿದ್ದ ಅಲೆಗ್ಸಾಂಡರ್ ಜ್ವೆರೆವ್ ಅವರು ಮೊದಲನೇ ಸೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದರು ಹಾಗೂ 4-6 ಅಂತರದಲ್ಲಿ ವಿಶ್ವದ ನಂ.1 ಆಟಗಾರರನ್ನು ಸೋಲಿಸಿದರು. ನಂತರ, ಎಚ್ಚೆತ್ತುಕೊಂಡ ಸರ್ಬಿಯಾ ಆಟಗಾರ ಎರಡು ಹಾಗೂ ಮೂರನೇ ಸೆಟ್‌ಗಳನ್ನು ಗೆದ್ದುಕೊಳ್ಳುವ ಮೂಲಕ ಜ್ವೆರೆವ್‌ಗೆ ತಿರುಗೇಟು ನೀಡಿದರು.

ಪ್ರಸಕ್ತ ವರ್ಷದಲ್ಲಿ ವಿಂಬಲ್ಡನ್‌, ಫ್ರೆಂಚ್‌ ಓಪನ್‌ ಹಾಗೂ ಆಸ್ಟ್ರೇಲಿಯಾ ಓಪನ್‌ ಗೆದ್ದಿರುವ ನೊವಾಕ್‌ ಜೋಕೊವಿಚ್ ಇದೀಗ ಯುಎಸ್‌ ಓಪನ್‌ ಮುಡಿಗೇರಿಸಿಕೊಳ್ಳುವ ಮೂಲಕ ಕ್ಯಾಲೆಂಡರ್‌ ಸ್ಲ್ಯಾಮ್‌ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಯುಎಸ್ ಫೈನಲ್‌ ಗೆದ್ದರೆ, ಅತಿ ಹೆಚ್ಚು ಗ್ರ್ಯಾನ್‌ ಸ್ಲಾಮ್‌ ಗೆದ್ದ ವಿಶ್ವದ ಮೊದಲ ಟೆನಿಸ್‌ ಆಟಗಾರ ಎಂಬ ದಾಖಲೆಯನ್ನು ಜೋಕೊವಿಚ್ ಮಾಡಲಿದ್ದಾರೆ.

2021ನೇ ಸಾಲಿನಲ್ಲಿ ಜೋಕೊವಿಚ್ ಈಗಾಗಲೇ ಆಸ್ಟ್ರೇಲಿಯಾ ಓಪನ್‌, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಜಯಿಸಿದ್ದು, ಇದೀಗ ಯುಎಸ್ ಓಪನ್ ಜಯಿಸಿದರೆ, ಕ್ಯಾಲಂಡರ್‌ ಗ್ರ್ಯಾನ್‌ ಸ್ಲಾಂ ಜಯಿಸಿದ ಎರಡನೇ ಟೆನಿಸಿಗ ಎನಿಸಿಕೊಳ್ಳಲಿದ್ದಾರೆ. ಜೋಕೊವಿಚ್ ಅಮೆರಿಕ ಓಪನ್​ನಲ್ಲಿ ಈವರೆಗೆ ಮೂರು ಬಾರಿ ಚಾಂಪಿಯನ್ ಆಗಿದ್ದಾರೆ. ಇಲ್ಲಿ ಮತ್ತೆ ಗೆದ್ದರೆ ಒಟ್ಟಾರೆ 21ನೇ ಗ್ರ್ಯಾನ್ ಸ್ಲಾಂ ಜಯಿಸಿದ ಸಾಧನೆ ಮಾಡಲಿದ್ದು, ಹೊಸ ದಾಖಲೆಯೂ ನಿರ್ಮಾಣವಾಗಲಿದೆ. ಸ್ವಿಟ್ಜರ್ಲೆಂಡ್​ನ ರೋಜರ್ ಫೆಡರರ್ ಮತ್ತು ಸ್ಪೇನ್​ನ ರಫೆಲ್ ನಡಾಲ್ ಜೊತೆ ಜೋಕೊವಿಚ್ ಸದ್ಯ ಪುರುಷರ ಸಿಂಗಲ್ಸ್​ನಲ್ಲಿ ಅತಿಹೆಚ್ಚು (20) ಗ್ರ್ಯಾನ್ ಸ್ಲಾಂ ಗೆದ್ದ ಆಟಗಾರ ಎಂಬ ಶ್ರೇಯವನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಕಾಲ ಮಾನದ ಪ್ರಕಾರ ಫೈನಲ್ ಪಂದ್ಯ ಸೋಮವಾರ ಮಧ್ಯರಾತ್ರಿ 1:30ಕ್ಕೆ ಆರಂಭವಾಗಲಿದೆ.

IPL 2021: ಮ್ಯಾಂಚೆಸ್ಟರ್​ನಿಂದ ನೇರವಾಗಿ ದುಬೈ ತಲುಪಿದ ಟೀಮ್ ಇಂಡಿಯಾ ಆಟಗಾರರು

India vs England: ‘ಇದು ಟೆಸ್ಟ್ ಕ್ರಿಕೆಟ್ ಅಂತ್ಯದ ಆರಂಭ’: 5ನೇ ಟೆಸ್ಟ್ ರದ್ದಾಗಿದ್ದಕ್ಕೆ ಇನ್ನೂ ನಿಂತಿಲ್ಲ ಆಂಗ್ಲರ ಟೀಕೆಗಳು

(Novak Djokovic is just 1 win away from tennis immortality at US Open 2021 Finals tonight)

ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು
ಬಾಕ್ಸಿಂಗ್ ಡೇ ಟೆಸ್ಟ್​ಗಾಗಿ ಬೆವರಿಳಿಸಿದ ಟೀಮ್ ಇಂಡಿಯಾ ಬೌಲರ್​ಗಳು