ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಮೂರನೇ ದಿನ ಭಾರತಕ್ಕೆ ಐದನೇ ದಿನ ಲಭಿಸಿದೆ. ಕ್ರೀಡಾಕೂಟದ ಎರಡನೇ ದಿನ 1 ಚಿನ್ನ ಸೇರಿದಂತೆ 4 ಪದಕ ಗೆದ್ದಿದ್ದ ಭಾರತಕ್ಕೆ ಮೂರನೇ ದಿನ ಒಂದು ಕಂಚಿನ ಪದಕ ಸಿಕ್ಕಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ಹೆಚ್ 1 ಫೈನಲ್ನಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ 211.1 ಅಂಕ ಸಂಪಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಎಂಟು ಮಹಿಳೆಯರ ನಡುವೆ ನಡೆದ ಈ ಫೈನಲ್ ಸುತ್ತಿನಲ್ಲಿ ರುಬಿನಾ ಬೆಳ್ಳಿ ಪದಕದ ರೇಸ್ನಲ್ಲಿದ್ದರು. ಆದರೆ ಕೊನೆಯ ಎರಡು ಶಾಟ್ಗಳಲ್ಲಿ ಲಯ ಕಳೆದುಕೊಂಡ ಅವರು ಒಟ್ಟು 211.1 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಮೊನ್ನೆ ನಡೆದ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದರು.
ರುಬಿನಾ ಫ್ರಾನ್ಸಿಸ್ ಗೆದ್ದ ಕಂಚಿನ ಪದಕ, ಶೂಟಿಂಗ್‌ನಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಪದಕ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟಾರೆ ಐದನೇ ಪದಕವಾಗಿದೆ. ಇದಕ್ಕೂ ಮೊದಲು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಎರಡನೇ ದಿನ, ಅವನಿ ಲೆಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಈವೆಂಟ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದರೆ, ಇದೇ ಈವೆಂಟ್ನಲ್ಲಿ ಮತ್ತೊರ್ವ ಭಾರತೀಯ ಸ್ಪರ್ಧಿ ಮೋನಾ ಅಗರ್ವಾಲ್ ಕಂಚಿನ ಪದಕ ಗೆದ್ದಿದ್ದರು. ಆ ನಂತರ, ಪುರುಷರ 10 ಮೀಟರ್ ಏರ್ ಪಿಸ್ತೂಲ್ (SH1) ನಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದಿದ್ದರು. ಉಳಿದಂತೆ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದುಕೊಟ್ಟಿದ್ದರು.
BRONZE 🥉 For INDIA 🇮🇳
Rubina Francis wins bronze medal in the Women’s 10m Air Pistol SH1 Final with a score of 211.1⚡️#Paris2024 #Cheer4Bharat #Paralympic2024 #ParaShooting@mansukhmandviya @MIB_India @PIB_India @IndiaSports @ParalympicIndia @PCI_IN_Official @Media_SAI… pic.twitter.com/iSBUZ6KNS7
— Doordarshan Sports (@ddsportschannel) August 31, 2024
And that’s medal no. 5⃣ for 🇮🇳 at #ParisParalympics2024🤩🤩
Rubina Francis’ magic prevails, she claims a #Bronze🥉in #ParaShooting P2 – Women’s 10m Air Pistol SH1 event with a score of 211.1🥳🤩
She becomes 1st Indian female para-shooting athlete to win a medal in Pistol event.… pic.twitter.com/dQ1EjVUzD3
— SAI Media (@Media_SAI) August 31, 2024
ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ಹೆಚ್ 1 ಫೈನಲ್ ಸುತ್ತಿನ ಮೊದಲ ಹಂತ ಮುಗಿದ ಬಳಿಕ ರುಬಿನಾ ಫ್ರಾನ್ಸಿಸ್ ಮೂರನೇ ಸ್ಥಾನದಲ್ಲಿದ್ದರು. ಈ ಹಂತದಲ್ಲಿ 10 ಶಾಟ್ ಹೊಡೆದ ಅವರು ಒಟ್ಟು 97.6 (10.7, 10.3, 10.3, 9.7, 9.0, 8.4, 10.0, 9.8, 9.6, 9.8) ಅಂಕ ಗಳಿಸಿದರು. 2ನೇ ಹಂತದಲ್ಲಿ ತಮ್ಮ ಅದ್ಭುತ ಆಟವನ್ನು ಮುಂದುವರಿಸಿದ ರುಬಿನಾ ಫ್ರಾನ್ಸಿಸ್ ಐತಿಹಾಸಿಕ ಕಂಚಿನ ಪದಕ ಗೆದ್ದರು. ವಾಸ್ತವವಾಗಿ ರುಬಿನಾ, ಪಿಸ್ತೂಲ್ ಶೂಟಿಂಗ್‌ನಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
ಮಧ್ಯಪ್ರದೇಶದ ಜಬಲ್‌ಪುರದ ಪ್ಯಾರಾ ಪಿಸ್ತೂಲ್ ಶೂಟರ್ ರುಬಿನಾ ಫ್ರಾನ್ಸಿಸ್ ಇತ್ತೀಚಿನ ದಿನಗಳಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ತೋರಿದ್ದಾರೆ. ಇದಕ್ಕೂ ಮೊದಲು ರುಬಿನಾ ಫ್ರಾನ್ಸಿಸ್ ಅವರು ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್ ವಿಶ್ವಕಪ್-2023 ರಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದರು. ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ P-6 ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಅವರು ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಪ್ಯಾರಾಲಿಂಪಿಕ್ನಲ್ಲಿ ಕಂಚು ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ರುಬಿನಾ ಅವರ ತಾಯಿ ಸುನೀತಾ ಫ್ರಾನ್ಸಿಸ್ ಜಬಲ್‌ಪುರದ ಹೆರಿಗೆ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರೆ, ಅವರ ತಂದೆ ಸೈಮನ್ ಮೋಟಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Sat, 31 August 24