ಪಿಎಂ ಕೇರ್ಸ್ ಫಂಡ್​ಗೆ ನಾನು ದೇಣಿಗೆ ನೀಡುವುದಿಲ್ಲ! ಉಲ್ಟಾ ಹೊಡೆದ ಪ್ಯಾಟ್​ ಕಮ್ಮಿನ್ಸ್.. ಕಾರಣವೇನು ಗೊತ್ತಾ?

|

Updated on: May 03, 2021 | 7:48 PM

Pat Cummins: ಯುನಿಸೆಫ್ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆರ್ಥಿಕ ನೆರವು ನೀಡಿದ ನಂತರ, ಕಮ್ಮಿನ್ಸ್ ತನ್ನ ಮನಸ್ಸನ್ನು ಬದಲಾಯಿಸಿದಂತೆ ತೋರುತ್ತದೆ.

ಪಿಎಂ ಕೇರ್ಸ್ ಫಂಡ್​ಗೆ ನಾನು ದೇಣಿಗೆ ನೀಡುವುದಿಲ್ಲ! ಉಲ್ಟಾ ಹೊಡೆದ ಪ್ಯಾಟ್​ ಕಮ್ಮಿನ್ಸ್.. ಕಾರಣವೇನು ಗೊತ್ತಾ?
ಪ್ಯಾಟ್ ಕಮ್ಮಿನ್ಸ್
Follow us on

ಆಸ್ಟ್ರೇಲಿಯಾದ ವೇಗದ ಬೌಲರ್ ಕೋಲ್ಕತಾ ನೈಟ್ ರೈಡರ್ಸ್‌ನ ಪ್ಯಾಟ್ ಕಮ್ಮಿನ್ಸ್ ಇತ್ತೀಚೆಗೆ ಭಾರತದ ಕೊರೊನಾ ರೋಗಿಗಳಿಗೆ ಆಮ್ಲಜನಕದ ಸರಬರಾಜಿಗೆ ಸಹಾಯವಾಗಲು 50000 ಡಾಲರ್​ ಹಣವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಪಿಎಂ ಕೇರ್ಸ್ ಫಂಡ್​ಗೆ 37 ಲಕ್ಷ ರೂಪಾಯಿ ನೀಡುವ ಬಗ್ಗೆ ಮಾತನಾಡಿದರು. ಆದರೆ ಈಗ ಅವರು ಪಿಎಂ ಕೇರ್ಸ್ ಫಂಡ್ ಬದಲಿಗೆ ಬೇರೆಡೆ ಹಣವನ್ನು ನೀಡಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಈ ಹಣವನ್ನು ಯುನಿಸೆಫ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್‌ಗೆ ನೀಡಿದ್ದಾರೆ. ಕಮ್ಮಿನ್ಸ್ ಈ ಮೊತ್ತವನ್ನು ಒಂದು ವಾರದ ಹಿಂದೆ ಪಿಎಂ ಕೇರ್ಸ್ ಫಂಡ್‌ಗೆ ನೀಡುವುದಾಗಿ ಭರವಸೆ ನೀಡಿದರು.

ಯುನಿಸೆಫ್ ಆಸ್ಟ್ರೇಲಿಯಾವನ್ನು ಆರಿಸಿಕೊಂಡಿದ್ದಾರೆ
ಭಾರತವು ಗಂಭೀರ ಆರೋಗ್ಯ ಬಿಕ್ಕಟ್ಟಿನಿಂದ ಬಳಲುತ್ತಿದ್ದು, 27 ವರ್ಷದ ವೇಗದ ಬೌಲರ್ ಕಳೆದ ಸೋಮವಾರ ಕೋವಿಡ್‌ನ ಹೆಚ್ಚುತ್ತಿರುವ ಪ್ರಕರಣಗಳೊಂದಿಗೆ ಹೋರಾಡುತ್ತಿರುವ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗಾಗಿ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಕಮ್ಮಿನ್ಸ್ ಪಿಎಂ ಕೇರ್ಸ್ ಫಂಡ್‌ಗೆ ಹಣವನ್ನು ನೀಡುವುದಾಗಿ ಘೋಷಿಸಿದಾಗ, ಅನೇಕ ಜನರು ಸೋಷಿಯಲ್ ಮೀಡಿಯಾದಲ್ಲಿ ಅವರ ನಿರ್ಧಾರವನ್ನು ಪ್ರಶ್ನಿಸಿದರು. ಪಾರದರ್ಶಕತೆಯ ಕೊರತೆಯನ್ನು ಉಲ್ಲೇಖಿಸಿ ಹಣವನ್ನು ಬೇರೆಡೆ ದಾನ ಮಾಡಲು ಅವರನ್ನು ಕೇಳಿದ್ದರು. ಆದಾಗ್ಯೂ, ಪ್ಯಾಟ್ ಕಮ್ಮಿನ್ಸ್ ಅವರು ಪಿಎಂ ಕೇರ್ಸ್ ಫಂಡ್‌ಗೆ ಹಣವನ್ನು ನೀಡುವ ನಿರ್ಧಾರವನ್ನು ಏಕೆ ಬದಲಾಯಿಸಿದರು ಮತ್ತು ಯುನಿಸೆಫ್ ಆಸ್ಟ್ರೇಲಿಯಾವನ್ನು ಏಕೆ ಆರಿಸಿಕೊಂಡರು ಎಂಬುದನ್ನು ವಿವರಿಸಲಿಲ್ಲ.

ಕ್ರಿಕೆಟ್ ಆಸ್ಟ್ರೇಲಿಯಾ ಅದ್ಭುತ ಕೆಲಸ ಮಾಡಿದೆ
ಯುನಿಸೆಫ್ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆರ್ಥಿಕ ನೆರವು ನೀಡಿದ ನಂತರ, ಕಮ್ಮಿನ್ಸ್ ತನ್ನ ಮನಸ್ಸನ್ನು ಬದಲಾಯಿಸಿದಂತೆ ತೋರುತ್ತದೆ. ಕಮಿನ್ಸ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹೀಗೆ ಬರೆದಿದ್ದಾರೆ, ‘ಕ್ರಿಕೆಟ್ ಆಸ್ಟ್ರೇಲಿಯಾ ಅದ್ಭುತ ಕೆಲಸ ಮಾಡಿದೆ, ನನ್ನ ದೇಣಿಗೆಯನ್ನು ಯುನಿಸೆಫ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್‌ಗೆ ಹಂಚಿಕೆ ಮಾಡಿದ್ದೇನೆ. ನಿಮಗೆ ಸಾಧ್ಯವಾದರೆ, ದಯವಿಟ್ಟು ಯುನಿಸೆಫ್ ಆಸ್ಟ್ರೇಲಿಯಾವನ್ನು ಬೆಂಬಲಿಸಿ ಎಂದಿದ್ದಾರೆ.

ಭಾರತದ ಕೋವಿಡ್ -19 ವಿರುದ್ಧದ ಹೋರಾಟಕ್ಕೆ 50,000 ಆಸ್ಟ್ರೇಲಿಯಾ ಡಾಲರ್‌ಗಳನ್ನು ಸಹಾಯ ಮಾಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ವಾಗ್ದಾನ ಮಾಡಿದೆ ಮತ್ತು ತಮ್ಮ ಆಟಗಾರರ ಸಂಘ ಮತ್ತು ಯುನಿಸೆಫ್‌ನ ಬೆಂಬಲದೊಂದಿಗೆ ಹೆಚ್ಚಿನ ಹಣವನ್ನು ಸಂಗ್ರಹಿಸುವುದಾಗಿ ಹೇಳಿದರು.