Thisara Perera: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್‌ಬೈ ಹೇಳಿದ ಶ್ರೀಲಂಕಾ ತಂಡದ ಸ್ಟಾರ್​ ಆಲ್​ರೌಂಡರ್ ತಿಸರಾ ಪೆರೆರಾ

Thisara Perera: 2014 ರ ಬಾಂಗ್ಲಾದೇಶದಲ್ಲಿ ಭಾರತ ವಿರುದ್ಧದ ಟಿ 20 ವಿಶ್ವಕಪ್‌ನಲ್ಲಿ ತಂಡದ ಗೆಲುವಿಗೆ ನಾನು ಕಾರಣವಾಗಿದ್ದಕ್ಕೆ ಹೆಮ್ಮೆಪಡುತ್ತೇನೆ ಎಂದು ಪೆರೆರಾ ಎಸ್‌ಎಲ್‌ಸಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Thisara Perera: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್‌ಬೈ ಹೇಳಿದ ಶ್ರೀಲಂಕಾ ತಂಡದ ಸ್ಟಾರ್​ ಆಲ್​ರೌಂಡರ್ ತಿಸರಾ ಪೆರೆರಾ
ತಿಸರಾ ಪೆರೆರಾ
Follow us
ಪೃಥ್ವಿಶಂಕರ
|

Updated on: May 03, 2021 | 5:24 PM

ಶ್ರೀಲಂಕಾ ಕ್ರಿಕೆಟ್ ತಂಡದ ಆಲ್‌ರೌಂಡರ್ ತಿಸರಾ ಪೆರೆರಾ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ನಡೆದ ಆಯ್ಕೆದಾರರ ಸಭೆಯ ಮೊದಲು ಪೆರೆರಾ ಈ ವಿಷಯವನ್ನು ಪ್ರಕಟಿಸಿದರು. ಪೆರೆರಾ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲು ನಿವೃತ್ತಿ ಘೋಷಿಸಿದರು. ಅವರು ಹಲವಾರು ಸಂದರ್ಭಗಳಲ್ಲಿ ತಂಡದ ನಾಯಕರಾಗಿದ್ದರು. ಶ್ರೀಲಂಕಾ ಕ್ರಿಕೆಟ್‌ಗೆ (ಎಸ್‌ಎಲ್‌ಸಿ) ಬರೆದಿರುವ ಪತ್ರದಲ್ಲಿ ಪೆರೆರಾ ಅವರು ನಿವೃತ್ತಿ ಹೊಂದಲು ಮತ್ತು ಯುವ ಆಟಗಾರರಿಗೆ ಅವಕಾಶ ನೀಡಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದಾರೆ ಎಂದು ಹೇಳಿದರು.

ಇದು ನನ್ನ ಜೀವನದಲ್ಲಿ ಒಂದು ಪ್ರಮುಖ ಕ್ಷಣವಾಗಿದೆ. ನಾನು ಏಳು ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಲು ಸಾಧ್ಯವಾಯಿತು ಮತ್ತು 2014 ರ ಬಾಂಗ್ಲಾದೇಶದಲ್ಲಿ ಭಾರತ ವಿರುದ್ಧದ ಟಿ 20 ವಿಶ್ವಕಪ್‌ನಲ್ಲಿ ತಂಡದ ಗೆಲುವಿಗೆ ನಾನು ಕಾರಣವಾಗಿದ್ದಕ್ಕೆ ಹೆಮ್ಮೆಪಡುತ್ತೇನೆ ಎಂದು ಪೆರೆರಾ ಎಸ್‌ಎಲ್‌ಸಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತದ ವಿರುದ್ಧ ಪಾದಾರ್ಪಣೆ ಮಾಡಿದರು ಪೆರೆರಾ 2009 ರಲ್ಲಿ ಶ್ರೀಲಂಕಾ ಪರ ಏಕದಿನ ಚೊಚ್ಚಲ ಪಂದ್ಯವನ್ನಾಡಿದರು. ಭಾರತ ವಿರುದ್ಧದ ಏಕದಿನ ಸರಣಿಗೆ ಅವರನ್ನು ಆಯ್ಕೆ ಮಾಡಲಾಯಿತು. ಅವರು ಆಗಸ್ಟ್ 2010 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್‌ಗಳನ್ನು ಪಡೆದರು ಮತ್ತು ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು. ಭಾರತವನ್ನು ಸೋಲಿಸುವಲ್ಲಿ ದೊಡ್ಡ ಪಾತ್ರ ವಹಿಸಿದರು.

ಪೆರೆರಾ ಐಪಿಎಲ್‌ನಲ್ಲಿ ಆಡಿದ್ದಾರೆ ಥಿಸರಾ ಪೆರೆರಾ ಐಪಿಎಲ್‌ನ ಮೊದಲ 7 ಆವೃತ್ತಿಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಸಿಎಸ್‌ಕೆ ಪರ ಆಡಿದ್ದಲ್ಲದೆ, ಅವರು ಕೊಚ್ಚಿ ಟಸ್ಕರ್ಸ್, ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು. 32 ವರ್ಷದ ಶ್ರೀಲಂಕಾದ ಆಲ್‌ರೌಂಡರ್ ಪೆರೆರಾ 6 ಟೆಸ್ಟ್, 161 ಏಕದಿನ ಮತ್ತು 79 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು ಕ್ರಮವಾಗಿ 203, 2338 ಮತ್ತು 1204 ರನ್​ಗಳನ್ನು ಗಳಿಸಿದ್ದಾರೆ. ಬ್ಯಾಟ್‌ನೊಂದಿಗೆ ರನ್ ಗಳಿಸುವುದರ ಹೊರತಾಗಿ ಪೆರೆರಾ ಟೆಸ್ಟ್‌ನಲ್ಲಿ 11, ಏಕದಿನ ಪಂದ್ಯಗಳಲ್ಲಿ 175 ಮತ್ತು ಟಿ 20 ಯಲ್ಲಿ 51 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಅವರ ಬೆಸ್ಟ್ 63 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ, ಏಕದಿನ ಪಂದ್ಯಗಳಲ್ಲಿ 44 ರನ್‌ಗಳಿಗೆ ಆರು ವಿಕೆಟ್‌ಗಳು ಮತ್ತು ಟಿ 20 ಯಲ್ಲಿ 24 ರನ್‌ಗಳಿಗೆ ಮೂರು ವಿಕೆಟ್‌ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಬ್ಯಾಟ್‌ನೊಂದಿಗೆ ಅತ್ಯುತ್ತಮ 75 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅವರು ಶತಕ ಬಾರಿಸಿದ್ದಾರೆ ಮತ್ತು 140 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ಅವರು ಟಿ 20 ಯಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ ಮತ್ತು ಆಟದ ಈ ಕಡಿಮೆ ಸ್ವರೂಪದಲ್ಲಿ ಅವರ ಗರಿಷ್ಠ ಸ್ಕೋರ್ 61 ರನ್ ಆಗಿದೆ.

ಪೆರೆರಾ 2011 ರ ಮೇ 26-30 ರಂದು ಕಾರ್ಡಿಫ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಟೆಸ್ಟ್ ಆಡಿದರು. ಅವರು ಟೆಸ್ಟ್​ನಲ್ಲಿ ಹೆಚ್ಚು ಯಶಸ್ವಿಯಾಗಲಿಲ್ಲ. ಜುಲೈ 8, 2012 ರಂದು ಅವರು ಪಾಕಿಸ್ತಾನ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಆದಾಗ್ಯೂ, ಅವರ ಏಕದಿನ ವೃತ್ತಿಜೀವನವು ದೀರ್ಘವಾಗಿತ್ತು. ಅವರು ಸುಮಾರು 12 ವರ್ಷಗಳ ಕಾಲ ದೇಶಕ್ಕಾಗಿ ಏಕದಿನ ಪಂದ್ಯಗಳನ್ನು ಮುಂದುವರೆಸಿದರು. 2009 ರಲ್ಲಿ ಪಾದಾರ್ಪಣೆ ಮಾಡಿದ ನಂತರ, ಪೆರೆರಾ ಈ ವರ್ಷದ ಮಾರ್ಚ್ 14 ರಂದು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. 3 ಮೇ 2009 ರಂದು, ಅವರು ಜಿಂಬಾಬ್ವೆ ವಿರುದ್ಧ ತಮ್ಮ ಮೊದಲ ಟಿ 20 ಆಡಿದರು. ಮಾರ್ಚ್ 7, 2021 ರಂದು ಅವರು ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಕೊನೆಯ ಟಿ 20 ಪಂದ್ಯದಲ್ಲಿ ಭಾಗವಹಿಸಿದರು.

ಎಸ್‌ಎಲ್‌ಸಿ ಈ ವಿಷಯ ತಿಳಿಸಿದೆ ರಾಷ್ಟ್ರೀಯ ತಂಡದ ಯಶಸ್ಸಿಗೆ ಪೆರೆರಾ ಅವರ ಕೊಡುಗೆಯನ್ನು ಎಸ್‌ಎಲ್‌ಸಿ ಒಪ್ಪಿಕೊಂಡಿದೆ. ಎಸ್‌ಎಲ್‌ಸಿ ಸಿಇಒ ಆಶ್ಲೇ ಡಿಸಿಲ್ವಾ ಹೇಳಿಕೆಯಲ್ಲಿ, “ತಿಸಾರಾ ಒಬ್ಬ ಅದ್ಭುತ ಆಲ್‌ರೌಂಡರ್ ಆಗಿದ್ದು, ಅವರು ಶ್ರೀಲಂಕಾ ಕ್ರಿಕೆಟ್‌ಗೆ ಆಟಗಾರನಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಮತ್ತು ದೇಶದ ಅತ್ಯುತ್ತಮ ಕ್ರಿಕೆಟ್ ಕ್ಷಣಗಳಲ್ಲಿ ಪಾತ್ರವಹಿಸಿದ್ದಾರೆ” ಎಂದು ಹೇಳಿದರು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್