ಆಮ್ಲಜನಕ ಮಟ್ಟ ಕುಸಿತ; ಆಸ್ಪತ್ರೆಗೆ ದಾಖಲಾದ ಮಿಲ್ಖಾ ಸಿಂಗ್.. ಫ್ಲೈಯಿಂಗ್ ಸಿಖ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಆಮ್ಲಜನಕ ಮಟ್ಟ ಕುಸಿತ; ಆಸ್ಪತ್ರೆಗೆ ದಾಖಲಾದ ಮಿಲ್ಖಾ ಸಿಂಗ್.. ಫ್ಲೈಯಿಂಗ್ ಸಿಖ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಮಿಲ್ಖಾ ಸಿಂಗ್ (ಸಂಗ್ರಹ ಚಿತ್ರ)

Milkha Singh: ಇತ್ತೀಚೆಗೆ COVID-19 ಸೋಂಕಿಗೆ ತುತ್ತಾದ ಪ್ರಸಿದ್ಧ ಭಾರತೀಯ ಓಟಗಾರ ಮಿಲ್ಖಾ ಸಿಂಗ್ ಅವರನ್ನು ಆಮ್ಲಜನಕದ ಮಟ್ಟ ಕಡಿಮೆಯಾಗಿದ್ದರಿಂದ ಚಂಡೀಗರ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ.

pruthvi Shankar

|

Jun 04, 2021 | 2:48 PM

ಇತ್ತೀಚೆಗೆ COVID-19 ಸೋಂಕಿಗೆ ತುತ್ತಾದ ಪ್ರಸಿದ್ಧ ಭಾರತೀಯ ಓಟಗಾರ ಮಿಲ್ಖಾ ಸಿಂಗ್ ಅವರನ್ನು ಆಮ್ಲಜನಕದ ಮಟ್ಟ ಕಡಿಮೆಯಾಗಿದ್ದರಿಂದ ಚಂಡೀಗರ್​ನ ಉನ್ನತ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ. ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಮಿಲ್ಖಾ ಸಿಂಗ್ ಅವರೊಂದಿಗೆ ಮಾತನಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಮಿಲ್ಖಾ ಸಿಂಗ್ ಶೀಘ್ರವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮರಳುವ ಭರವಸೆಯನ್ನು ಮೋದಿ ವ್ಯಕ್ತಪಡಿಸಿದರು. ಇದರೊಂದಿಗೆ, ಅವರು ಶೀಘ್ರದಲ್ಲೇ ಹಿಂತಿರುಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ಸ್ಫೂರ್ತಿ ನೀಡುವುದಾಗಿಯೂ ಪ್ರಧಾನಿ ಹೇಳಿದರು. ಮೊಹಾಲಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಾಲ್ಕು ದಿನಗಳ ನಂತರ, ಆಮ್ಲಜನಕದ ಮಟ್ಟ ಕಡಿಮೆ ಇರುವುದರಿಂದ ಅವರನ್ನು ನಿನ್ನೆ ಮತ್ತೆ ಆಸ್ಪತ್ರಗೆ ದಾಖಲಿಸಲಾಯಿತು.

ಮೇ 30 ರಂದು ಡಿಸ್ಚಾರ್ಜ್ ಮಾಡಿತ್ತು 91 ವರ್ಷದ ಮಿಲ್ಖಾ ಸಿಂಗ್ ಅವರು ಮೇ 24 ರಂದು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ -19 ಪರೀಕ್ಷೆಯಲ್ಲಿ ಸಕಾರಾತ್ಮಕವಾಗಿ ಕಂಡು ಬಂದ ಅವರ ಪತ್ನಿ ನಿರ್ಮಲ್ ಕೌರ್ ಕೂಡ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ನಿರ್ಮಲ್ ಕೌರ್ ಅವರನ್ನು ಅದೇ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ. ಆದರೆ, ಮಿಲ್ಖಾ ಸಿಂಗ್ ಅವರ ಸ್ಥಿತಿ ಸುಧಾರಿಸಿದ ನಂತರ ಆಸ್ಪತ್ರೆ ಮೇ 30 ರಂದು ಡಿಸ್ಚಾರ್ಜ್ ಮಾಡಿತ್ತು. ಆದಾಗ್ಯೂ, ಅವರು ಮನೆಯಲ್ಲಿಯೂ ಆಮ್ಲಜನಕದ ಬೆಂಬಲವನ್ನು ಮುಂದುವರೆಸಿದ್ದರು. ಮಿಲ್ಖಾ ಅವರ ಕುಟುಂಬದ ಕೋರಿಕೆಯ ಮೇರೆಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯ ತಿಳಿಸಿತ್ತು.

ಪತಿಗೆ ಸೋಂಕು ತಗುಲಿದ 19 ದಿನಗಳ ನಂತರ ಮಿಲ್ಖಾ ಅವರ 82 ವರ್ಷದ ಪತ್ನಿ ನಿರ್ಮಲ್ ಕೌರ್ ಸಹ COVID-19 ಗೆ ತುತ್ತಾಗಿದ್ದರು ಮತ್ತು ಫೋರ್ಟಿಸ್ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ನಿರ್ಮಲ್ ಮಿಲ್ಖಾ ಸಿಂಗ್ ಆಮ್ಲಜನಕದ ಸಹಾಯದೊಂದಿಗೆ ಐಸಿಯುನಲ್ಲಿದ್ದಾರೆ ಎಂದು ಫೋರ್ಟಿಸ್ ಆಸ್ಪತ್ರೆಯಿಂದ ಹೊರಡಿಸಲಾದ ವೈದ್ಯಕೀಯ ಬುಲೆಟಿನ್​ನಲ್ಲಿ ತಿಳಿಸಲಾಗಿದೆ. COVID ನ್ಯುಮೋನಿಯಾಕ್ಕೆ ದಂಪತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಫೋರ್ಟಿಸ್ ಆಸ್ಪತ್ರೆ ಈ ಹಿಂದೆ ತಿಳಿಸಿತ್ತು.

ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ಐತಿಹಾಸಿಕ ಕ್ರೀಡಾಪಟು ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ. 1958 ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಕೂಡ ಆಗಿದ್ದಾರೆ. ಆದರೆ 1960 ರ ರೋಮ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. 1998 ರಲ್ಲಿ ಪರಮ್‌ಜೀತ್ ಸಿಂಗ್ ಅವರ ದಾಖಲೆಯನ್ನು ಮುರಿಯುವವರೆಗೂ ಇಟಾಲಿಯನ್ ರಾಜಧಾನಿಯಲ್ಲಿ ಅವರ ಸಮಯವು 38 ವರ್ಷಗಳ ಕಾಲ ರಾಷ್ಟ್ರೀಯ ದಾಖಲೆಯಾಗಿತ್ತು. ಅವರು 1956 ಮತ್ತು 1964 ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು 1959 ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.

Follow us on

Related Stories

Most Read Stories

Click on your DTH Provider to Add TV9 Kannada