Neeraj Chopra: ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ; ಅಭಿನಂದನೆ ಸಲ್ಲಿಸಿದ ಭಾರತೀಯ ಸೇನೆ
Neeraj Chopra: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಇತಿಹಾಸ ಸೃಷ್ಟಿಸಿದ್ದಾರೆ . ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಅವರು ಜಾವೆಲಿನ್ ಚಿನ್ನದ ಪದಕ ಗೆದ್ದಿದ್ದಾರೆ. ಬಂಗಾರದ ಬೇಟೇಯಾಡಿದ ನೀರಜ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಇಂದು ಟ್ವೀಟ್ ಮಾಡಿ ನೀರಜ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಇತಿಹಾಸ ಸೃಷ್ಟಿಸಿದ್ದಾರೆ . ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships) ನೀರಜ್ ಚೋಪ್ರಾ ಅವರು ಜಾವೆಲಿನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಬುಡಾಪೆಸ್ಟ್‌ನಲ್ಲಿ ನಡೆದ ಫೈನಲ್‌ನಲ್ಲಿ ನೀರಜ್ 88.17 ಮೀಟರ್ ದೂರ ಎಸೆದು ಪಾಕಿಸ್ತಾನದ ಅರ್ಷದ್ ನದೀಮ್ ಸೇರಿದಂತೆ 11 ಅಥ್ಲೀಟ್‌ಗಳನ್ನು ಹಿಂದಿಕ್ಕಿ ಚಿನ್ನ ಗೆದ್ದರು. ಇದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದೀಗ ಬಂಗಾರದ ಬೇಟೇಯಾಡಿದ ನೀರಜ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur), ಭಾರತೀಯ ಸೇನೆ (Indian Army) ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಶ್ಲಾಘನೆ
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಪ್ರತಿಭಾವಂತ ನೀರಜ್ ಚೋಪ್ರಾ ಅವರು ಶ್ರೇಷ್ಠತೆಯನ್ನು ಉದಾಹರಿಸುತ್ತಾರೆ. ಅವರ ಸಮರ್ಪಣೆ, ನಿಖರತೆ ಮತ್ತು ಉತ್ಸಾಹವು ಅವರನ್ನು ಅಥ್ಲೆಟಿಕ್ಸ್‌ನಲ್ಲಿ ಕೇವಲ ಚಾಂಪಿಯನ್ ಆಗಿರದೆ ಇಡೀ ಕ್ರೀಡಾ ಜಗತ್ತಿನಲ್ಲಿ ಅಪ್ರತಿಮ ಶ್ರೇಷ್ಠತೆಯ ಸಂಕೇತವಾಗಿರಿಸಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು” ಎಂದು ಮೋದಿ ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
The talented @Neeraj_chopra1 exemplifies excellence. His dedication, precision and passion make him not just a champion in athletics but a symbol of unparalleled excellence in the entire sports world. Congrats to him for winning the Gold at the World Athletics Championships. pic.twitter.com/KsOsGmScER
— Narendra Modi (@narendramodi) August 28, 2023
ಭಾರತೀಯ ಕ್ರೀಡಾ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ- ಠಾಕೂರ್
ಪ್ರಧಾನಿಯವರಂತೆ ಚಿನ್ನದ ಹುಡುಕನ ಸಾಧನೆಗೆ ಅಭಿನಂದನೆ ಸಲ್ಲಿಸಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ಟ್ವಿಟರ್ ಖಾತೆಯಲ್ಲಿ, ‘88.17 ಮೀಟರ್ ದೂರ ಜಾವೆಲಿನ್ ಎಸೆದು ನೀರಜ್ ಮತ್ತೆ ಈ ಸಾಧನೆ ಮಾಡಿದ್ದಾರೆ!. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವದರೊಂದಿಗೆ, ನೀರಜ್ ಚೋಪ್ರಾ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ. ನಿಮ್ಮ ಸಾಧನೆಗಳ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ ಮತ್ತು ಈ ಕ್ಷಣವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
💪💪💪@Neeraj_chopra1 does it again! 🇮🇳
88.17 Meters for 🥇
The golden boy of Indian athletics wins the men’s javelin throw at the World Athletics Championships in Budapest. 🥇
With this, Neeraj Chopra becomes 1st 🇮🇳 athlete to win a gold medal at the… pic.twitter.com/WLmjAXwyFy
— Anurag Thakur (@ianuragthakur) August 27, 2023
#NeerajChopra makes us #Proud again!!#IndianArmy congratulates Subedar Neeraj Chopra on bagging #GoldMedal🥇 in Men’s #Javelin at World Athletics Championship 2023 in Budapest with a throw of 88.17 meters.@Neeraj_chopra1 pic.twitter.com/mV76vQetWy
— ADG PI – INDIAN ARMY (@adgpi) August 27, 2023
ಸುಬೇದಾರ್ ನೀರಜ್ ಚೋಪ್ರಾಗೆ ಅಭಿನಂದನೆ- ಭಾರತೀಯ ಸೇನೆ
ನೀರಜ್ ಚೋಪ್ರಾ ಅವರ ವಿಶೇಷ ಮತ್ತು ಸ್ಮರಣೀಯ ಸಾಧನೆಗಾಗಿ ಭಾರತೀಯ ಸೇನೆ ಕೂಡ ಶ್ಲಾಘಿಸಿದ್ದು, ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಭಾರತೀಯ ಸೇನೆ, ‘ನೀರಜ್ ಚೋಪ್ರಾ ನಮಗೆ ಮತ್ತೊಮ್ಮೆ ಹೆಮ್ಮೆ ತಂದಿದ್ದಾರೆ!! ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 88.17 ಮೀಟರ್ ಎಸೆತದೊಂದಿಗೆ ಪುರುಷರ ಜಾವೆಲಿನ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಸುಬೇದಾರ್ ನೀರಜ್ ಚೋಪ್ರಾ ಅವರನ್ನು ಭಾರತೀಯ ಸೇನೆ ಅಭಿನಂದಿಸುತ್ತದೆ’ ಎಂದು ಬರೆದುಕೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:33 am, Mon, 28 August 23