Euro 2020: ಪೋರ್ಚುಗಲ್ ಯುರೋ ಕಪ್ ಪ್ರಯಾಣ ಅಂತ್ಯ! ಮೈದಾನದಲ್ಲೇ ಭಾವುಕರಾದ ಫುಟ್ಬಾಲ್ ದೈತ್ಯ ರೊನಾಲ್ಡೊ

| Updated By: Skanda

Updated on: Jun 29, 2021 | 9:12 AM

Euro 2020: ಪಂದ್ಯದ ನಂತರ, ಭಾವೋದ್ರಿಕ್ತ ರೊನಾಲ್ಡೊ ಎದುರಾಳಿ ತಂಡದ ಗೋಲ್‌ಕೀಪರ್ ತಿಬಾಟ್ ಕೋರ್ಟೊಯಿಸ್ ಅವರ ಕಿವಿಯಲ್ಲಿ ಏನೋ ಪಿಸುಗುಟ್ಟಿದರು, ಇದರ ವಿಡಿಯೋ ಪ್ರಪಂಚದಾದ್ಯಂತ ವೈರಲ್ ಆಗುತ್ತಿದೆ.

Euro 2020: ಪೋರ್ಚುಗಲ್ ಯುರೋ ಕಪ್ ಪ್ರಯಾಣ ಅಂತ್ಯ! ಮೈದಾನದಲ್ಲೇ ಭಾವುಕರಾದ ಫುಟ್ಬಾಲ್ ದೈತ್ಯ ರೊನಾಲ್ಡೊ
ಮೈದಾನದಲ್ಲೇ ಬಾವುಕರಾದ ಫುಟ್ಬಾಲ್ ದೈತ್ಯ ರೊನಾಲ್ಡೊ
Follow us on

ಯುರೋ ಕಪ್ 2020 ಪಂದ್ಯಾವಳಿಯಲ್ಲಿ ಪೋರ್ಚುಗಲ್, ಬೆಲ್ಜಿಯಂ ವಿರುದ್ಧದ ಪಂದ್ಯವನ್ನು ಕೇವಲ 1-0 ಅಂತರದ ಗೋಲುಗಳಿಂದ ಕಳೆದುಕೊಂಡಿತು. ವಿಶ್ವದ ಅಗ್ರ ದರ್ಜೆಯ ಮತ್ತು ಅತ್ಯಂತ ಪ್ರಸಿದ್ಧ ಫುಟ್ಬಾಲ್ ಆಟಗಾರ ಪೋರ್ಚುಗೀಸ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಈ ವರ್ಷದ ಯುರೋ ಕಪ್‌ನ ಪ್ರಯಾಣವೂ ಕೊನೆಗೊಂಡಿತು. ಸೋಲಿನ ನಂತರ ರೊನಾಲ್ಡೊ ಮೈದಾನದಲ್ಲಿ ಭಾವುಕರಾದರು, ವಿಶೇಷವಾಗಿ ಪ್ರತಿಸ್ಪರ್ಧಿ ತಂಡದ ಪ್ರಮುಖ ಆಟಗಾರರು ಸಹ ಭಾವುಕರಾದರು. ಬೆಲ್ಜಿಯಂ ತಾರೆ ರೊಮೆಲು ಲುಕಾಕು ಕೂಡ ರೊನಾಲ್ಡೊ ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಿದರು. ಲುಕಾಕು ಅವರ ಕ್ರಮವನ್ನು ಹಲವರು ಶ್ಲಾಘಿಸಿದರು.

ರೊನಾಲ್ಡೊ ಭಾವುಕ
ಪಂದ್ಯದ ನಂತರ, ಭಾವೋದ್ರಿಕ್ತ ರೊನಾಲ್ಡೊ ಎದುರಾಳಿ ತಂಡದ ಗೋಲ್‌ಕೀಪರ್ ತಿಬಾಟ್ ಕೋರ್ಟೊಯಿಸ್ ಅವರ ಕಿವಿಯಲ್ಲಿ ಏನೋ ಪಿಸುಗುಟ್ಟಿದರು, ಇದರ ವಿಡಿಯೋ ಪ್ರಪಂಚದಾದ್ಯಂತ ವೈರಲ್ ಆಗುತ್ತಿದೆ. ಗೋಲ್‌ಕೀಪರ್ ತಿಬಾಟ್ ಕೋರ್ಟೊಯಿಸ್ ಅವರ ಬಳಿ ರೊನಾಲ್ಡೊ, ಅದೃಷ್ಟಶಾಲಿಯಾಗಿರಿ, ಚೆಂಡು ಇಂದು ಗೋಲ್‌ಪೋಸ್ಟ್‌ಗೆ ಬಡಿಯಲಿಲ್ಲ ಎಂದು ಹೇಳಿದರು. ಇದನ್ನು ಹೇಳುವಾಗ ರೊನಾಲ್ಡೊ ಅವರ ಮುಖವು ತುಂಬಾ ಭಾವನಾತ್ಮಕವಾಗಿ ಕಾಣುತ್ತದೆ. ಇದರಿಂದಲೇ ಅವರಿಗೆ ಉಂಟಾಗಿರುವ ನೋವನ್ನು ಊಹಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಪೋರ್ಚುಗಲ್ ಪಂದ್ಯದಲ್ಲಿ 23 ಬಾರಿ ಸ್ಕೋರ್ ಮಾಡಲು ಪ್ರಯತ್ನಿಸಿದರೂ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ.

ರೊನಾಲ್ಡೊ ಏಕಾಂಗಿ ಹೋರಾಟ
ರೊನಾಲ್ಡೊ ಅವರನ್ನು ವಿಶ್ವದ ಅಗ್ರ ಫುಟ್ಬಾಲ್ ಆಟಗಾರ ಎಂದು ಕರೆಯಲಾಗಿದೆ. ಆದ್ದರಿಂದ ಸಹಜವಾಗಿ ಅವರು ಪೋರ್ಚುಗಲ್ ತಂಡದ ಅತ್ಯುತ್ತಮ ಆಟಗಾರ. ಈ ವರ್ಷವೂ ಯುರೋ ಕಪ್‌ನಲ್ಲಿ ರೊನಾಲ್ಡೊ ಮೊದಲ ಪಂದ್ಯದಿಂದ ತಂಡಕ್ಕಾಗಿ ಏಕಾಂಗಿಯಾಗಿ ಹೆಣಗಾಡಿದರು. ಈ ವರ್ಷದ ಪಂದ್ಯಾವಳಿಯಲ್ಲಿ ಅವರು 5 ಗೋಲುಗಳನ್ನು ಬಾರಿಸಿದ್ದಾರೆ. ಪ್ರಸ್ತುತ ಪಂದ್ಯಾವಳಿಯಲ್ಲಿ ಹೆಚ್ಚಿನ ಗೋಲುಗಳು ಅವರದ್ದೇ ಆಗಿದೆ. ಕೊನೆಯ ಪಂದ್ಯದಲ್ಲಿ, ರೊನಾಲ್ಡೊ ಹಲವಾರು ಬಾರಿ ಸ್ಕೋರ್ ಮಾಡಲು ಪ್ರಯತ್ನಿಸಿದರು ಮತ್ತು ಅವರ ತಂಡದ ಆಟಗಾರರಿಗೆ ಹಲವಾರು ಬಾರಿ ಸಹಾಯ ಮಾಡಿದರು, ಆದರೆ ಅದನ್ನು ಯಶಸ್ವಿಗೊಳಿಸಲು ಇತರ ಆಟಗಾರರು ವಿಫಲರಾದರು. ಹೀಗಾಗಿ ಪೋರ್ಚುಗಲ್ 1-0 ಗೋಲುಗಳಿಂದ ಸೋಲನುಭವಿಸಿತು. ಬೆಲ್ಜಿಯಂನ ಟಿ ಹಜಾರ್ಡ್​ 42 ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದನ್ನೂ ಓದಿ:
UEFA Euro 2020: ಯುರೋಪಿಯನ್ ಫುಟ್‌ಬಾಲ್‌ ಚಕ್ರವರ್ತಿ ಜರ್ಮನಿ ಹೆಸರಿನಲ್ಲಿವೆ ಹಲವು ದಾಖಲೆ