ಪ್ರೋ ಕಬಡ್ಡಿ ಲೀಗ್ ಸೀಸನ್ 8ನಲ್ಲಿನ ತನ್ನ 3ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಬೆಂಗಾಲ್ ವಾರಿಯರ್ಸ್ ವಿರುದ್ದ ರೋಚಕ ಜಯ ಸಾಧಿಸಿದೆ. ನಾಯಕ ಪವನ್ ಶೆರಾವತ್ (Pavan Sehrawat) ಅವರ ಅದ್ಭುತ ಪ್ರದರ್ಶನದಿಂದಾಗಿ ಬೆಂಗಳೂರು ತಂಡವು ಕೇವಲ 1 ಅಂಕಗಳಿಂದ ಜಯ ಸಾಧಿಸಿತು. ಕೊನೆಯ ಕ್ಷಣದವರೆಗೂ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯವು ಅತ್ಯುತ್ತಮ ಹೋರಾಟಕ್ಕೆ ಸಾಕ್ಷಿಯಾಗಿತ್ತು.
ಮೊದಲಾರ್ಧದಲ್ಲೇ ಉಭಯ ತಂಡಗಳು ಭರ್ಜರಿ ಪೈಪೋಟಿ ನಡೆಸಿತ್ತು. ಅದರಂತೆ ಹಾಫ್ ಟೈಮ್ ವೇಳೆ 18-17 ಅಂತರವನ್ನು ಕಾಯ್ದುಕೊಂಡಿತು. ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ರೈಡರ್ ಪವನ್ ಶೆಹ್ರಾವತ್ 8 ಪಾಯಿಂಟ್ಸ್ ಗಳಿಸಿದರೆ, ಬೆಂಗಾಲ್ ರೈಡರ್ ಮಣಿಂದರ್ ಸಿಂಗ್ 11 ಪಾಯಿಂಟ್ಸ್ ಪಡೆದಿದ್ದರು.
ಆದರೆ ದ್ವಿತಿಯಾರ್ಧದಲ್ಲಿ ಕಂಬ್ಯಾಕ್ ಮಾಡಿದ ಬೆಂಗಳೂರು ಬುಲ್ಸ್ ಅತ್ಯುತ್ತಮ ರೈಡಿಂಗ್ ಮೂಲಕ ಗಮನ ಸೆಳೆದರು. ಅದರಲ್ಲೂ ನಾಯಕ ಪವನ್ ಕುಮಾರ್ಗೆ ಸಾಥ್ ನೀಡಿದ ಚಂದ್ರನ್ ರಂಜಿತ್ ಕೂಡ ಉತ್ತಮ ರೈಡಿಂಗ್ ಮಾಡಿದರು. ಪರಿಣಾಮ ಪಂದ್ಯದ ಮುಕ್ತಾಯಕ್ಕೆ ಕೇವಲ 40 ಸೆಕೆಂಡ್ಗಳಿರುವಾಗ ಉಭಯ ತಂಡಗಳು 34 ರ ಸಮಬಲ ಸಾಧಿಸಿತು. ಈ ವೇಳೆ ದಕ್ಷಿಣ ಕೊರಿಯಾದ ಡೋಂಗ್ ಗಿಯೋನ್ ಲೀ ಅತ್ಯಮೂಲ್ಯ 2 ಪಾಯಿಂಟ್ ತಂದುಕೊಡುವ ಮೂಲಕ ಬೆಂಗಳೂರು ಬುಲ್ಸ್ ಅಂಕವನ್ನು 36 ಕ್ಕೇರಿಸಿದರು.
ಅಂತಿಮ ಕ್ಷಣದಲ್ಲಿ ಬುದ್ದಿವಂತಿಕೆಯ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್ ತಂಡವು 36-35 ಅಂಕಗಳಿಂದ ರೋಚಕ ಜಯ ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲಿ ಬೆಂಗಳೂರು ಪರ ನಾಯಕ ಪವನ್ ಕುಮಾರ್ ಶೆಹ್ರಾವತ್ 15 ಅಂಕಗಳಿಸಿದರೆ, ಚಂದ್ರನ್ ರಂಜಿತ್ 6 ಅಂಕ ತಂದುಕೊಟ್ಟರು. ಇನ್ನು ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ತಂಡದ ನಾಯಕ ಮಣಿಂದರ್ ಸಿಂಗ್ 17 ಅಂಕ ಗಳಿಸಿ ಅದ್ಭುತ ಪ್ರದರ್ಶನ ನೀಡಿದರೂ ಇತರೆ ತಂಡಕ್ಕೆ ಜಯ ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
End of a topsy-turvy battle and our Bulls have emerged VICTORIOUS against the Warriors ⚔️ ??#BLRvBEN #SuperhitPanga #FullChargeMaadi #VivoProKabaddi #BengaluruBulls #kabaddi #VivoPKL8 #Season8 #KhelKabaddi #prokabaddileague2021 pic.twitter.com/XyTschiCJq
— Bengaluru Bulls (@BengaluruBulls) December 26, 2021
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
Published On - 10:27 pm, Sun, 26 December 21