ಖ್ಯಾತ ಓಟಗಾರ್ತಿ ಪಿಟಿ ಉಷಾ ಗುರು, ಲೆಜೆಂಡರಿ ಅಥ್ಲೆಟಿಕ್ಸ್ ತರಬೇತುದಾರ ಒ.ಎಂ. ನಂಬಿಯಾರ್ ನಿಧನ

| Updated By: ಪೃಥ್ವಿಶಂಕರ

Updated on: Aug 19, 2021 | 8:02 PM

ಭಾರತಕ್ಕೆ ಪಿಟಿ ಉಷಾ ಅವರಂತ ಖ್ಯಾತ ಓಟಗಾರ್ತಿಯನ್ನು ನೀಡಿದ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಒಎಂ ನಂಬಿಯಾರ್ ಅವರು ಗುರುವಾರ ನಿಧನರಾಗಿದ್ದಾರೆ.

ಖ್ಯಾತ ಓಟಗಾರ್ತಿ ಪಿಟಿ ಉಷಾ ಗುರು, ಲೆಜೆಂಡರಿ ಅಥ್ಲೆಟಿಕ್ಸ್ ತರಬೇತುದಾರ ಒ.ಎಂ. ನಂಬಿಯಾರ್ ನಿಧನ
ಪಿಟಿ ಉಷಾ, ಒಎಂ ನಂಬಿಯಾರ್
Follow us on

ಭಾರತಕ್ಕೆ ಪಿಟಿ ಉಷಾ ಅವರಂತ ಖ್ಯಾತ ಓಟಗಾರ್ತಿಯನ್ನು ನೀಡಿದ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಒಎಂ ನಂಬಿಯಾರ್ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. 2021 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಜೊತೆಗೆ 1985 ರಲ್ಲಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು.

ಪಿಟಿ ಉಷಾ ಅವರಲ್ಲದೆ, ನಂಬಿಯಾರ್ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ ಶೈನಿ ವಿಲ್ಸನ್‌ಗೆ ತರಬೇತಿ ನೀಡಿದರು. ಶೈನಿ ವಿಲ್ಸನ್‌ 1985 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 800 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದರು. ಜೊತೆಗೆ ನಂಬಿಯಾರ್ ದೇಶದ ಖ್ಯಾತ ಕ್ರೀಡಾಪಟು ವಂದನಾ ರಾವ್ ಅವರ ತರಬೇತುದಾರರೂ ಆಗಿದ್ದರು.

ಪಿಟಿ ಉಷಾ ಅವರು 1984 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಕಡಿಮೆ ಅಂತರದಲ್ಲಿ ಕಳೆದುಕೊಂಡಿದ್ದರು. ಆದರೆ ನಂಬಿಯಾರ್ ಅವರ ಅತ್ಯಂತ ಪ್ರಸಿದ್ಧ ಶಿಷ್ಯೆ ಉಷಾ ಒಲಿಂಪಿಕ್ ಪದಕ ಗೆಲ್ಲುವುದು ಅವರ ದೊಡ್ಡ ಕನಸಾಗಿತ್ತು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು, 1984 ರ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಹರ್ಡಲ್ಸ್‌ನಲ್ಲಿ ಉಷಾ ಒಂದು ಸೆಕೆಂಡ್​ ಅಂತರದಲ್ಲಿ ಪದಕವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದಾಗ ನಾನು ತುಂಬಾ ಅತ್ತಿದ್ದೆ. ಆ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಉಷಾ ಅವರ ಒಲಿಂಪಿಕ್ ಪದಕ ನನ್ನ ಜೀವನದ ದೊಡ್ಡ ಕನಸಾಗಿತ್ತು ಎಂದು ಹೇಳಿಕೊಂಡಿದ್ದರು.