ಭಾರತೀಯ ಮೂಲದ ಟೆನಿಸ್ ತಾರೆ ರಾಜೀವ್ ರಾಮ್ ತಮ್ಮ ಬ್ರಿಟಿಷ್ ಪಾಲುದಾರ ಬ್ರಿಟನ್ ಜೋ ಸಲಿಸ್ಬರಿ ಅವರೊಂದಿಗೆ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಯುಎಸ್ ಓಪನ್ ಪುರುಷರ ಡಬಲ್ಸ್ ಫೈನಲ್ನಲ್ಲಿ ಇಬ್ಬರೂ ಮೊದಲ ಆಘಾತದಿಂದ ಹೊರಬಂದು ಅಂತಿಮ ಸುತ್ತಿನಲ್ಲಿ 3-6, 6-2, 6-2 ರಿಂದ ಪಂದ್ಯ ಗೆದ್ದರು. ಶುಕ್ರವಾರ ನಡೆದ ಈ ಪಂದ್ಯದ ಮೊದಲ ಸೆಟ್ನಲ್ಲಿ, ಈ ಜೋಡಿ ಹಿನ್ನಡೆ ಅನುಭವಿಸಿತ್ತು. ಆದರೆ ನಂತರ ಅವರು ಪಂದ್ಯಕ್ಕೆ ಮರಳಿ ಮುಂದಿನ ಎರಡು ಸೆಟ್ಗಳನ್ನು ಗೆದ್ದು ಪಂದ್ಯವನ್ನು ಗೆದ್ದರು.
ಏಳನೇ ಶ್ರೇಯಾಂಕದ ಜೇಮಿ ಮುರ್ರೆ ಮತ್ತು ಬ್ರೂನೋ ಸೊರೆಸ್ 2016 ರ ಯುಎಸ್ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ ನಂತರ ತಮ್ಮ ಮೂರನೇ ಸ್ಲಾಮ್ ಕಿರೀಟವನ್ನು ಕಳೆದುಕೊಂಡರು. ಬ್ರೂನೊ ಸೊರೆಸ್ ಕಳೆದ ವರ್ಷ ಮೇಟ್ ಪಾವಿಕ್ ಅವರೊಂದಿಗೆ ಯುಎಸ್ ಓಪನ್ ಪುರುಷರ ಡಬಲ್ ಪ್ರಶಸ್ತಿಯನ್ನು ಗೆದ್ದಿದ್ದರು.
ಗೆಲುವಿನ ನಂತರ ಇಬ್ಬರೂ ಆಟಗಾರರು ಸಂತಸ ವ್ಯಕ್ತಪಡಿಸಿದರು
ಪಂದ್ಯವನ್ನು ಗೆದ್ದ ನಂತರ, ಬ್ರಿಟಿಷ್ ಆಟಗಾರ ಜೋ ಸ್ಯಾಲಿಸ್ಬರಿ, ಇದು ಕನಸು ಎಂಬಂತೆ ಬಾಸವಾಗುತ್ತಿದೆ. ರಾಜೀವ್ ರಾಮ್ ಅವರೊಂದಿಗೆ ಇದನ್ನು ಗೆಲ್ಲುವುದು ಅದ್ಭುತವಾಗಿದೆ. ಅವರು ಕಳೆದ ಮೂರು ವರ್ಷಗಳಲ್ಲಿ ನನಗೆ ಉತ್ತಮ ಜೊತೆಗಾರರಾಗಿದ್ದಾರೆ. ನಾವು ಇನ್ನೂ ಕೆಲವು ಪ್ರಶಸ್ತಿಗಳನ್ನು ಒಟ್ಟಿಗೆ ಗೆಲ್ಲುತ್ತೇವೆ ಎಂದು ಭಾವಿಸುತ್ತೇವೆ ಎಂದಿದ್ದಾರೆ. ಅದೇ ಸಮಯದಲ್ಲಿ, ಪ್ರಶಸ್ತಿಯನ್ನು ಗೆದ್ದ ನಂತರ, ರಾಜೀವ್ ರಾಮ್ ಮಾತನಾಡಿ, ಇದು ಅತ್ಯಂತ ನಂಬಲಾಗದ ಸವಾರಿಯಾಗಿದೆ. ಈ ಗೆಲುವಿನ ಸವಾರಿಯನ್ನು ನಾವು ಈಗ ನಿಲ್ಲಿಸಲು ಹೋಗುವುದಿಲ್ಲ ಎಂದಿದ್ದಾರೆ.
ಜೊಕೊವಿಚ್ ಫೈನಲ್ ಪ್ರವೇಶ
ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಹಿಂದಿಕ್ಕಿ ಸೆರ್ಬಿಯಾದ ತಾರೆ ನೊವಾಕ್ ಜೊಕೊವಿಚ್ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದರು. ಅವರು ವರ್ಷದ ಕೊನೆಯ ಗ್ರಾಂಡ್ ಸ್ಲಾಮ್ನ ಫೈನಲ್ ತಲುಪಿದ್ದಾರೆ. 20 ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ಜೊಕೊವಿಚ್ ಈಗ ತನ್ನ ಕ್ಯಾಲೆಂಡರ್ ಗ್ರ್ಯಾಂಡ್ ಸ್ಲಾಮ್ನಿಂದ ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ.
ಭಾರತೀಯ ಕಾಲಮಾನದಲ್ಲಿ ಇಂದು ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜವೆರೆವ್ ವಿರುದ್ಧ ವಿಶ್ವದ ಅಗ್ರಮಾನ್ಯ ಆಟಗಾರ ಜೋಕೊವಿಚ್ 4-6, 6-2, 6-4, 4-6, 6-2 ರೋಚಕ ಗೆಲುವು ಪಡೆದರು. ಈ ಮೂಲಕ ಜೊಕೋವಿಚ್ ಅವರು ದಾಖಲೆಯ 31 ಬಾರಿ ಗ್ರ್ಯಾನ್ ಸ್ಲಾಮ್ ಪ್ರವೇಶಿಸಿದ್ದ ರೋಜರ್ ಫೆಡರರ್ ದಾಖಲೆ ಸರಿಗಟ್ಟಿದ್ದಾರೆ. 5 ಸೆಟ್ಗಳ ಹೋರಾಟದಲ್ಲಿ ಗೆಲುವು ಪಡೆಯುವ ಮೂಲಕ ಫೆಡರರ್ ಈ ವರ್ಷ ಆಡಿದ 27 ಪಂದ್ಯಗಳಲ್ಲಿ ಸೋಲರಿಯದ ಆಟಗಾರನಾಗಿ ದಾಖಲೆ ಬರೆದರು.