Neeraj Chopra: ಕೊನೆಗೂ ಈಡೇರಿತು ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಬಾಲ್ಯದ ಆಸೆ!
Neeraj Chopra: ಇಂದು ನನ್ನ ಪೋಷಕರು ಮೊದಲ ಬಾರಿಗೆ ವಿಮಾನದಲ್ಲಿ ಕುಳಿತಿದ್ದನ್ನು ಕಂಡು ಜೀವನದ ಕನಸು ನನಸಾಯಿತು. ಎಲ್ಲರ ಪ್ರಾರ್ಥನೆ ಮತ್ತು ಆಶೀರ್ವಾದಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ
Updated on: Sep 11, 2021 | 4:11 PM

ನೀರಜ್ ಚೋಪ್ರಾ ಅವರಿಗೆ, 2021ನೇ ವರ್ಷವು ಕನಸುಗಳಿಗೆ ರೆಕ್ಕೆಗಳನ್ನು ಕಟ್ಟುವ ವರ್ಷವಾಗಿದೆ. ಮೊದಲ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಅವರ ಕನಸು ಈಡೇರಿತು. ಈಗ ಅವರು ಬಾಲ್ಯದಿಂದಲೂ ಕಂಡಿದ್ದ ಈಡೇರದ ಕನಸು ನನಸಾಗಿದೆ. ಅದೆನೆಂದರೆ ವೀರಜ್ಗೆ ಚಿಕ್ಕಂದಿನಿಂದಲೂ ತಮ್ಮ ಕುಟುಂಬದವರೊಂದಿಗೆ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬುದಾಗಿತ್ತು.

ನೀರಜ್ ಚೋಪ್ರಾ ತನ್ನ ಹೆತ್ತವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ, ಇಂದು ನನ್ನ ಪೋಷಕರು ಮೊದಲ ಬಾರಿಗೆ ವಿಮಾನದಲ್ಲಿ ಕುಳಿತಿದ್ದನ್ನು ಕಂಡು ಜೀವನದ ಕನಸು ನನಸಾಯಿತು. ಎಲ್ಲರ ಪ್ರಾರ್ಥನೆ ಮತ್ತು ಆಶೀರ್ವಾದಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದ ನೀರಜ್ ಚೋಪ್ರಾ ಹರಿಯಾಣದ ಪಾಣಿಪತ್ ಮೂಲದವರು. ಅವರ ತಂದೆ ಸತೀಶ್ ಕುಮಾರ್ ಅವರ ವೃತ್ತಿ ಕೃಷಿಯಾಗಿದ್ದು, ತಾಯಿ ಸರೋಜ ದೇವಿ ಗೃಹಿಣಿಯಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಏಕೈಕ ಕ್ರೀಡಾಪಟು ನೀರಜ್ ಚೋಪ್ರಾ. ಅದೇ ಸಮಯದಲ್ಲಿ, ಅವರು ಶೂಟರ್ ಅಭಿನವ್ ಬಿಂದ್ರಾ ನಂತರ ಸಿಂಗಲ್ಸ್ ಸ್ಪರ್ಧೆಯಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆದ್ದ ಎರಡನೇ ಅಥ್ಲೀಟ್ ಆಗಿದ್ದಾರೆ. ಬಿಂದ್ರಾ 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು.

ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಟೋಕಿಯೊ ಒಲಿಂಪಿಕ್ಸ್‌ನಿಂದ ಮರಳಿದ ನಂತರ, ಅವರ ಗಳಿಕೆಯೂ ಹೆಚ್ಚಾಗಿದೆ. ಅವರ ಮೇಲೆ ಬಹುಮಾನಗಳು ಮತ್ತು ಜಾಹೀರಾತುಗಳ ಸುರಿಮಳೆಯಾಯಿತು. ಒಂದು ಅಂದಾಜಿನ ಪ್ರಕಾರ, ಆತ ವಾರ್ಷಿಕವಾಗಿ ಪ್ರತಿ ಜಾಹೀರಾತಿನಿಂದ ಕನಿಷ್ಠ 15 ರಿಂದ 25 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ.
