ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನ ದ್ವಿತಿಯಾರ್ಧ ಶುರುವಾಗಲು ಇನ್ನು ವಾರಗಳು ಮಾತ್ರ ಉಳಿದಿವೆ. ಈಗಾಗಲೇ ಬಹುತೇಕ ತಂಡಗಳ ಆಟಗಾರರು ಯುಎಇನಲ್ಲಿ ಅಭ್ಯಾಸವನ್ನು ಆರಂಭಿಸಿದೆ. ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮುಖಾಮುಖಿಯೊಂದಿಗೆ ದ್ವಿತಿಯಾರ್ಧಕ್ಕೆ ಚಾಲನೆ ಸಿಗಲಿದೆ. ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಉಳಿದ 31 ಪಂದ್ಯಗಳು ನಡೆಯಲಿದ್ದು, ಈ ಹಿಂದಿನ ಲೆಕ್ಕಚಾರಗಳು ಮರಳುಗಾಡಿನ ಮೈದಾನದಲ್ಲಿ ತಲೆಕೆಳಗಾಗುವ ಸಾಧ್ಯತೆಯಿದೆ.