ಪ್ರಶಸ್ತಿ ವಿಚಾರದಲ್ಲಿ ಈ ಇಬ್ಬರು ಒಂದೇ; ಕಿಂಗ್ ಕೊಹ್ಲಿಯನ್ನು ಲಿಯೋನೆಲ್ ಮೆಸ್ಸಿಗೆ ಹೋಲಿಸಿದ ಪಾಕ್ ಕ್ರಿಕೆಟಿಗ

|

Updated on: Jun 09, 2021 | 7:05 PM

ಅರ್ಜೆಂಟೀನಾ ಪರ ಮೆಸ್ಸಿ ಇನ್ನೂ ದೊಡ್ಡ ಪ್ರಶಸ್ತಿಯನ್ನು ಗೆದ್ದಿಲ್ಲ. ವಿಶ್ವಕಪ್ ಫೈನಲ್‌ನಂತಹ ದೊಡ್ಡ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದು ಆಟಗಾರನ ಸಾಮರ್ಥ್ಯವನ್ನು ತೋರಿಸುತ್ತದೆ ಎಂದಿದ್ದಾರೆ.

ಪ್ರಶಸ್ತಿ ವಿಚಾರದಲ್ಲಿ ಈ ಇಬ್ಬರು ಒಂದೇ; ಕಿಂಗ್ ಕೊಹ್ಲಿಯನ್ನು ಲಿಯೋನೆಲ್ ಮೆಸ್ಸಿಗೆ ಹೋಲಿಸಿದ ಪಾಕ್ ಕ್ರಿಕೆಟಿಗ
ಕಿಂಗ್ ಕೊಹ್ಲಿ, ಲಿಯೋನೆಲ್ ಮೆಸ್ಸಿ
Follow us on

ಈಗಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ವಿಷಯಕ್ಕೆ ಬಂದರೆ ವಿರಾಟ್ ಕೊಹ್ಲಿ ಅವರ ಹೆಸರು ಅಗ್ರಸ್ಥಾನದಲ್ಲಿರುವುದು ಖಚಿತ. ಇದಕ್ಕೆ ಕಾರಣ ಅವರ ಅತ್ಯುತ್ತಮ ಬ್ಯಾಟಿಂಗ್ ಜೊತೆಗೆ ಅವರ ಅಂಕಿಅಂಶಗಳು ಮತ್ತು ದಾಖಲೆಗಳು. ಆದರೆ ನಾಯಕತ್ವದ ವಿಷಯಕ್ಕೆ ಬಂದರೆ ಕೊಹ್ಲಿ ಹಿಂದೆ ಇದ್ದಂತೆ ಕಾಣುತ್ತದೆ. ಪ್ರತಿ ಬಾರಿಯೂ ಕೊಹ್ಲಿ ಯಾವುದೇ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿಲ್ಲ ಎಂದು ಹೇಳಲಾಗುತ್ತದೆ. 2017 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸೋತಿತು ಮತ್ತು ಕೊಹ್ಲಿ ನಾಯಕತ್ವದಲ್ಲಿ 2019 ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಆದರೆ, ಕೊಹ್ಲಿಗೆ ಈ ತಿಂಗಳು ಈ ಕಲೆ ತೊಳೆಯುವ ಅವಕಾಶ ಸಿಗಲಿದೆ. ಭಾರತ ಮತ್ತು ನ್ಯೂಜಿಲೆಂಡ್ ಜೂನ್ 18 ರಿಂದ 22 ರವರೆಗೆ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಆಡಬೇಕಾಗಿದೆ.

ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಅವರು ಐಸಿಸಿ ಟ್ರೋಫಿಯನ್ನು ಗೆಲ್ಲದ ವಿರಾಟ್ ಕೊಹ್ಲಿ ಕುರಿತು ಮಾತನಾಡಿ, ಅವರನ್ನು ಪ್ರಸ್ತುತ ಶ್ರೇಷ್ಠ ಫುಟ್ಬಾಲ್ ಆಟಗಾರ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿಯೊಂದಿಗೆ ಹೋಲಿಸಿದ್ದಾರೆ. ದೊಡ್ಡ ಪಂದ್ಯಾವಳಿಗಳಲ್ಲಿ ಮನೋಧರ್ಮ ಮುಖ್ಯ ಎಂದು ಅವರು ಹೇಳಿದ್ದಾರೆ. ಶಾಂತವಾಗಿರುವುದು ಮತ್ತು ಅವಕಾಶಗಳ ಲಾಭವನ್ನು ಪಡೆದುಕೊಳ್ಳುವುದು ಆಟಗಾರನನ್ನು ಉಳಿದವರಿಗಿಂತ ಭಿನ್ನಗೊಳಿಸುತ್ತದೆ ಎಂದು ರಾಜಾ ಹೇಳಿದರು.

ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗುವ ಅವಕಾಶ
ಇಂಡಿಯಾ ಟಿವಿಯೊಂದಿಗೆ ಮಾತನಾಡಿದ ರಾಜಾ, “ಸರ್ ವಿವಿಯನ್ ರಿಚರ್ಡ್ಸ್ ಅವರನ್ನು ನೋಡಿ, ಅವರು ಯಾವಾಗಲೂ ದೊಡ್ಡ ಪಂದ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಡಬ್ಲ್ಯುಟಿಸಿ ಫೈನಲ್ ಕೊಹ್ಲಿಗೆ ಅದರಲ್ಲಿ ಒಂದು ಶತಕ ಗಳಿಸಲು ಮತ್ತು ಭಾರತಕ್ಕೆ ಟ್ರೋಫಿ ಗೆಲ್ಲಿಸಿಕೊಡಲು ಉತ್ತಮ ಅವಕಾಶವಾಗಿದೆ. ಆದರೆ ಡಬ್ಲ್ಯೂಟಿಸಿ ಟ್ರೋಫಿಯನ್ನು ಗೆಲ್ಲುವುದು ಕೊಹ್ಲಿಗೆ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಲು ಉತ್ತಮ ಅವಕಾಶವಾಗಿದೆ.

ಅವರಿಗೆ ಹಾಗೆ ಮಾಡುವ ಸಾಮರ್ಥ್ಯವಿದೆ. ಅವರು ತಮ್ಮ ಪ್ರತಿಭೆಯನ್ನು ಅನುಗುಣವಾಗಿ ನಿರ್ವಹಿಸಬೇಕು. ಅರ್ಜೆಂಟೀನಾ ಪರ ಮೆಸ್ಸಿ ಇನ್ನೂ ದೊಡ್ಡ ಪ್ರಶಸ್ತಿಯನ್ನು ಗೆದ್ದಿಲ್ಲ. ಇದು ಮನೋಧರ್ಮದ ವಿಷಯ. ವಿಶ್ವಕಪ್ ಫೈನಲ್‌ನಂತಹ ದೊಡ್ಡ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದು ಆಟಗಾರನ ಸಾಮರ್ಥ್ಯವನ್ನು ತೋರಿಸುತ್ತದೆ ಎಂದಿದ್ದಾರೆ.