ನಾನಾಡುವ ದಿನಗಳಲ್ಲೂ ಇಂಟರ್ನೆಟ್ ಲಭ್ಯವಿದ್ದರೆ ಕಿರಿವಯಸ್ಸಿನಲ್ಲೇ ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುತ್ತಿದ್ದೆ: ಸೆಹ್ವಾಗ್
ಭಾರತ, 1999ರಲ್ಲಿ ದಕ್ಷಿಣ ಪ್ರವಾಸ ಕೈಗೊಂಡಾಗ ಸೆಹ್ವಾಗ್ಗೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಲಭ್ಯವಾಯಿತು. ತಾನಾಡಿದ ಮೊದಲ ಟೆಸ್ಟ್ನಲ್ಲೇ ಶತಕ ಬಾರಿಸಿ ಅವರು ಸ್ಥಾನವನ್ನು ಭದ್ರಪಡಿಸಿಕೊಂಡರು.
ಹದಿನಾಲ್ಕು ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಬೌಲರ್ಗಳಿಗೂ ಸಿಂಹಸ್ವಪ್ನರಾಗಿದ್ದ ಭಾರತದ ಮಾಜಿ ಆರಂಭ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಕ್ರಿಕೆಟ್ನ ಎಲ್ಲ ಫಾರ್ಮಾಟ್ಗಳಲ್ಲೂ ಅತ್ಯಂತ ಆಕ್ರಮಣಕಾರಿ ಆಟಗಾರಾಗಿದ್ದರು. ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ ಅವರು 2001ರಲ್ಲಿ ಟೆಸ್ಟ್ ಕರಿಯರ್ ಆರಂಭಿಸಿದ್ದು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರೂಪದಲ್ಲಿ. ಆದರೆ ನಂತರದ ದಿನಗಳಲ್ಲಿ ಆರಂಭ ಆಟಗಾರನಾಗಿ ಬಡ್ತಿ ಪಡೆದು ತಮ್ಮ ಆರಾಧ್ಯದೈವ ಮತ್ತು ಕ್ರಿಕೆಟ್ ವಿಶ್ವದ ಲಿವಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಒಂದು ದಿನದ ಪಂದ್ಯಗಳಲ್ಲಿ ಹಲವಾರು ಬಾರಿ ಇನ್ನಿಂಗ್ಸ್ ಆರಂಭಿಸಿದರು. ಸೆಹ್ವಾಗ್ ತಮ್ಮ ವೃತ್ತಿಬದುಕು ಪ್ರಾರಂಭಿಸಿದ್ದು 21ನೇ ವಯಸ್ಸಿನಲ್ಲಿ. ಅದರೆ, ಈಗಿನ ಆಟಗಾರರಿಗೆ ಲಭ್ಯವಾಗುವ ಇಂಟರ್ನೆಟ್ನಂಥ ಆಧುನಿಕ ತಂತ್ರಜ್ಞಾನದ ನೆರವು ತನಗೆ ಸಿಕ್ಕಿದ್ದರೆ, ಇನ್ನೂ ಚಿಕ್ಕ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದು ಸಾಧ್ಯವಾಗುತಿತ್ತು ಅಂತ ಬುಧವಾರದಂದು ನವದೆಹಲಿಯಲ್ಲಿ ಅವರು ಹೇಳಿದರು.
ಭಾರತ, 1999ರಲ್ಲಿ ದಕ್ಷಿಣ ಪ್ರವಾಸ ಕೈಗೊಂಡಾಗ ಸೆಹ್ವಾಗ್ಗೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಲಭ್ಯವಾಯಿತು. ತಾನಾಡಿದ ಮೊದಲ ಟೆಸ್ಟ್ನಲ್ಲೇ ಶತಕ ಬಾರಿಸಿ ಅವರು ಸ್ಥಾನವನ್ನು ಭದ್ರಪಡಿಸಿಕೊಂಡರು. ತಮ್ಮ ಹಾಸ್ಯಭರಿತ ಟ್ವೀಟ್ಗಳ ಮೂಲಕ ಈಗ ಅಭಿಮಾನಿಗಳನ್ನು ರಂಜಿಸುತ್ತಿರುವ ಸೆಹ್ವಾಗ್, ಈಗಿನ ಬ್ಯಾಟ್ಸ್ಮನ್ಗಳಿಗೆ ತಂತ್ರಜ್ಞಾನದ ನೆರವು ಲಭ್ಯವಿರುವುದರಿಂದ ಬ್ಯಾಟಿಂಗ್ನಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಸರ್ಕುರು ಌಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು.
‘ಇವತ್ತಿನ ಯುವ ಆಟಗಾರರಿಗೆ ಇಂಟರ್ನೆಟ್ನಲ್ಲಿ ವಿಡಿಯೋಗಳು ಲಭ್ಯವಿವೆ ಮತ್ತು ಕ್ರೀಡೆಗೆ ಸಂಬಂಧಿಸಿದ ಪ್ರತಿಯೊಂದು ಅಂಶ ಬೆರಳ ತುದಿಯಲ್ಲಿ ಸಿಗುತ್ತದೆ. ಈ ಸೌಲಭ್ಯಗಳು ನಾನಾಡುವ ದಿನಗಳಲ್ಲಿ ಸಿಕ್ಕಿದ್ದರೆ ನಾನು ಬ್ಯಾಟಿಂಗ್ ಕಲೆಗೆ ಸಂಬಂಧಿಸಿದ ಅಂಶಗಳನ್ನು ಬೇಗ ಕಲಿತು, ಚಿಕ್ಕ ವಯಸ್ಸಿನಲ್ಲೇ ಭಾರತಕ್ಕೆ ಆಡಬಹುದಿತ್ತು,’ ಎಂದು ಅವರು ಹೇಳಿದರು.
ಬ್ಯಾಟಿಂಗ್ನಲ್ಲಿ ತೋರುತ್ತಿದ್ದ ಆಕ್ರಮಣಕಾರಿ ಮನೋಭಾವದಿಂದ ಎದುರಾಳಿ ಬೌಲರ್ಗಳಲ್ಲಿ ಭೀತಿ ಹುಟ್ಟಿಸಿದ್ದ ದೆಹಲಿ ನಜಾಫ್ಗಡ್ನ ಸೆಹ್ವಾಗ್ ಅವರು ಭಾರತಕ್ಕೆ 104 ಟೆಸ್ಟ್, 251 ಒಡಿಐಗಳು ಮತ್ತು 19 ಟಿ20ಐ ಪಂದ್ಯಗಳನ್ನಾಡಿದರು. ತಾನು ಸ್ಟ್ರೇಟ್ಡ್ರೈವ್ ಬಾರಿಸುವದನ್ನು 1992ರ ವಿಶ್ವಕಪ್ನಲ್ಲಿ ಸಚಿನ್ ಆದನ್ನು ಬಾರಿಸುತ್ತಿದ್ದ ರೀತಿ ನೋಡಿ ಕಲಿತಿದ್ದು ಅಂತ ಅವರು ಇದೇ ಕಾರ್ಯಕ್ರಮದಲ್ಲಿ ಹೇಳಿದರು.
‘ಟಿವಿಯಲ್ಲಿ ನಾನು ಕ್ರಿಕೆಟ್ ನೋಡಲಾರಂಭಿಸಿದದ್ದು 1992 ರ ವಿಶ್ಚಕಪ್ ನಡೆಯುತ್ತಿದ್ದ ಸಂದರ್ಭದಲ್ಲಿ. ಆಗಲೇ ನಾನು ಸಚಿನ್ ತೆಂಡೂಲ್ಕರ್ ಅವರ ಸ್ಟ್ರೇಟ್ಡ್ರೈವ್ ಕಲಿತಿದ್ದು,’ ಎಂದು ಸೆಹ್ವಾಗ್ ಹೇಳಿದರು.
ಅವರ ಆಕ್ರಮಣಜಾರಿ ಬ್ಯಾಟಿಂಗ್ನಿಂದ ಭಾರೀ ಪ್ರಭಾವಿತರಾಗಿದ್ದ ಆಗಿನ ಕ್ಯಾಪ್ಟನ್ ಸೌರವ ಗಂಗೂಲಿ ಅವರು ಒಂದು ದಿನದ ಪಂದ್ಯಗಳಲ್ಲಿ ಸಚಿನ್ ಜೊತೆ ಇನ್ನಿಂಗ್ಸ್ ಆರಂಭಿಸಲು ಕಳಿಸಲಾರಂಭಿಸಿದರು. ಹಲವಾರು ವರ್ಷಗಳ ಕಾಲ ಅವರಿಬ್ಬರು ಭಾರತಕ್ಕೆ ಇನ್ನಿಂಗ್ಸ್ ಆರಂಭಿಸಿದರು. ಆರಂಭ ಆಟಗಾರನಾಗಿ ಸೆಹ್ವಾಗ್ ಮಾಡಿದ ಪ್ರಭಾವ ಹೇಗಿತ್ತೆಂದರೆ, ತೆಂಡೂಲ್ಕರ್ ಮತ್ತು ಗಂಗೂಲಿ ಸರದಿಯ ಮೇಲೆ ಓಪನರ್ಗಳಾಗಿ ಆಡಲು ನಿರ್ಧರಿಸಿ, ಸೆಹ್ವಾಗ್ ಅವರನ್ನು ಖಾಯಂ ಆರಂಭ ಆಟಗಾರನಾಗಿ ಉಳಿಸಿಕೊಂಡರು. ಸೆಹ್ವಾಗ್ರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲು ತಜ್ಞರು ಮತ್ತು ಮಾಜಿ ಆಟಗಾರರು ನೀಡುತ್ತಿದ್ದ ಸಲಹೆಗಳನ್ನು ದಾದಾ ಕಿವಿಗೆ ಹಾಕಿಕೊಂಡಿರಲಿಲ್ಲ.
ಸಚಿನ್, ರಾಹುಲ್ ದ್ರಾವಿಡ್, ಗಂಗೂಲಿ, ವಿವಿಎಸ್ ಲಕ್ಷ್ಮಣ್, ಜಿಆರ್ ವಿಶ್ವನಾಥ್, ಸುನಿಲ್ ಗಾವಸ್ಕರ್ ಮೊದಲಾದ ಅತಿರಥ ಮಹಾರಥ ಬ್ಯಾಟ್ಸ್ಮನ್ಗಳು ಭಾರತಕ್ಕಾಗಿ ಆಡಿದರೂ ದೇಶದ ಪರ ಮೊಟ್ಟ ಮೊದಲ ತ್ರಿಶತಕ ದಾಖಲಿಸಿದ್ದು ಸೆಹ್ವಾಗ್. ಅವರ ನಂತರ ಕೇವಲ ಕರ್ನಾಟಕದ ಕರುಣ್ ನಾಯರ್ ಮಾತ್ರ ಭಾರತದ ಪರ ಟ್ರಿಪಲ್ ಸೆಂಚುರಿ ಬಾರಿಸಿದ್ದಾರೆ. ಅಸಲಿಗೆ ಅವರ ಬ್ಯಾಟ್ನಿಂದ ಎರಡು ತ್ರಿಶತಕಗಳು ಬಂದಿವೆ ಮತ್ತು 6 ಡಬಲ್ ಸೆಂಚುರಿಗಳೂ ಅವರ ಹೆಸರಿಗಿವೆ.
ಇದನ್ನೂ ಓದಿ: Throwback! ಪಾಕಿಸ್ತಾನದ ವಿರುದ್ಧ ವೀರೂ ದಾದಾ ಎರಡೇ ಎರಡು ಬಾಲ್ನಲ್ಲಿ 21 ರನ್ ಚಚ್ಚಿದ್ದು ಹೇಗೆ ಅಂತೀರಾ…?
Published On - 8:25 pm, Wed, 9 June 21