ಕೊವಿಡ್-19 ಪಿಡುಗುನಿಂದಾಗಿ ಮುಂದೂಡಲ್ಪಟ್ಟು ಶನಿವಾರದಂದು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆರಂಭಗೊಂಡ ಇಂಡಿಯನ್ ಪ್ರಿಮೀಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಸಿಎಸ್ಕೆ ತಂಡ ಹಾಲಿ ಚಾಒಪಿಯನ್ ಮುಂಬೈ ಇಂಡಿಯನ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿತು.
ಟಾಸ್ ಸೋತು ಬ್ಯಾಟಿಂಗ್ಗೆ ಕಳಿಸಲ್ಪಟ್ಟ ರೋಹಿತ್ ಶರ್ಮ ಅವರ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಸೌರಭ್ ತಿವಾರಿ 31 ಎಸೆತಗಳಲ್ಲಿ 42 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಓಪನರ್ ಕ್ವಿಂಟನ್ ಡಿ ಕಾಕ್ 33 ರನ್ಗಳ (20 ಎಸೆತ) ಕಾಣಿಕೆ ನೀಡಿದರು ಮತ್ತು ಕೈರನ್ ಪೊಲ್ಲಾರ್ಡ್ 14 ಎಸೆತಗಳಲ್ಲಿ 18 ರನ್ ಬಾರಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಚೆನೈ ಕೇವಲ 5 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ತೊಂದರೆಗೆ ಸಿಕ್ಕಿಕೊಂಡಿತ್ತು. ಆದರೆ ಮೂರನೇ ವಿಕೆಟ್ ಜೊತೆಯಾಟದಲ್ಲಿ ಅಂಬಟಿ ರಾಯುಡು (71, 48 ಎಸೆತ 6X4 3X6) ಮತ್ತು ಫಫ್ ಡು ಪ್ಲೆಸ್ಸಿ 116 ರನ್ಗಳನ್ನು ಪೇರಿಸಿ ತಂಡಕ್ಕೆ ಗೆಲುವನ್ನು ಸುಲಭವಾಗಿಸಿದರು. ಪ್ಲೆಸ್ಸಿ ಆಜೇಯ 58 (44 ಎಸೆತ 6X4) ಬಾರಿಸಿದರು.