IPL 2021: ಐಪಿಎಲ್ ಆರಂಭಕ್ಕೂ ಮುನ್ನ RCBಗೆ ಆಘಾತ: ಪ್ರಮುಖ ಆಟಗಾರ ಔಟ್..?

| Updated By: ಝಾಹಿರ್ ಯೂಸುಫ್

Updated on: Jul 25, 2021 | 2:55 PM

IPL 2021 RCB Team: ವಿರಾಟ್ ಕೊಹ್ಲಿ (ನಾಯಕ) ಎ.ಬಿ. ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಫಿನ್ ಅಲೆನ್, ಪವನ್ ದೇಶಪಾಂಡೆ, ಶಹಬಾಜ್ ಅಹ್ಮದ್, ಗ್ಲೆನ್​ ಮ್ಯಾಕ್ಸ್​ವೆಲ್, ಕೈಲ್‌ ಜೇಮಿಸನ್, ಡ್ಯಾನಿಯಲ್​ ಕ್ರಿಶ್ಚಿಯನ್, ಮೊಹಮ್ಮದ್​ ಅಜರುದ್ದೀನ್, ಸುಯಶ್​ ಪ್ರಭುದೇಸಾಯಿ, ಕೆ.ಎಸ್.​ಭರತ್​, ಸಚಿನ್​ ಬೇಬಿ, ರಜತ್​ ಪಾಟೀದಾರ್, ಸ್ಕಾಟ್ ಕುಗ್ಗೆಲಿನ್

IPL 2021: ಐಪಿಎಲ್ ಆರಂಭಕ್ಕೂ ಮುನ್ನ RCBಗೆ ಆಘಾತ: ಪ್ರಮುಖ ಆಟಗಾರ ಔಟ್..?
Rcb
Follow us on

ಕೊರೋನಾ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಸೆಪ್ಟೆಂಬರ್​ನಲ್ಲಿ ಚಾಲನೆ ಸಿಗಲಿದೆ. ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೂರ್ನಿಯ ಉಳಿದ ಭಾಗವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಸೆಪ್ಟೆಂಬರ್ 19 ರಿಂದ ಐಪಿಎಲ್ (IPL 2021) ದ್ವಿತಿಯಾರ್ಧ ಶುರುವಾಗಲಿದ್ದು, ಅಕ್ಟೋಬರ್​ 15ಕ್ಕೆ ಫೈನಲ್ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿದೆ. ಟೂರ್ನಿಯ ಉಳಿದ 31 ಪಂದ್ಯಗಳಿಗಾಗಿ ಆಗಸ್ಟ್​ನಲ್ಲೇ ಕೆಲ ತಂಡಗಳು ಯುಎಇನತ್ತ ಪ್ರಯಾಣ ಬೆಳೆಸಲಿದೆ. ಆದರೆ ಇತ್ತ ಈ ಬಾರಿಯ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಗಾಯಗೊಂಡಿರುವುದು ಇದೀಗ ಆರ್​ಸಿಬಿ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.

ಹೌದು, ಇತ್ತೀಚೆಗೆ ಇಂಗ್ಲೆಂಡ್​ನಲ್ಲಿ ನಡೆದ ಟೀಮ್ ಇಂಡಿಯಾ ಹಾಗೂ ಕೌಂಟಿ ಸೆಲೆಕ್ಟ್ ಇಲೆವೆನ್ ನಡುವಣ ಅಭ್ಯಾಸ ಪಂದ್ಯದ ವೇಳೆ ಆರ್​ಸಿಬಿ (RCB) ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ ಗಾಯದ ಪರಿಣಾಮ ಆಗಸ್ಟ್​ನಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಿಂದ ಸುಂದರ್ ಹೊರಬಿದ್ದಿದ್ದರು. ಇದೀಗ ಆರ್​ಸಿಬಿ ಆಟಗಾರನ ಬೆರಳಿಗೆ ಗಂಭೀರ ಗಾಯವಾಗಿದೆ ಎಂಬ ರಿಪೋರ್ಟ್ ಬಂದಿದೆ. ಈ ಗಾಯವು ಗುಣಮುಖವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ವೈದ್ಯರ ವರದಿ ತಿಳಿಸಿದೆ.

ಗಂಭೀರ ಗಾಯವಾಗಿರುವ ಕಾರಣ ವಾಷಿಂಗ್ಟನ್ ಸುಂದರ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದ್ದು, ಐಪಿಎಲ್ ವೇಳೆಗೆ ಗುಣಮುಖರಾಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳಿಗೆ ವಾಷಿಂಗ್ಟನ್ ಸುಂದರ್ ಅಲಭ್ಯರಾಗುವ ಸಾಧ್ಯತೆಯಿದೆ.

ಈ ಬಾರಿಯ ಐಪಿಎಲ್​ನ್ನು ಭರ್ಜರಿಯಾಗಿ ಆರಂಭಿಸಿರುವ ಆರ್​ಸಿಬಿ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದೆ. ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಜಯಗಳಿಸಿದರೆ 2 ರಲ್ಲಿ ಮಾತ್ರ ಸೋಲನುಭವಿಸಿದೆ. ಅಷ್ಟೇ ಅಲ್ಲದೆ ಯುಎಇ ಮೈದಾನದಲ್ಲೂ ಇದೇ ಫಾರ್ಮ್​ ಮುಂದುವರೆಸಿ ಈ ಸಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಆದರೀಗ ತಂಡದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ವಾಷಿಂಗ್ಟನ್ ಸುಂದರ್ ಅಲಭ್ಯತೆಯು ಆರ್​ಸಿಬಿ ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

IPL 2021 RCB Team: ವಿರಾಟ್ ಕೊಹ್ಲಿ (ನಾಯಕ) ಎ.ಬಿ. ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಫಿನ್ ಅಲೆನ್, ಪವನ್ ದೇಶಪಾಂಡೆ, ಶಹಬಾಜ್ ಅಹ್ಮದ್, ಗ್ಲೆನ್​ ಮ್ಯಾಕ್ಸ್​ವೆಲ್, ಕೈಲ್‌ ಜೇಮಿಸನ್, ಡ್ಯಾನಿಯಲ್​ ಕ್ರಿಶ್ಚಿಯನ್, ಮೊಹಮ್ಮದ್​ ಅಜರುದ್ದೀನ್, ಸುಯಶ್​ ಪ್ರಭುದೇಸಾಯಿ, ಕೆ.ಎಸ್.​ಭರತ್​, ಸಚಿನ್​ ಬೇಬಿ, ರಜತ್​ ಪಾಟೀದಾರ್, ಸ್ಕಾಟ್ ಕುಗ್ಗೆಲಿನ್

ಇದನ್ನೂ ಓದಿ: IPL 2021: ಐಪಿಎಲ್​ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್​ ಪ್ಲ್ಯಾನ್..!

 

ಇದನ್ನೂ ಓದಿ: ದ್ರಾವಿಡ್ ಗರಡಿ ಹುಡುಗರು ಎಡವಿದೆಲ್ಲಿ: ಭಾರತದ ಸೋಲಿಗೆ ಇದುವೇ ಪ್ರಮುಖ ಕಾರಣ..!

 

(Rcb’s Washington Sundar slated to be ruled out for Ipl 2021 second phase)

 

Published On - 2:52 pm, Sun, 25 July 21