ರನ್​ ಮಳೆ ಹರಿಸುವ ಶಾರ್ಜಾದಲ್ಲಿ ಕೊಹ್ಲಿ ಬಾಯ್ಸ್ ಎಡವಿದ್ದು ಎಲ್ಲಿ?

|

Updated on: Oct 16, 2020 | 8:42 AM

ಶಾರ್ಜಾ ಪಂದ್ಯ RCB ಹುಡುಗ್ರು ಮತ್ತು ಕನ್ನಡಿಗರ ನಡುವಿನ ರಣ ರೋಚಕ ಕಾದಾಟವಾಗಿ ಮಾರ್ಪಟ್ಟಿತ್ತು. ರಾಯಲ್ ಹುಡುಗರಿಗೆ ಪಂಜಾಬ್ ವಿರುದ್ಧದ ಪಂದ್ಯ ಪ್ರತಿಷ್ಠೆಯ ಪಂದ್ಯವಾಗಿತ್ತು. ಕಾರಣ ಇದೇ ಸೀಸನ್​ನಲ್ಲಿ ಕಳೆದ ಬಾರಿ ರಾಹುಲ್ ಹುಡುಗರ ಜೊತೆ ಸೆಣಸಾಡಿದ್ದ ಕೊಹ್ಲಿ ಆರ್ಮಿ ಹೀನಾಯವಾಗಿ ಮುಗ್ಗರಿಸಿತ್ತು. ಹೀಗಾಗಿ, ಶಾರ್ಜಾ ಸಮರದಲ್ಲಿ ಪಂಜಾಬ್​ಗೆ ಸೋಲಿನ ಗುನ್ನಾ ನೀಡಬೇಕೆಂದುಕೊಂಡಿದ್ದ RCB ತಂಡ ಮತ್ತದೇ ಮಿಸ್ಟೇಕ್ ಮಾಡಿದೆ. ರನ್​ಮಳೆ ಹರಿಸುವ ಶಾರ್ಜಾದಲ್ಲಿ ಕೊಹ್ಲಿ ಬಾಯ್ಸ್ ಎಡವಿದ್ದೆಲ್ಲಿ? ದುಬೈನಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್​ನಲ್ಲಿ ಶಾರ್ಜಾ […]

ರನ್​ ಮಳೆ ಹರಿಸುವ ಶಾರ್ಜಾದಲ್ಲಿ ಕೊಹ್ಲಿ ಬಾಯ್ಸ್ ಎಡವಿದ್ದು ಎಲ್ಲಿ?
Follow us on

ಶಾರ್ಜಾ ಪಂದ್ಯ RCB ಹುಡುಗ್ರು ಮತ್ತು ಕನ್ನಡಿಗರ ನಡುವಿನ ರಣ ರೋಚಕ ಕಾದಾಟವಾಗಿ ಮಾರ್ಪಟ್ಟಿತ್ತು. ರಾಯಲ್ ಹುಡುಗರಿಗೆ ಪಂಜಾಬ್ ವಿರುದ್ಧದ ಪಂದ್ಯ ಪ್ರತಿಷ್ಠೆಯ ಪಂದ್ಯವಾಗಿತ್ತು. ಕಾರಣ ಇದೇ ಸೀಸನ್​ನಲ್ಲಿ ಕಳೆದ ಬಾರಿ ರಾಹುಲ್ ಹುಡುಗರ ಜೊತೆ ಸೆಣಸಾಡಿದ್ದ ಕೊಹ್ಲಿ ಆರ್ಮಿ ಹೀನಾಯವಾಗಿ ಮುಗ್ಗರಿಸಿತ್ತು. ಹೀಗಾಗಿ, ಶಾರ್ಜಾ ಸಮರದಲ್ಲಿ ಪಂಜಾಬ್​ಗೆ ಸೋಲಿನ ಗುನ್ನಾ ನೀಡಬೇಕೆಂದುಕೊಂಡಿದ್ದ RCB ತಂಡ ಮತ್ತದೇ ಮಿಸ್ಟೇಕ್ ಮಾಡಿದೆ.

ರನ್​ಮಳೆ ಹರಿಸುವ ಶಾರ್ಜಾದಲ್ಲಿ ಕೊಹ್ಲಿ ಬಾಯ್ಸ್ ಎಡವಿದ್ದೆಲ್ಲಿ?
ದುಬೈನಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್​ನಲ್ಲಿ ಶಾರ್ಜಾ ರನ್​ಮಳೆ ಹರಿಸುವ ಕಣ. ಬ್ಯಾಟ್ಸ್​ಮನ್​ಗಳಿಗೆ ಸ್ವರ್ಗದಂತಿರುವ ಶಾರ್ಜಾದಲ್ಲಿ RCB ಸಾಲು ಸಾಲು ಎಡವಟ್ಟುಗಳನ್ನ ಮಾಡಿಕೊಳ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಹುಮ್ಮಸ್ಸಿನಿಂದ್ಲೇ ಬ್ಯಾಟಿಂಗ್ ತೆಗೆದುಕೊಂಡಿದ್ರು. ರನ್​ಮಳೆ ಹರಿಸುವ ನಿರೀಕ್ಷೆಯಲ್ಲೇ ಆರ್​ಸಿಬಿ ಕಣಕ್ಕಿಳಿಯುತ್ತೆ. ಆದ್ರೆ ಬೆಂಗಳೂರು ತಂಡದ ಓಪನರ್​ಗಳು, ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಂತು ರನ್​ ಕಲೆಹಾಕೋಕೆ ಸಾಧ್ಯವಾಗಲಿಲ್ಲ. ಹಾಗಾದ್ರೆ, ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ ಎಡವಿದ್ದೆಲ್ಲಿ?

ಸೋಲಿಗೆ ಕಾರಣ ನಂ.1: ಓಪನಿಂಗ್​ನಲ್ಲಿ ಪಂಕ್ಚರ್ ಆದ ಫಿಂಚ್
ಇದೇ ನೋಡಿ ಮೊದಲ ಕಾರಣ. ಕ್ಯಾಪ್ಟನ್ ಕೊಹ್ಲಿಗೆ ಓಪನರ್​ಗಳ ಮೇಲೆ ಅತೀವ ನಂಬಿಕೆ ಇದೆ. ಅದ್ರಲ್ಲೂ ಌರೋನ್ ಫಿಂಚ್ ಮೇಲೆ ಕ್ಯಾಪ್ಟನ್ ಕೊಹ್ಲಿ, ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಫಿಂಚ್​ನನ್ನು ಆರಂಭದಿಂದ್ಲೂ ಯಾವ ಪಂದ್ಯದಿಂದ ಡ್ರಾಪ್ ಮಾಡಿಲ್ಲ. ನಾಯಕ ಕೊಹ್ಲಿ ನಂಬಿಕೆ ಉಳಿಸಿಕೊಳ್ಳಬೇಕಿದ್ದ ಫಿಂಚ್ ಮತ್ತೆ ಪಂಜಾಬ್ ವಿರುದ್ಧ ಫೇಲಾಗಿದ್ದಾರೆ. 20ರನ್​ಗೆ ಸುಸ್ತಾದ ಫಿಂಚ್ ಪಂಜಾಬ್ ವಿರುದ್ಧ ಪಂಕ್ಚರ್ ಆದ್ರು.

ಸೋಲಿಗೆ ಕಾರಣ ನಂ.2: ಎಬಿಡಿಗೆ 6ನೇ ಕ್ರಮಾಂಕ ಯಾಕೆ?
RCB ಅಭಿಮಾನಿಗಳಲ್ಲಿ ಮೂಡಿರೋ ಪ್ರಶ್ನೆ ಅಂದ್ರೆ ಇದೊಂದೇ ನೋಡಿ. ಎಬಿಡಿಗೆ ನಿನ್ನೆ ಪಂದ್ಯದಲ್ಲಿ 6ನೇ ಕ್ರಮಾಂಕ ನೀಡಿದ್ದೇಕೆ? ಎಬಿಡಿಯನ್ನು 4ನೇ ಕ್ರಮಾಂಕಕ್ಕೆ ಇಳಿಸೋ ಬದಲು ಕೊಹ್ಲಿ 6ನೇ ಕ್ರಮಾಂಕಕ್ಕೆ ಅತಿದೊಡ್ಡ ಎಡವಟ್ಟು ಮಾಡಿಕೊಂಡ್ರು. ಪಂಜಾಬ್ ಬೌಲರ್​ಗಳು ಬ್ಯಾಕ್ ಟು ಬ್ಯಾಕ್ RCB ತಂಡದ ಬ್ಯಾಟ್ಸ್​ಮನ್​ಗಳನ್ನು ಬೇಟೆಯಾಡ್ತಿದ್ರು. ಹೀಗಾಗಿ, 4ನೇ ಕ್ರಮಾಂಕಕ್ಕೆ ವಾಷಿಂಗ್ಟನ್ ಸುಂದರ್​ಗೆ ಕೊಹ್ಲಿ ಕಣಕ್ಕಿಳಿಸ್ತಾರೆ. ಆದ್ರೆ ಅದು ವರ್ಕೌಟ್ ಆಗೋದಿಲ್ಲ.

ಸೋಲಿಗೆ ಕಾರಣ ನಂ.3: ನಾಯಕ ಕೊಹ್ಲಿ ಮಂದಗತಿಯ ಆಟ
ರನ್ ಮಷೀನ್ ಕೊಹ್ಲಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. 3ನೇ ಕ್ರಮಾಂಕದಲ್ಲಿಳಿದ ವಿರಾಟ್ ಶಾರ್ಜಾ​ದಲ್ಲಿ ರನ್​ಸರ್ದಾರ್ ಆಗಿ ಹೊರಹೊಮ್ಮಬಹುದಿತ್ತು. ಆದ್ರೆ, ನಾಯಕ ಕೊಹ್ಲಿ 39 ಎಸೆತದಲ್ಲಿ 48ರನ್​ ಗಳಿಸಲಷ್ಟೇ ಶಕ್ತರಾದ್ರು. ಒಂದೇ ಒಂದು ಸಿಕ್ಸರ್ ಬಾರಿಸದ ವಿರಾಟ್, ಶಾರ್ಜಾದಲ್ಲಿ ಮಂದಗತಿಯ ಬ್ಯಾಟಿಂಗ್ ಮಾಡಿದ್ರು.

ಸೋಲಿಗೆ ಕಾರಣ ನಂ.4: ಸಣ್ಣ ಮೈದಾನದಲ್ಲಿ ಕಡಿಮೆ ಟಾರ್ಗೆಟ್
ಗೆಲುವಿನ ರಿದಮ್​ನಲ್ಲಿದ್ದ RCB ಶಾರ್ಜಾ ಮೈದಾನದಲ್ಲಿ ರನ್​ ಮಳೆ ಹರಿಸಬಹುದಿತ್ತು. ಬಿಗ್ ಸ್ಕೋರ್ ಕಲೆಹಾಕಬಹುದಿದ್ದ ಮೈದಾನದಲ್ಲಿ ಕೊಹ್ಲಿ ಹುಡುಗ್ರು ರನ್ ಕಲೆಹಾಕೋಕೆ ಪರದಾಡಿದ್ರು. ಜೊತೆಗೆ, ಪವರ್​ಪ್ಲೇನಲ್ಲಿ RCB ಪ್ರಮುಖ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಸೇರಿಬಿಟ್ಟಿದ್ರು. ಇದ್ರಿಂದ ಬೆಂಗಳೂರು ತಂಡ ಬಿಗ್ ಸ್ಕೋರ್ ಕನಸಿಗೆ ಕೊಳ್ಳಿಇಟ್ಟಿತ್ತು.

ಸೋಲಿಗೆ ಕಾರಣ ನಂ.5: ದುಬಾರಿ ಬೌಲರ್ ಆದ ಸಿರಾಜ್
ಮೊಹಮ್ಮದ್ ಸಿರಾಜ್ ದುಬಾರಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಶಾರ್ಜಾದಲ್ಲಿ RCB ಪಂಜಾಬ್​ಗೆ ಕೇವಲ 172ರನ್​ಗಳ ಗುರಿ ನೀಡಿತ್ತು. ಬೌಲರ್​ಗಳಿಗೆ ಇದೊಂದು ಸವಾಲಾಗಿತ್ತು. ಇದೇ ದೃಷ್ಟಿಕೋನದಲ್ಲಿ ಪಂಜಾಬ್ ಬ್ಯಾಟ್ಸ್​ಮನ್​ಗಳ ವಿಕೆಟ್ ಪಡೆಯೋಕೆ RCB ಬೌಲರ್​ಗಳು ಮಾಸ್ಟರ್ ಪ್ಲ್ಯಾನ್ ಮಾಡಬೇಕಿತ್ತು. ಆದ್ರೆ ಮೊಹಮ್ಮದ್ ಸಿರಾಜ್ 3 ಓವರ್​ನಲ್ಲಿ 1 ಒಂದು ವಿಕೆಟ್ ಪಡೆದು 44ರನ್ ನೀಡಿ ದುಬಾರಿ ಬೌಲರ್ ಆದ್ರು.

ಇದೆಲ್ಲದರ ಜೊತೆಗೆ, ಕೊನೆ ಓವರ್ ಕೊನೆ ಬಾಲ್ ಕೂಡ ಪಂದ್ಯದ ಫಲಿತಾಂಶ ಬದಲಿಸುವ ಅವಕಾಶ ಇತ್ತು. ಆದ್ರೆ ಕೊನೆ ಬಾಲ್​ನಲ್ಲಿ ಒಂದು ರನ್​ ಬೇಕಿದ್ದಾಗ ಯಜ್ವಿಂದರ್ ಚಹಲ್ ಬಾಲ್​ಗೆ ಪೂರನ್ ಸಿಕ್ಸರ್ ಬಾರಿಸಿ ಪವರ್ ತೋರಿಸಿದ್ರು. ಪಂಜಾಬ್ ಈ ಗೆಲುವಿನ ಮೂಲಕ ಐಪಿಎಲ್ ಪಾಯಿಂಟ್ಸ್​ ಟೇಬಲ್​ನಲ್ಲಿ ಯಾವುದೇ ಏರಿಕೆ ಕಂಡಿಲ್ಲವಾದ್ರೂ, ಕೊನೆಯ ಸ್ಥಾನದಲ್ಲೇ ಇದೆ. ಆದ್ರೆ RCB ಈ ಸೋಲಿನ ಮೂಲಕ ದುಬೈನಲ್ಲಿ 2ನೇ ಬಾರಿ ಮುಗ್ಗರಿಸಿದೆ.