[yop_poll id=”9″]
ಈ ಟೂರ್ನಮೆಂಟ್ನಲ್ಲಿ ಡೆಲ್ಲಿ ಉಳಿದ ಟೀಮುಗಳಿಗಿಂತ ಹೆಚ್ಚು ಸಮತೋಲನ ಕೂಡಿದೆಯೆಂದರೆ ಉತ್ಪ್ರೇಕ್ಷೆಯೆನಿಸದು. ಬ್ಯಾಟಿಂಗ್ನಲ್ಲಿ ಟಾಪ್ ಆರ್ಡರ್ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಓಪನರ್ ಶಿಖರ್ ಧವನ್ ಅವರಿಂದ ದೊಡ್ದ ಪ್ರಮಾಣದ ಕಾಂಟ್ರಿಬ್ಯೂಷನ್ಗಳು ಬರುತ್ತಿಲ್ಲವಾದರೂ ಉಪಯುಕ್ತ ಕಾಣಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಅವರ ಜೊತೆಗಾರ ಪೃಥ್ವಿಶಾ ಭರ್ಜರಿ ಫಾರ್ಮ್ನಲ್ಲಿದ್ದು ಈಗಾಗಲೇ ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ರಿಷಭ್ ಪಂತ್ ಫಾರ್ಮ್ ಕಂಡುಕೊಂಡಿರುವುದು ಶ್ರೇಯಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ಶಿಮ್ರೊನ್ ಹೆಟ್ಮೆಯರ್ರಿಂದ ಬಹಳಷ್ಟು ನಿರೀಕ್ಷಿಸಲಾಗುತ್ತಿದೆ ಅದರೆ, ಕೆರೀಬಿಯನ್ ಆಟಗಾರ ಈ ಸೀಸನ್ನಲ್ಲಿ ಇನ್ನೂ ಟೇಕಾಫ್ ಆಗಿಲ್ಲ.
12 ವಿಕೆಟ್ಗಳೊಂದಿಗೆ ಸದ್ಯಕ್ಕೆ ಪರ್ಪಲ್ ಕ್ಯಾಪ್ನ ಒಡೆಯರಾಗಿರುವ ಕಗಿಸೊ ರಬಾಡ ಎಂದಿನಂತೆ ಡೆಲ್ಲಿಗೆ ವೇಗದ ಬೌಲಿಂಗ್ ಆಕ್ರಮಣದ ನೇತೃತ್ವವಹಿಲಿದ್ದಾರೆ. ಇಶಾಂತ್ ಶರ್ಮ ಲಯ ಕಳೆದುಕೊಂಡವರಂತೆ ಭಾಸವಾಗುತ್ತಿದೆಯಾದರೂ ಇಂದು ಆಡಬಹುದು.
ಸತತವಾಗಿ ನೀರಸ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿರುವ ರಾಬಿನ್ ಉತ್ತಪ್ಪ ಸ್ಥಾನಕ್ಕೆ ಇಂದು ಡೇವಿಡ್ ಮಿಲ್ಲರ್ ಬರಬಹುದು. ಯುವ ಆಟಗಾರ ಯಶಸ್ಚೀ ಜೈಸ್ವಾಲ್ ಇನ್ನೂ ಫೈರ್ ಮಾಡುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಭರವಸೆ ಮೂಡಿಸುತ್ತಿದ್ದಾರೆ. ರಾಹುಲ್ ತೆವಾಟಿಯ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡದ ಶೆಲ್ಡನ್ ಕಾಟ್ರೆಲ್ ಅವರ ಒಂದು ಓವರ್ನಲ್ಲಿ 5 ಸಿಕ್ಸರ್ಗಳನ್ನು ಚಚ್ಚಿದ್ದು ಒಂದು ಫ್ಲೂಕ್ವೆನ್ನುವ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಬೌಲಿಂಗ್ ಆಲ್ರೌಂಡರ್ ಎನ್ನುವುದು ನಿಜವೇ; ಆದರೆ, ರಾಯಲ್ಸ್ ಟೀಮು ಅವರಿಂದ ಬ್ಯಾಟಿಂಗ್ನಲ್ಲೂ ಚಿಕ್ಕಪುಟ್ಟ ಕಾಣಿಕೆಗಳನ್ನು ನಿರೀಕ್ಷಿಸುತ್ತಿದೆ. ಕನ್ನಡಿಗ ಶ್ರೇಯಸ್ ಗೋಪಾಲ್ ಸಹ ಕಳಪೆ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.
ಜೊಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ ಮತ್ತು ಜಯದೇವ್ ಉನಾಡ್ಕಟ್ ಅವರನ್ನೊಳಗೊಂಡ ರಾಯಲ್ಸ್ ವೇಗದ ದಾಳಿ ಫಾರ್ಮೈಡೆಬಲ್ ಅನಿಸುತ್ತದಾದರೂ, ಒಂದು ಯುನಿಟ್ ಆಗಿ ಕ್ಲಿಕ್ಕಾಗುತ್ತಿಲ್ಲ.
ಸ್ಯಾಮ್ಸನ್ ಮತ್ತು ಸ್ಮಿತ್ ಇಂದು ಸಿಡಿದೆದ್ದರೆ ಮಾತ್ರ ರಾಯಲ್ಸ್ ಟೀಮಿನ ದಿಶೆ ಬದಲಾಗಬಹುದು.
Published On - 5:24 pm, Fri, 9 October 20