RR vs DC, IPL 2021: ರಿಷಭ್ ಪಂತ್ ರನೌಟ್ ಮಾಡಿ ಮೈದಾನದಲ್ಲೇ ಸ್ಟೆಪ್ ಹಾಕಿದ ಪರಾಗ್!

| Updated By: ganapathi bhat

Updated on: Nov 30, 2021 | 12:21 PM

ರಿಷಭ್ ಪಂತ್ ವಿಕೆಟ್ ರಾಜಸ್ಥಾನ್​ಗೆ ಅಗತ್ಯವಾಗಿತ್ತು. ಅರ್ಧಶತಕ ಮಾಡಿ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ 12.4ನೇ ಬಾಲ್​ಗೆ ಅವಸರದ ಓಟಕ್ಕೆ ಮುಂದಾಗಿ ಔಟ್ ಆದರು. ರಿಯಾನ್ ಪರಾಗ್ ಎಸೆದ ಚೆಂಡು ನೇರವಾಗಿ ವಿಕೆಟ್​ಗೆ ತಗುಲಿತು.

RR vs DC, IPL 2021: ರಿಷಭ್ ಪಂತ್ ರನೌಟ್ ಮಾಡಿ ಮೈದಾನದಲ್ಲೇ ಸ್ಟೆಪ್ ಹಾಕಿದ ಪರಾಗ್!
ರಿಯಾನ್ ಪರಾಗ್ ಡ್ಯಾನ್ಸ್
Follow us on

ಮುಂಬೈ: ಇಲ್ಲಿ ನಡೆಯುತ್ತಿರುವ ಐಪಿಎಲ್ 2021ರ 7ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೆಣೆಸಾಡುತ್ತಿದೆ. ಪಂದ್ಯದ ಮೊದಲನೇ ಇನ್ನಿಂಗ್ಸ್ ವೇಳೆ ರಿಯಾನ್ ಪರಾಗ್ ಡ್ಯಾನ್ಸ್ ಮಾಡಿದ್ದಾರೆ. ಡೆಲ್ಲಿ ಪರ ಪ್ರಮುಖ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ಹೊರನಡೆಯುತ್ತಿದ್ದರು. ಆದರೆ, ಈ ನಡುವೆ ಡೆಲ್ಲಿ ನಾಯಕ ರಿಷಭ್ ಪಂತ್ ಉತ್ತಮ ಆಟ ತೋರಿದ್ದರು. ಅರ್ಧಶತಕ ಬಾರಿಸಿ ತಂಡವನ್ನು ಮುನ್ನಡೆಸುತ್ತಿದ್ದರು.

ರಿಷಭ್ ಪಂತ್ ವಿಕೆಟ್ ರಾಜಸ್ಥಾನ್​ಗೆ ಅಗತ್ಯವಾಗಿತ್ತು. ಅರ್ಧಶತಕ ಮಾಡಿ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ 12.4ನೇ ಬಾಲ್​ಗೆ ಅವಸರದ ಓಟಕ್ಕೆ ಮುಂದಾಗಿ ಔಟ್ ಆದರು. ರಿಯಾನ್ ಪರಾಗ್ ಎಸೆದ ಚೆಂಡು ನೇರವಾಗಿ ವಿಕೆಟ್​ಗೆ ತಗುಲಿತು. ಪರಾಗ್ ಡೈರೆಕ್ಟ್ ಹಿಟ್​ಗೆ ಪಂತ್ ವಿಕೆಟ್ ಒಪ್ಪಿಸಿ ನಿರ್ಗಮಿಸಬೇಕಾಯ್ತು. ಡೆಲ್ಲಿ ತಂಡದ ಮುಖ್ಯ ವಿಕೆಟ್ ಪತನದ ಸಂಭ್ರಮದಲ್ಲಿ ರಿಯಾನ್ ಪರಾಗ್ ಮೈದಾನದಲ್ಲೇ ಸ್ಟೆಪ್ ಹಾಕಿದರು. ರಿಯಾನ್ ಪರಾಗ್ ಹೊಸ ಸ್ಟೆಪ್ ಟ್ವಿಟರ್​ನಲ್ಲಿ ಸದ್ದು ಮಾಡುತ್ತಿದೆ. ಐಪಿಎಲ್ ಟ್ವಿಟರ್ ಹ್ಯಾಂಡಲ್ ಡ್ಯಾನ್ಸ್​ ತುಣುಕನ್ನು ಹಂಚಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 147 ರನ್ ದಾಖಲಿಸಿದೆ. ರಾಜಸ್ಥಾನ್ ರಾಯಲ್ಸ್​ಗೆ 148 ರನ್​ಗಳ ಟಾರ್ಗೆಟ್ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅವರು 32 ಬಾಲ್​ಗೆ 51 ರನ್ ದಾಖಲಿಸಿದ್ದಾರೆ. ಉಳಿದಂತೆ ಅಗ್ರಕ್ರಮಾಂಕದ ದಾಂಡಿಗರು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಪೃಥ್ವಿ ಶಾ, ಧವನ್, ಸ್ಟಾಯಿನಸ್, ರಹಾನೆ ಒಂದಂಕಿ ದಾಟದೆ ಬ್ಯಾಟಿಂಗ್ ವಿಭಾಗ ವಿಫಲಗೊಂಡಿದೆ.

ರಾಜಸ್ಥಾನ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಉನಾದ್ಕತ್ 4 ಓವರ್​ಗೆ 15 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದ್ದಾರೆ. ಮಾರಿಸ್ ಹಾಗೂ ತೆವಾಟಿಯಾ ದುಬಾರಿಯಾಗಿದ್ದು ಬಿಟ್ಟರೆ ಉಳಿದ ಬೌಲರ್​ಗಳು ಡೆಲ್ಲಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಮುಸ್ತಫಿಜುರ್ 2 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: RR vs DC Live Score, IPL 2021: ಪಂತ್ ಏಕಾಂಗಿ ಹೋರಾಟ, ಉನಾದ್ಕತ್ ಸೂಪರ್ ಬೌಲಿಂಗ್; ರಾಜಸ್ಥಾನ್​ಗೆ 148 ರನ್ ಗುರಿ

ಇದನ್ನೂ ಓದಿ: Tamannaah Bhatia: ತಮನ್ನಾ ಭಾಟಿಯಾ ಹಿಂದಿರುವುದು ವಿರಾಟ್ ಕೊಹ್ಲಿ…?

Published On - 9:30 pm, Thu, 15 April 21