ರೋಹಿತ್ ಶರ್ಮರಿಂದ ಇಂದು ಹೊಸ ದಾಖಲೆಗಳ ನಿರೀಕ್ಷೆ

|

Updated on: Sep 23, 2020 | 6:13 PM

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಇಂದು ಕೆಕೆಆರ್ ವಿರುದ್ಧ ಆಡುವ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಸ್ಥಾಪಿಸುವ ಸಾಧ್ಯತೆಯಿದೆ. ಇದುವರೆಗೆ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ 189 ಪಂದ್ಯಗಳನ್ನಾಡಿರುವ ರೋಹಿತ್, 31.47 ಸರಾಸರಿಯಲ್ಲಿ 4,910 ರನ್ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು 90 ರನ್ ಗಳಸಿದ್ದೇಯಾದರೆ, ಕೇವಲ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಅವರು ಮಾತ್ರ ಇರುವ 5,000 ರನ್ ಕ್ಲಬ್​ನ ಸದಸ್ಯರಾಗಲಿದ್ದಾರೆ. ಕೊಹ್ಲಿ 178 ಪಂದ್ಯಗಳನ್ನಾಡಿ 37.68ರ ಸರಾಸರಿಯಲ್ಲಿ 5,426 ರನ್ ಕಲೆ ಹಾಕಿದ್ದರೆ, ರೈನಾ […]

ರೋಹಿತ್ ಶರ್ಮರಿಂದ ಇಂದು ಹೊಸ ದಾಖಲೆಗಳ ನಿರೀಕ್ಷೆ
Follow us on

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಇಂದು ಕೆಕೆಆರ್ ವಿರುದ್ಧ ಆಡುವ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಸ್ಥಾಪಿಸುವ ಸಾಧ್ಯತೆಯಿದೆ. ಇದುವರೆಗೆ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ 189 ಪಂದ್ಯಗಳನ್ನಾಡಿರುವ ರೋಹಿತ್, 31.47 ಸರಾಸರಿಯಲ್ಲಿ 4,910 ರನ್ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು 90 ರನ್ ಗಳಸಿದ್ದೇಯಾದರೆ, ಕೇವಲ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಅವರು ಮಾತ್ರ ಇರುವ 5,000 ರನ್ ಕ್ಲಬ್​ನ ಸದಸ್ಯರಾಗಲಿದ್ದಾರೆ.

ಕೊಹ್ಲಿ 178 ಪಂದ್ಯಗಳನ್ನಾಡಿ 37.68ರ ಸರಾಸರಿಯಲ್ಲಿ 5,426 ರನ್ ಕಲೆ ಹಾಕಿದ್ದರೆ, ರೈನಾ 193 ಪಂದ್ಯಗಳಲ್ಲಿ 5.368 ರನ್​ಗಳನ್ನು 33.34 ಸರಾಸರಿಯಲ್ಲಿ ಗಳಿಸಿದ್ದಾರೆ.

ಹಾಗೆಯೇ, ರೋಹಿತ್ ಐಪಿಎಲ್ ಟೂರ್ನಿಯಲ್ಲಿ ಇದುವರೆಗೆ 194 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಇನ್ನು 6 ಬಾರಿ ಅವರು ಚೆಂಡನ್ನು ಬೌಂಡರಿ ಗೆರೆ ಮೇಲಿಂದ ಆಚೆ ಕಳಿಸಿದರೆ, 200 ಕ್ಕಿಂತ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿರುವ 4ನೇ ಆಟಗಾರನೆನಿಸಿಕೊಳ್ಳಲಿದ್ದಾರೆ. ಕ್ರಿಸ್ ಗೇಲ್ (326) ಎಬಿ ಡಿ ವಿಲಿಯರ್ಸ್ (214) ಮತ್ತು ಎಮ್ ಎಸ್ ಧೋನಿ (209) ಇನ್ನೂರಕ್ಕಿಂತ ಜಾಸ್ತಿ ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

ಕ್ಯಾಚ್​ಗಳ ವಿಷಯಕ್ಕೆ ಬಂದರೆ ರೋಹಿತ್ ಇದುವರೆಗೆ 83 ಕ್ಯಾಚ್​ಗಳನ್ನು ಹಿಡಿದು ಮೂರನೇ ಸ್ಥಾನದಲ್ಲಿದ್ದಾರೆ. ಅವರಿಗಿಂತ ಜಾಸ್ತಿ ಕ್ಯಾಚ್​ಗಳನ್ನು ಹಿಡಿದಿರುವವರೆಂದರೆ, ಡಿ ವಿಲಿಯರ್ಸ್ (84) ಮತ್ತು ರೈನಾ (102).