ಆರ್‌ಸಿಬಿ ತಂಡ ಈ ಸೀಸ್‌ನಲ್ಲಿ ತನ್ನ 12ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಅಬುದಾಬಿಯಲ್ಲಿ ಮುಖಾಮುಖಿಯಾಗ್ತಿದೆ. ಉಭಯ ತಂಡಗಳಿಗೆ ಇಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಎರಡೂ ತಂಡಗಳಿಗೆ ಪ್ಲೇ ಆಫ್‌ಗೆ ಎಂಟ್ರಿಕೊಡೋಕೆ ಇನ್ನೊಂದು ಗೆಲುವಿನ ಅನಿವಾರ್ಯತೆ ಇದೆ. ಹೀಗಾಗಿ ಅಬುಧಾಬಿಯಲ್ಲಿ ಇಂದು ಆರ್‌ಸಿಬಿ ಮತ್ತು ಮುಂಬೈ ನಡುವೆ ಬಿಗ್ ಫೈಟ್ ನಡೆಯಲಿದೆ.
ಎರಡು ತಂಡಕ್ಕೆ ಕಾಡ್ತಿದೆ ಗಾಯದ ಸಮಸ್ಯೆ!
ಆಘಾತಕಾರಿ ಸಂಗತಿ ಅಂದ್ರೆ, ಆರ್‌ಸಿಬಿ ಮತ್ತು ಮುಂಬೈ ತಂಡಗಳಿಗೆ ಗಾಯದ ಸಮಸ್ಯೆ ಕಾಡ್ತಿದೆ. ಮೊದಲಿಗೆ ಮುಂಬೈಗೆ ನಾಯಕ ರೋಹಿತ್ ಶರ್ಮಾ, ಅಲಭ್ಯತೆ ಇಂದಿನ ಪಂದ್ಯದಲ್ಲೂ ಕಾಡೋ ಸಾಧ್ಯತೆಯಿದೆ. ಮಂಡಿ ನೋವಿನಿಂದ ಬಳಲುತ್ತಿರೋ ರೋಹಿತ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
[yop_poll id=”24″]
ಇತ್ತ ವೇಗಿ ನವದೀಪ್ ಸೈನಿ ಗಾಯಗೊಂಡಿರೋದು, ಆರ್ಸಿಬಿಗೆ ಪಾಳಯದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಬಲಗೈಗೆ ಗಾಯ ಮಾಡಿಕೊಂಡಿರೋ ಸೈನಿ ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಕ್ಯಾಪ್ಟನ್ ಕೊಹ್ಲಿ, ಡೇಲ್ ಸ್ಟೇನ್ಗೆ ಅವಕಾಶ ನೀಡೋ ಸಾಧ್ಯತೆ ಹೆಚ್ಚಿದೆ. ಸೈನಿ ಪ್ಲೇಸ್ಗೆ ಸ್ಟೇನ್ ಬಂದ್ರೂ, ಸೈನಿ ಸ್ಥಾನವನ್ನ ತುಂಬ್ತಾರಾ ಅನ್ನೋ ಅನುಮಾನ ಆರ್‌ಸಿಬಿ ಮ್ಯಾನೇಜ್ಮೆಂಟ್ಗಿದೆ.
ಆಲ್‌ರೌಂಡರ್ ಕೋಟಾದಲ್ಲಿ ದುಬೆಗೆ ಅವಕಾಶ!
ಚೆನ್ನೈ ವಿರುದ್ಧದ ಸೋಲಿನ ಬಳಿಕ ಆರ್‌ಸಿಬಿ ತಂಡ, ಸಖತ್ ಪ್ರಾಕ್ಟೀಸ್ ನಡೆಸಿದೆ. ಪ್ರಾಕ್ಟೀಸ್ ಸೆಷನ್‌ನಲ್ಲಿ ಆಲ್‌ರೌಂಡರ್ ಶಿವಮ್ ದುಬೆ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದುಬೆ, ತಾವಾಡಿದ 27 ಬಾಲ್‌ಗಳಲ್ಲಿ 73 ರನ್ ಸಿಡಿಸಿದ್ದಾರೆ. ಫಿಯರ್‌ಲೆಸ್ ಆಗಿ ಬ್ಯಾಟ್ ಬೀಸಿದ ದುಬೆ, 4 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದ್ದಾರೆ. ಹೀಗಾಗಿ ಮುಂಬೈ ವಿರುದ್ಧ ದುಬೆ ಆರ್‌ಸಿಬಿ ತಂಡವನ್ನ ಸೇರಿಕೊಳ್ಳೋ ಸಾಧ್ಯತೆ ಹೆಚ್ಚಿದೆ.
ಕಳೆದ ಪಂದ್ಯದಲ್ಲಿ ಎರಡು ತಂಡಗಳಿಗೆ ಮುಖಭಂಗ!
ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಮುಂಬೈ ಮುಗ್ಗರಿಸಿವೆ. ಮುಂಬೈ ಇಂಡಿಯನ್ಸ್ ತಂಡವನ್ನ, ಕಳೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡ 8 ವಿಕೆಟ್‌ಗಳಿಂದ ಮಣಿಸಿತ್ತು. ಇನ್ನೂ ಆರ್‌ಸಿಬಿ ತಂಡವನ್ನ ಸಿಎಸ್‌ಕೆ ಕೂಡ 8 ವಿಕೆಟ್‌ಗಳಿಂದ ಸೋಲಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಿ, 2 ಪಾಯಿಂಟ್ ಪಡೆದು ಪ್ಲೇ ಆಫ್‌ಗೆ ಎಂಟ್ರಿ ಕೊಡೋದಕ್ಕೆ ಎರಡು ತಂಡಗಳು ತುದಿಗಾಲಲ್ಲಿ ನಿಂತಿವೆ.
ನಿಜ.. ಈ ಸೀಸನ್ನಲ್ಲಿ ಮುಂಬೈ ವಿರುದ್ಧ ಗೆಲುವು ದಾಖಲಿಸಿರೋದು ಆರ್‌ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರ ಜೊತೆಯಲ್ಲೇ ರೋಹಿತ್ ಶರ್ಮಾ ಅನುಪಸ್ಥಿತಿ, ಕೊಹ್ಲಿ ಪಡೆಗೆ ಅಡ್ವಾಂಟೇಜ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಇಂದೇ ಕೊಹ್ಲಿ ಪಡೆ ಪ್ಲೇ ಆಫ್‌ಗೆ ಅಧಿಕೃತವಾಗಿ ಎಂಟ್ರಿ ಕೊಡುತ್ತೆ ಅನ್ನೋ ವಿಶ್ವಾಸ ಅಭಿಮಾನಿಗಳಲ್ಲಿದೆ.
Published On - 8:53 am, Wed, 28 October 20