
ಮುಂಬೈ: ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ರಾಜಸ್ಥಾನ್ ಪರ ನಾಯಕ ಸಂಜು ಸ್ಯಾಮ್ಸನ್ ಔಟಾಗದೆ 41 ಬಾಲ್ಗೆ 42, ಮಿಲ್ಲರ್ ಔಟಾಗದೆ 24 ರನ್ ಕಲೆಹಾಕಿದ್ದಾರೆ. ಶಿವಂ ದುಬೆ ಹಾಗೂ ಜೈಸ್ವಾಲ್ ತಲಾ 22 ರನ್ ದಾಖಲಿಸಿ ತಂಡಕ್ಕೆ ನೆರವಾಗಿದ್ದಾರೆ. ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದಿದ್ದಾರೆ. ಶಿವಂ ಮಾವಿ ಹಾಗೂ ಸುನಿಲ್ ನರೈನ್ ರನ್ ನಿಯಂತ್ರಿಸಿದ್ದಾರೆ. ಆದರೂ ಪಂದ್ಯ ಗೆಲ್ಲಲು ಕೋಲ್ಕತ್ತಾ ವಿಫಲವಾಗಿದೆ.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್ಗೆ 9 ವಿಕೆಟ್ ಕಳೆದುಕೊಂಡು 133 ರನ್ ದಾಖಲಿಸಿತ್ತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ಗೆ ಗೆಲ್ಲಲು 134 ರನ್ ಗುರಿ ನೀಡಿತ್ತು. ಕೋಲ್ಕತ್ತಾ ಪರ ನಿತೀಶ್ ರಾಣಾ 22, ರಾಹುಲ್ ತ್ರಿಪಾಠಿ 36 ಹಾಗೂ ದಿನೇಶ್ ಕಾರ್ತಿಕ್ 25 ರನ್ ಗಳಿಸಿದ್ದರು. ಉಳಿದ ಪ್ರಮುಖ ಬ್ಯಾಟ್ಸ್ಮನ್ಗಳು ಒಂದಂಕಿ ದಾಟಲು ಪರದಾಡಿದ್ದರು.
ರಾಜಸ್ಥಾನ್ ರಾಯಲ್ಸ್ ಪರ ಕ್ರಿಸ್ ಮಾರಿಸ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. 4 ಓವರ್ಗೆ 23 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಸಕರಿಯಾ, ಉನಾದ್ಕತ್ ಹಾಗೂ ಮುಸ್ತಫಿಜುರ್ ರಹಮಾನ್ ತಲಾ 1 ವಿಕೆಟ್ ಪಡೆದಿದ್ದರು.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳ ಗೆಲುವು ದಾಖಲಿಸಿದೆ. 18.5 ಓವರ್ಗಳಲ್ಲೇ 134 ರನ್ ದಾಖಲಿಸಿ ಗುರಿ ತಲುಪಿದೆ. ಕೋಲ್ಕತ್ತಾ ಮತ್ತೆ ಸೋಲುಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಡೇವಿಡ್ ಮಿಲ್ಲರ್ ಜೊತೆಯಾಟ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದೆ. ರಾಜಸ್ಥಾನ್ ಗೆಲ್ಲಲು 12 ಬಾಲ್ಗೆ ಕೇವಲ 5 ರನ್ ಬೇಕಾಗಿದೆ.
ರಾಜಸ್ಥಾನ್ ರಾಯಲ್ಸ್ 16 ಓವರ್ಗೆ 4 ವಿಕೆಟ್ ಕಲೆದುಕೊಂಡು 113 ರನ್ ದಾಖಲಿಸಿದೆ. ತಂಡ ಗೆಲ್ಲಲು 24 ಬಾಲ್ ಉಳಿದಿರುವಂತೆ 21 ರನ್ ಬೇಕಿದೆ. ಸಂಜು ಸ್ಯಾಮ್ಸನ್ ಹಾಗೂ ಡೇವಿಡ್ ಮಿಲ್ಲರ್ ಕ್ರೀಸ್ನಲ್ಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಗೆಲ್ಲಲು 30 ಬಾಲ್ಗೆ 30 ರನ್ ಬೇಕಾಗಿದೆ. ತಂಡದ ಮೊತ್ತ 15 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 104 ಆಗಿದೆ. ರಿಯಾನ್ ಪರಾಗ್, ಮಾರಿಸ್ ಬ್ಯಾಟಿಂಗ್ಗೆ ಬಾಕಿ ಇದ್ದಾರೆ.
ರಾಜಸ್ಥಾನ್ ರಾಯಲ್ಸ್ 14 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿದೆ. ರಾಜಸ್ಥಾನ್ ಗೆಲ್ಲಲು 36 ಬಾಲ್ಗೆ 33 ರನ್ ಬೇಕಿದೆ. ಸಂಜು ಸ್ಯಾಮ್ಸನ್ 34 ಬಾಲ್ಗೆ 35 ಹಾಗೂ ಡೇವಿಡ್ ಮಿಲ್ಲರ್ 1 ಬಾಲ್ಗೆ 1 ರನ್ ಗಳಿಸಿ ಆಡುತ್ತಿದ್ದಾರೆ.
ಸಂಜು ಜೊತೆ ಉತ್ತಮ ಆಟ ಆಡುತ್ತಿದ್ದ ದುಬೆ, 22 ರನ್ಗಳಿಸಿ ರಾಹುಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ಹಿಂದಿನ ಎಸೆತದಲ್ಲಿ ರಾಹುಲ್ ಬೌಲಿಂಗ್ನಲ್ಲಿ ಭರ್ಜರಿ ಬೌಂಡರಿ ಬಾರಿಸಿದ್ದ ದುಬೆ ಮುಂದಿನ ಎಸೆತದಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ. ಈ ಜೋಡಿ ತಂಡದ ಮೊತ್ತವನ್ನು ಶತಕದತ್ತ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ.
ಎರಡು ವಿಕೆಟ್ ಉರುಳಿದ ಬಳಿಕ ನಾಯಕ ಸಂಜುಗೆ ಜೊತೆಯಾಗಿರುವ ದುಬೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಈ ಎರಡು ಜೋಡಿಯ ಆಟ ತಂಡಕ್ಕೆ ಅವಶ್ಯಕವಾಗಿದೆ. ಸಂಜು 19 ಬಾಲ್ಗೆ 27 ರನ್ಗಳಿಸಿದರೆ, ದುಬೆ 17 ರನ್ಗಳಿಸಿ ಬ್ಯಾಟಿಂಗ್ನಲ್ಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಗೆಲ್ಲಲು 78 ಬಾಲ್ಗೆ 75 ರನ್ ಬೇಕಾಗಿದೆ. ಸಂಜು ಸ್ಯಾಮ್ಸನ್ 10 ಬಾಲ್ಗೆ 15 ಹಾಗೂ ಶಿವಂ ದುಬೆ 8 ಬಲ್ಗೆ 13 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
6 ಓವರ್ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ 50 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಗೆಲ್ಲಲು 84 ಬಾಲ್ಗೆ 84 ರನ್ ಬೇಕಿದೆ. ತಂಡದ ಪರ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಎ ಬ್ಯಾಟ್ ಮಾಡುತ್ತಿದ್ದಾರೆ.
ಯಶಸ್ವಿ ಜೈಸ್ವಾಲ್ 17 ಬಾಲ್ಗೆ 22 ರನ್ ಗಳಿಸಿ ಔಟ್ ಆಗಿದ್ದಾರೆ. ಶಿವಂ ಮಾವಿ ಬೌಲಿಂಗ್ಗೆ ನಾಗರ್ಕೋಟಿ ಕ್ಯಾಚ್ ಹಿಡಿದು ಎರಡನೇ ವಿಕೆಟ್ ಪಡೆದಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಬ್ಯಾಟಿಂಗ್ ಮಾಡುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಮೊದಲ ವಿಕೆಟ್ ಪತನವಾಗಿದೆ. ಜಾಸ್ ಬಟ್ಲರ್ 5 ರನ್ ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ 4 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 30 ರನ್ ಪೇರಿಸಿದೆ. ರಾಜಸ್ಥಾನ್ ರಾಯಲ್ಸ್ ಪರ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗೆಲ್ಲಲು 104 ರನ್ ಬೇಕಿದೆ.
ರಾಜಸ್ಥಾನ್ ರಾಯಲ್ಸ್ 2 ಓವರ್ನ ಅಂತ್ಯಕ್ಕೆ ವಿಕೆಟ್ ನ್ಟವಿಲ್ಲದೆ 12 ರನ್ ಗಳಿಸಿದೆ. ಗೆಲ್ಲಲು 122 ರನ್ ಬೇಕಿದೆ. ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಕ್ರಿಸ್ನಲ್ಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ಗೆ 133 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಗೆಲ್ಲಲು 134 ರನ್ ಗುರಿ ತಲುಪಬೇಕಿದೆ. ಇನ್ನಿಂಗ್ಸ್ನ ಕೊನೆಯ ಬಾಲ್ನಲ್ಲಿ ಶಿವಂ ಮಾವಿ ಔಟ್ ಆಗಿದ್ದಾರೆ.
ಕ್ರಿಸ್ ಮಾರಿಸ್ ಬೌಲಿಂಗ್ಗೆ ರಿಯಾನ್ ಪರಾಗ್ಗೆ ಕ್ಯಾಚ್ ನೀಡಿ ಕಮ್ಮಿನ್ಸ್ ಔಟ್ ಆಗಿದ್ದಾರೆ. 6 ಬಾಲ್ಗೆ 10 ರನ್ ನೀಡಿ ನಿರ್ಗಮಿಸಿದ್ದಾರೆ. ಶಿವಂ ಮಾವಿ ಹಾಗೂ ಪ್ರಸಿದ್ಧ್ ಕೃಷ್ಣ ಕ್ರಿಸ್ನಲ್ಲಿದ್ದಾರೆ.
ಇನ್ನು ಒಂದು ಓವರ್ ಬಾಕಿ ಉಳಿದಿರುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಮೊತ್ತ 7 ವಿಕೆಟ್ ಕಳೆದುಕೊಂಡು 127 ಆಗಿದೆ. ಕಮ್ಮಿನ್ಸ್ ಹಾಗೂ ಶಿವಂ ಮಾವಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉತ್ತಮ ಆಟವಾಡಿದ್ದ ದಿನೇಶ್ ಕಾರ್ತಿಕ್ ಔಟ್ ಆಗಿದ್ದಾರೆ. 24 ಬಾಲ್ಗೆ 25 ರನ್ ಗಳಿಸಿ, ಮಾರಿಸ್ ಬಾಲ್ಗೆ ಸಕರಿಯಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಕೆಕೆಆರ್ ತಂಡ 18 ಓವರ್ಗೆ 118 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ.
ಆಂಡ್ರೆ ರಸ್ಸೆಲ್ 7 ಬಾಲ್ಗೆ ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಪಾಟ್ ಕಮ್ಮಿನ್ಸ್ ಹಾಗೂ ದಿನೇಶ್ ಕಾರ್ತಿಕ್ ಕಣದಲ್ಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 17 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 110 ರನ್ ದಾಖಲಿಸಿದೆ. ದಿನೇಶ್ ಕಾರ್ತಿಕ್ 22 ಬಾಲ್ಗೆ 25 ಹಾಗೂ ರಸ್ಸೆಲ್ 4 ಬಾಲ್ಗೆ 3 ರನ್ ಗಳಿಸಿ ಕ್ರಿಸ್ನಲ್ಲಿದ್ದಾರೆ.
ಮುಸ್ತಫಿಜುರ್ ರಹಮಾನ್ ಬಾಲ್ಗೆ ರಿಯಾನ್ ಪರಾಗ್ಗೆ ಕ್ಯಾಚ್ ನೀಡಿ ರಾಹುಲ್ ತ್ರಿಪಾಠಿ ಔಟ್ ಆಗಿದ್ದಾರೆ. ಉತ್ತಮವಾಗಿ ಆಡುತ್ತಿದ್ದ ತ್ರಿಪಾಠಿ 36 ರನ್ ಗಳಿಸಿ ನಿರ್ಗಮಿಸಿದ್ದಾರೆ. ದಿನೇಶ್ ಕಾರ್ತಿಕ್ ಹಾಗೂ ಆಂಡ್ರೆ ರಸ್ಸೆಲ್ ಜೊತೆಯಾಗಿದ್ದಾರೆ. ಅಂತಿಮ ಓವರ್ಗಳಲ್ಲಿ ಸ್ಫೋಟಕ ಆಟ ಕಾಣುವ ನಿರೀಕ್ಷೆ ಇದೆ. ಕೆಕೆಆರ್ 16 ಓವರ್ಗೆ 98 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15ನೇ ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 93 ರನ್ ದಾಖಲಿಸಿದೆ. ರಾಹುಲ್ ತ್ರಿಪಾಠಿ 25 ಬಾಲ್ಗೆ 36 ರನ್ ಹಾಗೂ ದಿನೇಶ್ ಕಾರ್ತಿಕ್ 14 ಬಾಲ್ಗೆ 14 ರನ್ ಪೇರಿಸಿ ಇನ್ನಿಂಗ್ಸ್ ಮೊತ್ತ ಹೆಚ್ಚಿಸಲು ಪ್ರಯತ್ಮಿಸುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 13 ಓವರ್ಗೆ 76 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ರಾಹುಲ್ ತ್ರಿಪಾಠಿ ಕೋಲ್ಕತ್ತಾಗೆ ಆಸರೆಯಾಗಿದ್ದಾರೆ. ದಿನೇಶ್ ಕಾರ್ತಿಕ್ ಕ್ರೀಸ್ನಲ್ಲಿದ್ದಾರೆ.
ಕೆಕೆಆರ್ ನಾಯಕ ಇಯಾನ್ ಮೋರ್ಗನ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಕ್ರಿಸ್ ಮಾರಿಸ್ಗೆ ರನ್ ಔಟ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಇದು ಪಂದ್ಯದ ಎರಡನೇ ರನ್ ಔಟ್ ಆಗಿದೆ. ಪಂದ್ಯದಲ್ಲಿ ಶುಬ್ಮನ್ ಗಿಲ್ ಕೂಡ ರನ್ ಔಟ್ ಆಗಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ 11 ಓವರ್ಗೆ 62 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ತಂಡದ ಪರ ರಾಹುಲ್ ತ್ರಿಪಾಠಿ ಮತ್ತು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸುನಿಲ್ ನರೈನ್ 7 ಬಾಲ್ಗೆ 6 ರನ್ ಗಳಿಸಿ ಜಯದೇವ್ ಉನಾದ್ಕತ್ಗೆ ವಿಕೆಟ್ ಒಪ್ಪಿಸಿದ್ದಾರೆ. ಜೈಸ್ವಾಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರ ರಾಹುಲ್ ತ್ರಿಪಾಠಿ ಹಾಗೂ ಇಯಾನ್ ಮೋರ್ಗನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೆಕೆಆರ್ 10 ಓವರ್ಗೆ 3 ವಿಕೆಟ್ ಕಳೆದುಕೊಂಡು 55 ರನ್ ದಾಖಲಿಸಿದೆ.
25 ಬಾಲ್ಗೆ 22 ರನ್ ಗಳಿಸಿ ನಿತೀಶ್ ರಾಣಾ ಔಟ್ ಆಗಿದ್ದಾರೆ. ಚೇತನ್ ಸಕರಿಯಾ ಬಾಲ್ಗೆ ಸಂಜು ಸ್ಯಾಮ್ಸನ್ಗೆ ಕ್ಯಾಚ್ ಒಪ್ಪಿಸಿ ನಿರ್ಗಮಿಸಿದ್ದಾರೆ. ರಾಹುಲ್ ತ್ರಿಪಾಠಿ ಹಾಗೂ ಸುನಿಲ್ ನರೈನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 8 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 45 ರನ್ ದಾಖಲಿಸಿದೆ. ನಿತೀಶ್ ರಾಣಾ 24 ಬಾಲ್ಗೆ 1 ಬೌಂಡರಿ, 1 ಸಿಕ್ಸರ್ ಸಹಿತ 22 ರನ್ ಪೇರಿಸಿದ್ದಾರೆ. ರಾಹುಲ್ ತ್ರಿಪಾಠಿ 5 ಬಾಲ್ಗೆ 10 ರನ್ ಗಳಿಸಿದ್ದಾರೆ.
ಶುಬ್ಮನ್ ಗಿಲ್ ರನೌಟ್ ಆಗಿ ವಿಕೆಟ್ ಒಪ್ಪಿಸಿದ್ದು ಹೀಗೆ..
ಕೋಲ್ಕತ್ತಾ ನೈಟ್ ರೈಡರ್ಸ್ 6 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 25 ರನ್ ದಾಖಲಿಸಿದೆ. ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್ನಲ್ಲಿದ್ದಾರೆ.
ಶುಬ್ಮನ್ ಗಿಲ್ 19 ಬಾಲ್ಗೆ 11 ರನ್ ಗಳಿಸಿ ಔಟ್ ಆಗಿದ್ದಾರೆ. ಜಾಸ್ ಬಟ್ಲರ್ಗೆ ರನೌಟ್ ಆಗಿ ವಿಕೆಟ್ ಒಪ್ಪಿಸಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 5 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ. ನಿತೀಶ್ ರಾಣಾ ಹಾಗೂ ಶುಬ್ಮನ್ ಗಿಲ್ ಬ್ಯಾಟಿಂಗ್ನಲ್ಲಿದ್ದಾರೆ.
ಕೋಲ್ಕತ್ತಾಗೆ ನಿತೀಶ್ ರಾಣಾ ಹಾಗೂ ಶುಬ್ಮನ್ ಗಿಲ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ನಿತೀಶ್ ರಾಣಾ 13 ಬಾಲ್ಗೆ 10 ರನ್ ಹಾಗೂ ಶುಬ್ಮನ್ ಗಿಲ್ 14 ಬಾಲ್ಗೆ 9 ರನ್ ಗಳಿಸಿ ಕಣದಲ್ಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 3 ಓವರ್ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 14 ರನ್ ಕಲೆಹಾಕಿದೆ. ಉನಾದ್ಕತ್, ಸಕರಿಯಾ ಹಾಗೂ ಮುಸ್ತಫಿಜುರ್ ರಹಮಾನ್ ತಲಾ ಒಂದು ಓವರ್ ಬೌಲಿಂಗ್ ಮಾಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 1 ಓವರ್ಗೆ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ. ನಿತೀಶ್ ರಾಣಾ ಹಾಗೂ ಶುಬ್ಮನ್ ಗಿಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದಾರೆ. ಜಯದೇವ್ ಉನಾದ್ಕತ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ನಲ್ಲಿ 1 ಬದಲಾವಣೆ ಮಾಡಿಕೊಳ್ಳಲಾಗಿದೆ. ನಾಗರ್ಕೋಟಿ ಬದಲಿಗೆ ಶಿವಂ ಮಾವಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿದ್ದಾರೆ.
ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್ಗೆ ಹೊಸ ಸೇರ್ಪಡೆಯಾಗಿದ್ದಾರೆ..
ರಾಜಸ್ಥಾನ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲುವ ಉತ್ಸಾಹದಲ್ಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೆಣೆಸಾಡಲಿದೆ. ಸೋಲಿನ ಸುಳಿಯಿಂದ ಮೇಲೇಳಲು ಉಭಯ ತಂಡಗಳು ಪ್ರಯತ್ನ ನಡೆಸುತ್ತಿವೆ.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ದುಕೊಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ ಮಾಡಲಿದೆ.
Published On - 11:24 pm, Sat, 24 April 21