RR vs SRH, IPL 2021 Match 28 Result: ಮತ್ತೆ ಸೋತ ಸನ್​ರೈಸರ್ಸ್; ರಾಜಸ್ಥಾನ್ ರಾಯಲ್ಸ್​ಗೆ ಗೆಲುವು

| Updated By: ganapathi bhat

Updated on: Sep 05, 2021 | 10:42 PM

RR vs SRH Scorecard: ರಾಜಸ್ಥಾನ್ ರಾಯಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2021 ಟೂರ್ನಿಯ 28ನೇ ಪಂದ್ಯದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿದೆ.

RR vs SRH, IPL 2021 Match 28 Result: ಮತ್ತೆ ಸೋತ ಸನ್​ರೈಸರ್ಸ್; ರಾಜಸ್ಥಾನ್ ರಾಯಲ್ಸ್​ಗೆ ಗೆಲುವು
ರಾಜಸ್ಥಾನ ರಾಯಲ್ಸ್: ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಟಾರ್​ ಆಟಗಾರ ಜೋಸ್ ಬಟ್ಲರ್ ಹಾಗೂ ಬೆನ್​ ಸ್ಟೋಕ್ಸ್​ ಸ್ಥಾನ ತುಂಬುವುದು ಸವಾಲಾಗಿದೆ. ತಂಡಕ್ಕೆ ಎವಿನ್ ಲೂಯಿಸ್ ಹಾಗೂ ಗ್ಲೆನ್ ಫಿಲಿಪ್ಸ್ ಆಗಮನವಾಗಿದೆ. ಇದಾಗ್ಯೂ ಇಬ್ಬರು ತಂಡದಲ್ಲಿ ಹೊಂದಿಕೊಳ್ಳಲು ಒಂದಷ್ಟು ಸಮಯ ಬೇಕಿದೆ. ಆದರೆ ಉಳಿದಿರುವುದು ಕೇವಲ 7 ಪಂದ್ಯ ಮಾತ್ರ. ಹೊಸ ಆಟಗಾರರು ತಂಡದಲ್ಲಿ ಹೊಂದಿಕೊಳ್ಳುವಷ್ಟರಲ್ಲಿ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದಿರಲಿದೆ. ಇನ್ನು ಜೋಫ್ರಾ ಆರ್ಚರ್ ಕೂಡ ಅಲಭ್ಯರಾಗಿರುವುದು ಆರ್​ಆರ್​ ಚಿಂತೆಯನ್ನು ಹೆಚ್ಚಿಸಿದೆ.

ದೆಹಲಿ: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 55 ರನ್​ಗಳ ಗೆಲುವು ದಾಖಲಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ತೋರಿ ಸನ್​ರೈಸರ್ಸ್ ತಂಡವನ್ನು ಕಟ್ಟಿಹಾಕಿದೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡ ಮತ್ತೆ ಸೋಲುಂಡಿದೆ. ರಾಜಸ್ಥಾನ್ ಪರ ಮುಸ್ತಾಫಿಜುರ್ ರಹಮಾನ್ 4 ಓವರ್​ಗೆ 20 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಕ್ರಿಸ್ ಮಾರಿಸ್ 4 ಓವರ್​ಗೆ 29 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ಸನ್​ರೈಸರ್ಸ್ ಪರ ಆರಂಭಿಕರಾದ ಮನೀಶ್ ಪಾಂಡೆ 31 ಮತ್ತು ಬೇರ್​ಸ್ಟೋ 30 ರನ್ ದಾಖಲಿಸಿದ್ದು ಹೊರತುಪಡಿಸಿ ಉಳಿದವರು ಉತ್ತಮ ಆಟ ಆಡಿಲ್ಲ.

ನಿಗದಿತ 20 ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಕಳೆದುಕೊಂಡು 220 ರನ್​ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 221 ರನ್​ಗಳ ಗುರಿ ನೀಡಿತ್ತು. ರಾಜಸ್ಥಾನ್ ರಾಯಲ್ಸ್ ಪರ ಜಾಸ್ ಬಟ್ಲರ್ ಅದ್ಭುತ ಪ್ರದರ್ಶನ ತೋರಿದ್ದರು. 64 ಬಾಲ್​ಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 124 ರನ್ ಕಲೆಹಾಕಿದ್ದರು. ಆರ್​ಆರ್​ ನಾಯಕ ಸಂಜು ಸ್ಯಾಮ್ಸನ್ ಕೂಡ ಉತ್ತಮ ಆಟವಾಡಿದ್ದರು. 33 ಬಾಲ್​ಗೆ 48 ರನ್ ಗಳಿಸಿ ಇನ್ನಿಂಗ್ಸ್ ಕಟ್ಟಿದ್ದರು. ಅಂತಿಮ ಓವರ್​ಗಳಲ್ಲಿ ರಿಯಾನ್ ಪರಾಗ್ 15 (8) ಮತ್ತು ಡೇವಿಡ್ ಮಿಲ್ಲರ್ 7 (3) ರನ್ ಗಳಿಸಿ ರನ್ ವೇಗ ಕುಸಿಯಲು ಬಿಟ್ಟಿರಲಿಲ್ಲ.

ಸನ್​ರೈಸರ್ಸ್ ಪರವಾಗಿ ಬೌಲರ್​ಗಳು ಹೇಳಿಕೊಳ್ಳುವಂಥಾ ಪ್ರದರ್ಶನ ನೀಡಿರಲಿಲ್ಲ. ರಶೀದ್ ಖಾನ್ 4 ಓವರ್​ಗೆ 24 ರನ್ ನೀಡಿ, 1 ವಿಕೆಟ್ ಪಡೆದು ರನ್ ನಿಯಂತ್ರಿಸಿದ್ದರು. ಉಳಿದಂತೆ ಯಾವೊಬ್ಬ ಬೌಲರ್ ಕೂಡ ರನ್ ಕಟ್ಟಿಹಾಕಲು ಯಶಸ್ವಿಯಾಗಿರಲಿಲ್ಲ. ಪಂದ್ಯದ ಸಂಪೂರ್ಣ ಮಾಹಿತಿ ಈ ಕೆಳಗಿದೆ.

LIVE NEWS & UPDATES

The liveblog has ended.
  • 02 May 2021 07:22 PM (IST)

    ರಾಜಸ್ಥಾನ್ ರಾಯಲ್ಸ್​ಗೆ ಗೆಲುವು

    ಸನ್​ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ 55 ರನ್​ಗಳ ಗೆಲುವು ದಾಖಲಿಸಿದೆ. 221 ರನ್​ಗಳ ಗುರಿ ಬೆನ್ನತ್ತಿದ ಸನ್​ರೈಸರ್ಸ್ ಹೈದರಾಬಾದ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಗಿದೆ.

  • 02 May 2021 07:04 PM (IST)

    ಏಳು ವಿಕೆಟ್ ಕಳೆದುಕೊಂಡು ಸನ್​ರೈಸರ್ಸ್

    ಸನ್​ರೈಸರ್ಸ್ ಹೈದರಾಬಾದ್ ತಂಡ 142 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ತಂಡದ ಗೆಲುವಿಗೆ 18 ಬಾಲ್​ಗೆ 79 ರನ್ ಬೇಕಿದೆ. ಸನ್​ರೈಸರ್ಸ್ ಸೋಲು ಬಹುತೇಕ ಖಚಿತವಾಗಿದೆ. ಮೂರು ಓವರ್​ಗಳಲ್ಲಿ ಬೃಹತ್ ಮೊತ್ತ ಬೆನ್ನತ್ತಲು ವಿಕೆಟ್ ಕೂಡ ಉಳಿದಿಲ್ಲ.


  • 02 May 2021 06:50 PM (IST)

    ಸನ್​ರೈಸರ್ಸ್ ಹೈದರಾಬಾದ್ 129/5 (15 ಓವರ್)

    ಸನ್​ರೈಸರರ್ಸ್ ಗೆಲ್ಲಲು 30 ಬಾಲ್​ಗೆ 86 ರನ್ ಬೇಕಿದೆ. ತಂಡದ ಮೊತ್ತ 15 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 129 ರನ್ ಆಗಿದೆ. ತಂಡ ತನ್ನೆಲ್ಲಾ ಮುಖ್ಯ ಬ್ಯಾಟ್ಸ್​ಮನ್​ಗಳ ವಿಕೆಟ್ ಕಳೆದುಕೊಂಡು ಸೊರಗಿದೆ. ಕೇದಾರ್ ಜಾಧವ್ ಹಾಗೂ ಅಬ್ದುಲ್ ಸಮದ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 02 May 2021 06:41 PM (IST)

    ಕೇನ್ ವಿಲಿಯಮ್ಸನ್ ಔಟ್; ಸನ್​ರೈಸರ್ಸ್​ಗೆ ಸಂಕಷ್ಟ!

    ಸನ್​ರೈಸರ್ಸ್ ಹೈದರಾಬಾದ್ ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದೆ. ಸನ್​ರೈಸರ್ಸ್ ನಾಯಕ ಕೇನ್ ವಿಲಿಯಮ್ಸನ್ 21 ಬಾಲ್​ಗೆ 20 ರನ್ ಗಳಿಸಿ ನಿರ್ಗಮಿಸಿದ್ದಾರೆ.

  • 02 May 2021 06:35 PM (IST)

    ಸನ್​ರೈಸರ್ಸ್ ಗೆಲ್ಲಲು 48 ಬಾಲ್​ಗೆ 121 ರನ್ ಬೇಕು

    ಸನ್​ರೈಸರ್ಸ್ ಹೈದರಾಬಾದ್ ಗೆಲ್ಲಲು 48 ಬಾಲ್​ಗೆ 121 ರನ್ ಬೇಕಾಗಿದೆ. ಕೇನ್ ವಿಲಿಯಮ್ಸನ್ ಹಾಗೂ ಕೇದಾರ್ ಜಾಧವ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 12 ಓವರ್​ಗೆ ತಂಡದ ಮೊತ್ತ 100/3 ಆಗಿದೆ.

  • 02 May 2021 06:30 PM (IST)

    ವಿಜಯ್ ಶಂಕರ್ ಔಟ್

    ಕ್ರಿಸ್ ಮಾರಿಸ್ ಬೌಲಿಂಗ್​ಗೆ ಮಿಲ್ಲರ್​ಗೆ ಕ್ಯಾಚ್ ನೀಡಿ ವಿಜಯ್ ಶಂಕರ್ ಕೂಡ ಔಟ್ ಆಗಿದ್ದಾರೆ. ಸನ್​ರೈಸರ್ಸ್ ತಂಡದ ಮೂರನೇ ವಿಕೆಟ್ ಪತನವಾಗಿದೆ. ಅವರು 8 ಬಾಲ್​ಗೆ 8 ರನ್ ಗಳಿಸಿ ನಿರ್ಗಮಿಸಿದ್ದಾರೆ. ಸನ್​ರೈಸರ್ಸ್ ತಂಡದ ಮೊತ್ತ 11 ಓವರ್​ಗೆ 89/3 ಆಗಿದೆ.

  • 02 May 2021 06:17 PM (IST)

    ಬೇರ್​​ಸ್ಟೋ ಔಟ್

    ಸನ್​ರೈಸರ್ಸ್ ಹೈದರಾಬಾದ್ ತಂಡದ ಎರಡನೇ ವಿಕೆಟ್ ಪತನವಾಗಿದೆ. 21 ಬಾಲ್​ಗೆ 30 ರನ್ ಗಳಿಸಿ ಜಾನಿ ಬೇರ್​ಸ್ಟೋ ಕೂಡ ಔಟ್ ಆಗಿದ್ದಾರೆ. ಕೇನ್ ವಿಲಿಯಮ್ಸನ್​ಗೆ ವಿಜಯ್ ಶಂಕರ್ ಜೊತೆಯಾಗಿದ್ದಾರೆ. 9 ಓವರ್​ನ ಅಂತ್ಯಕ್ಕೆ ಸನ್​ರೈಸರ್ಸ್ ತಂಡದ ಸ್ಕೋರ್ 72/2 ಆಗಿದೆ.

  • 02 May 2021 06:09 PM (IST)

    ಮನೀಶ್ ಪಾಂಡೆ ಔಟ್

    ಸನ್​ರೈಸರ್ಸ್​ಗೆ ಉತ್ತಮ ಆರಂಭ ನೀಡಿದ್ದ ಮನೀಶ್ ಪಾಂಡೆ ವಿಕೆಟ್ ಒಪ್ಪಿಸಿದ್ದಾರೆ. 20 ಬಾಲ್​ಗೆ 31 ರನ್ ಗಳಿಸಿ ಪಾಂಡೆ ನಿರ್ಗಮಿಸಿದ್ದಾರೆ. ಕೇನ್ ವಿಲಿಯಮ್ಸನ್ ಹಾಗೂ ಜಾನಿ ಬೇರ್​ಸ್ಟೋ ಕ್ರೀಸ್​ನಲ್ಲಿದ್ದಾರೆ. ತಂಡದ ಮೊತ್ತ 7 ಓವರ್​ಗೆ 61ಕ್ಕೆ 1 ಆಗಿದೆ.

  • 02 May 2021 06:02 PM (IST)

    ಪವರ್​ಪ್ಲೇ ಅಂತ್ಯಕ್ಕೆ 57/0

    ಸನ್​ರೈಸರ್ಸ್ ಹೈದರಾಬಾದ್ ತಂಡ 6 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 57 ರನ್ ಕಲೆಹಾಕಿದೆ. ಮನೀಶ್ ಪಾಂಡೆ ಹಾಗೂ ಜಾನಿ ಬೇರ್​ಸ್ಟೋ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ. ಪಾಂಡೆ 31 ಹಾಗೂ ಬೇರ್​ಸ್ಟೋ 24 ರನ್ ಗಳಿಸಿ ಇನ್ನಿಂಗ್ಸ್ ಕಟ್ಟಲು ನೆರವಾಗಿದ್ದಾರೆ. ತಂಡ ಗೆಲ್ಲಲು 84 ಬಾಲ್​ಗೆ 164 ರನ್ ಬೇಕಿದೆ.

  • 02 May 2021 05:40 PM (IST)

    ಬ್ಯಾಟಿಂಗ್ ಆರಂಭಿಸಿದ ಸನ್​ರೈಸರ್ಸ್

    ಸನ್​ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಮನೀಶ್ ಪಾಂಡೆ ಹಾಗೂ ಜಾನಿ ಬೇರ್​ಸ್ಟೋ ಆರಂಭಿಕರಾಗಿ ಕ್ರೀಸ್​ಗೆ ಇಳಿದಿದ್ದಾರೆ. 2ನೇ ಓವರ್​ನ ಅಂತ್ಯಕ್ಕೆ ಸನ್​ರೈಸರ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 11 ರನ್ ದಾಖಲಿಸಿದೆ.

  • 02 May 2021 05:16 PM (IST)

    ರಾಜಸ್ಥಾನ್ ರಾಯಲ್ಸ್ 220/3 (20 ಓವರ್)

    ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 220 ರನ್ ದಾಖಲಿಸಿದೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 221 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

  • 02 May 2021 05:12 PM (IST)

    200 ರನ್ ಗಡಿ ದಾಟಿದ ಆರ್​ಆರ್​; ಬಟ್ಲರ್ ಔಟ್

    ರಾಜಸ್ಥಾನ್ ರಾಯಲ್ಸ್ ಬಟ್ಲರ್ ಆಟದ ನೆರವಿನಿಂದ 200 ರನ್​ಗಳ ಗಡಿ ದಾಟಿದೆ. 19ನೇ ಓವರ್​ಗೆ 3 ವಿಕೆಟ್ ಕಳೆದುಕೊಂಡು 209 ರನ್ ದಾಖಲಿಸಿದೆ. ಇದೇ ವೇಳೆ ಕೊನೆಯ ಎಸೆತದಲ್ಲಿ ಬಟ್ಲರ್ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದ್ದಾರೆ. 64 ಬಾಲ್​ಗೆ 124 ರನ್ ಗಳಿಸಿ ನಿರ್ಗಮಿಸಿದ್ದಾರೆ. ಕೊನೆಯ ಒಂದು ಓವರ್ ಉಳಿದಿರುವಂತೆ ರಿಯಾನ್ ಪರಾಗ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 02 May 2021 05:01 PM (IST)

    ಶತಕ ಸಿಡಿಸಿದ ಜಾಸ್ ಬಟ್ಲರ್

    ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜಾಸ್ ಬಟ್ಲರ್ ಆಸರೆಯಾಗಿದ್ದಾರೆ. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 56 ಬಾಲ್​ಗೆ 100 ರನ್ ದಾಖಲಿಸಿದ್ದಾರೆ. 5 ಸಿಕ್ಸರ್ ಹಾಗೂ 10 ಬೌಂಡರಿ ಸಿಡಿಸಿ ಮಿಂಚಿದ್ದಾರೆ. ರಾಜಸ್ಥಾನ್ ತಂಡದ ಮೊತ್ತ 17ನೇ ಓವರ್​ಗೆ 172/2 ಆಗಿದೆ.

  • 02 May 2021 04:59 PM (IST)

    ಅರ್ಧಶತಕದ ಹೊಸ್ತಿಲಲ್ಲಿ ಸಂಜು ಔಟ್

    ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 33 ಬಾಲ್​ಗೆ 48 ರನ್ ಗಳಿಸಿ ಔಟ್ ಆಗಿದ್ದಾರೆ. ವಿಜಯ್ ಶಂಕರ್ ಬೌಲಿಂಗ್​ಗೆ ಅಬ್ದುಲ್ ಸಮದ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಶತಕದ ಅಂಚಿನಲ್ಲಿ ಅಬ್ಬರಿಸುತ್ತಿರುವ ಜಾಸ್ ಬಟ್ಲರ್​ಗೆ ರಿಯಾನ್ ಪರಾಗ್ ಜೊತೆಯಾಗಿದ್ದಾರೆ.

  • 02 May 2021 04:49 PM (IST)

    ಬಟ್ಲರ್ ಬ್ಯಾಟಿಂಗ್ ಅಬ್ಬರ!

    ರಾಜಸ್ಥಾನ್ ರಾಯಲ್ಸ್ ಪರ ಜಾಸ್ ಬಟ್ಲರ್ ಅಬ್ಬರಿಸುತ್ತಿದ್ದಾರೆ. ಮೊಹಮ್ಮದ್ ನಬಿ ಬೌಲಿಂಗ್​ನ ಓವರ್​ನಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ. ತಂಡದ ಮೊತ್ತ 15 ಓವರ್​ಗೆ 146/1 ಆಗಿದೆ. 50 ಬಾಲ್​ಗೆ 7 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 84 ರನ್ ಕಲೆಹಾಕಿ ಬಟ್ಲರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 02 May 2021 04:47 PM (IST)

    ಸಂಜು- ಬಟ್ಲರ್ ಉತ್ತಮ ಜೊತೆಯಾಟ

    ರಾಜಸ್ಥಾನ್ ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ ಹಾಗೂ ಜಾಸ್ ಬಟ್ಲರ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ. ಮೊದಲ ವಿಕೆಟ್ ಬಳಿಕ ಶಿಸ್ತುಬದ್ಧ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತ ಹೆಚ್ಚಿಸಿದ್ದಾರೆ. 14 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ 1 ವಿಕೆಟ್ ಕಳೆದುಕೊಂಡು 125 ರನ್ ಪೇರಿಸಿದೆ.

  • 02 May 2021 04:37 PM (IST)

    ಜಾಸ್ ಬಟ್ಲರ್ ಅರ್ಧಶತಕ

    ರಾಜಸ್ಥಾನ್ ರಾಯಲ್ಸ್ ಪರ ಜಾಸ್ ಬಟಲ್ರ್ ಅರ್ಧಶತಕ ದಖಲಿಸಿದ್ದಾರೆ. ಇದು ಬಟಲ್ರ್ 12ನೇ ಐಪಿಎಲ್ ಅರ್ಧಶತಕವಾಗಿದೆ. ತಂಡದ ಮೊತ್ತ 13 ಓವರ್​ಗೆ 1 ವಿಕೆಟ್ ಕಳೆದುಕೊಂಡು 111 ರನ್ ಆಗಿದೆ. ಸಂಜು ಸ್ಯಾಮ್ಸನ್ 33 ರನ್ ಗಳಿಸಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.

  • 02 May 2021 04:10 PM (IST)

    ಸಂಜು ಸ್ಯಾಮ್ಸನ್ ವೇಗದ ಆಟ

    ರಾಜಸ್ಥಾನ್ ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ ವೇಗದ ಆಟಕ್ಕೆ ಮುಂದಾಗಿದ್ದಾರೆ. ಎರಡು ಸಿಕ್ಸರ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದ್ದಾರೆ. 7ನೇ ಓವರ್​ಗೆ ರಾಜಸ್ಥಾನ್ 1 ವಿಕೆಟ್ ಕಳೆದುಕೊಂಡು 60 ರನ್ ದಾಖಲಿಸಿದೆ.

  • 02 May 2021 04:00 PM (IST)

    ಪವರ್​ಪ್ಲೇ ಅಂತ್ಯಕ್ಕೆ 42/1

    ರಾಜಸ್ಥಾನ್ ರಾಯಲ್ಸ್ ತಂಡ 6 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 42 ರನ್ ದಾಖಲಿಸಿದೆ. ನಾಯಕ ಸಂಜು ಸ್ಯಾಮ್ಸನ್ ಮತ್ತು ಬಟ್ಲರ್ ಇನ್ನಿಂಗ್ಸ್ ಕಟ್ಟಬೇಕಿದೆ.

  • 02 May 2021 03:58 PM (IST)

    ರಾಜಸ್ಥಾನ್ ರಾಯಲ್ಸ್ 33/1 (5 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 5 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 33 ರನ್ ದಾಖಲಿಸಿದೆ. ಸಂಜು ಸ್ಯಾಮ್ಸನ್ 8 ಹಾಗೂ ಬಟ್ಲರ್ 12 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಅನುಜ್ ರಾವತ್, ರಾಹುಲ್ ತೆವಾಟಿಯಾ ಹಾಗೂ ಕ್ರಿಸ್ ಮಾರಿಸ್ ಬ್ಯಾಟಿಂಗ್​ಗೆ ಬಾಕಿ ಇದ್ದಾರೆ.

  • 02 May 2021 03:48 PM (IST)

    ಮೊದಲ ವಿಕೆಟ್ ಕಳೆದುಕೊಂಡ ಆರ್​ಆರ್​

    ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ಯಶಸ್ವಿ ಜೈಸ್ವಾಲ್ ರಶೀದ್ ಖಾನ್ ಬೌಲಿಂಗ್​ಗೆ ಎಲ್​ಬಿಡ್ಬ್ಲ್ಯುಗೆ ಔಟ್ ಆಗಿದ್ದಾರೆ. 13 ಬಾಲ್​ಗೆ 12 ರನ್ ಗಳಿಸಿ ನಿರ್ಗಮಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಮೊತ್ತ 3 ಓವರ್​ಗೆ 1 ವಿಕೆಟ್ ಕಳೆದುಕೊಂಡು 17 ರನ್ ಆಗಿದೆ. ಜಾಸ್ ಬಟ್ಲರ್​ಗೆ ನಾಯಕ ಸಂಜು ಸ್ಯಾಮ್ಸನ್ ಜೊತೆಯಾಗಿದ್ದಾರೆ.

  • 02 May 2021 03:35 PM (IST)

    ಬ್ಯಾಟಿಂಗ್ ಆರಂಭಿಸಿ ರಾಜಸ್ಥಾನ್

    ರಾಜಸ್ಥಾನ್ ರಾಯಲ್ಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಜಾಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. 1 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 2 ರನ್ ದಾಖಲಾಗಿದೆ. ಮೊದಲ ಓವರ್​ನ್ನು ಭುವನೇಶ್ವರ್ ಕುಮಾರ್ ಬೌಲ್ ಮಾಡಿದ್ದಾರೆ.

  • 02 May 2021 03:33 PM (IST)

    ಸನ್​ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್

    ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಕೇದಾರ್ ಜಾಧವ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್

  • 02 May 2021 03:31 PM (IST)

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್

    ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಅನುಜ್ ರಾವತ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಕಾರ್ತಿಕ್ ತ್ಯಾಗಿ, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್

  • 02 May 2021 03:07 PM (IST)

    ಟಾಸ್ ಗೆದ್ದ ಸನ್​ರೈಸರ್ಸ್ ಬೌಲಿಂಗ್ ಆಯ್ಕೆ

    ಸನ್​ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - 7:22 pm, Sun, 2 May 21

Follow us on