ಸಚಿನ್ ತೆಂಡೂಲ್ಕರ್ಗೆ ಇಂದು 48ರ ವಸಂತ! ಎಂದೂ ಮುರಿಯದ ಸಾಧನೆಗಳ ಕಿರುಪರಿಚಯ ತೆಂಡೂಲ್ಕರ್ ಅಭಿಮಾನಿಗಳಿಗಾಗಿ
Sachin Tendulkar 48th birthday: ಸಚಿನ್ ತೆಂಡೂಲ್ಕರ್ ಕಿರಿಯ ವಯಸ್ಸಿಗೆ ಸಾಧನೆಗೈದ ವಾಮನಮೂರ್ತಿ. ಅಪರೂಪದ ಸಂಗತಿಯೆಂದ್ರೆ ಭಾರತೀಯ ಕ್ರಿಕೆಟ್ ಆಯ್ಕೆ ಮಂಡಳಿ ತೆಂಡೂಲ್ಕರ್ ಅವರನ್ನು 19 ವರ್ಷ ವಯಸ್ಸಿನ ದೇಶೀಯ ಟೂರ್ನಿಯಲ್ಲಿ ಕಡ್ಡಾಯವಾಗಿ ಆಡುವಂತೆ ಸೂಚಿಸಲಿಲ್ಲ. ಸಚಿನ್ ತೆಂಡೂಲ್ಕರ್ ಭಾರತದ ಪರ ಟೆಸ್ಟ್ ಕ್ರಿಕೆಟ್ ಕ್ಯಾಪ್ ಧರಿಸಿದಾಗ ಆ ಹುಡುಗನಿಗೆ ಕೇವಲ 16 ವರ್ಷ 205 ದಿನ ವಯಸ್ಸಾಗಿತ್ತಷ್ಟೇ!
ಭಾರತೀಯ ಕ್ರಿಕೆಟ್ ರಂಗದಲ್ಲಿ ದೇವರು ಎಂದೇ ಪರಿಗಣಿತವಾಗಿರುವ ಸಚಿನ್ ತೆಂಡೂಲ್ಕರ್ ಇಂದಿಗೆ (April 24) 48 ವಸಂತಗಳನ್ನು ಕಂಡಿದ್ದಾರೆ.. ಈ ಸಂದರ್ಭದಲ್ಲಿ ಎಂದಿಗೂ ಮುರಿಯದ ಅವರ ಅಮೋಘ ಸಾಧನೆಗಳು/ ದಾಖಲೆಗಳ ಕಿರುಪರಿಚಯಾತ್ಮಕ ಲೇಖನ ತೆಂಡೂಲ್ಕರ್ ಅಭಿಮಾನಿಗಳಿಗಾಗಿ ಇಲ್ಲಿದೆ.. ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ ತಂಡದ ಪರ ಒಟ್ಟು 200 ಟೆಸ್ಟ್ಗಳು (Tests), 463 ಏಕ ದಿನ ಪಂದ್ಯಗಳು (ODI) ಮತ್ತು 1 ಟಿ 20 ಟೂರ್ನಿ (T 20 I) ಆಡಿದ್ದಾರೆ. ಜಗತ್ತಿನ ಕ್ರಿಕೆಟ್ ಕ್ಷೇತ್ರದಲ್ಲಿ 100 ಶತಕಗಳನ್ನು ಬಾರಿಸಿರುವವರೂ ಅವರೊಬ್ಬರೇ!
ಭಾರತ ಕ್ರಿಕೆಟ್ನ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪ್ರಸ್ತುತ ಮುಂಬೈನಲ್ಲಿದ್ದು, ತಮ್ಮ ಕುಟುಂಬದವರೊಂದಿಗೆ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಇದೀಗ ಐಪಿಎಲ್ 2021 ಸೀಸನ್. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡದ ಜೊತೆ ಇರುತ್ತಾರೆ. ಆದರೆ ಇತ್ತೀಚೆಗಷ್ಟೇ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಮನೆಯಲ್ಲೇ ಇದ್ದಾರೆ.
ತಮ್ಮ 24 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್ ಅಸಂಖ್ಯಾತ ಬ್ಯಾಟಿಂಗ್ ದಾಖಲೆಗಳು ಮತ್ತಿತರ ದಾಖಲೆಗಳನ್ನು ಪುಡಿಪುಡಿ ಮಾಡಿದ್ದಾರೆ. ಅವು ಯಾವುವು.. ನೋಡೋಣಾ ಬನ್ನೀ.
ಅತಿ ಹೆಚ್ಚು ಟೆಸ್ಟ್ ಪಂದ್ಯಗಳು:
ಕ್ರಿಕೆಟ್ನಲ್ಲಿ ಅತಿ ಚಿಕ್ಕ ವಯಸ್ಸಿಗೇ ಕಣಕ್ಕೆ ಇಳಿದ ಪ್ರತಿಭೆ. 175 ಟೆಸ್ಟ್ ಕ್ಯಾಪ್ಗಳನ್ನು ಧರಿಸಿದ ಅಸಾಮಾನ್ಯ ಈ ಸಚಿನ್ ತೆಂಡೂಲ್ಕರ್. ಇವರಿಗಿಂತ ಒಂದು ಸ್ಥಾನದಲ್ಲಿ ಹೊಂದಿರುವ ಆಸ್ಟ್ರೇಲಿಯಾದ ರಿಕಿ ಪಾಟಿಂಗ್ಗಿಂತ ಈತ ಮಾರು ದೂರ ಹೆಚ್ಚಾಗಿಯೇ ಇದ್ದಾರೆ. ಅಂದಹಾಗೆ ರಿಕಿ ಪಾಟಿಂಗ್ ಆಡಿರುವುದು 168 ಟೆಸ್ಟ್ ಪಂದ್ಯಗಳನ್ನಷ್ಟೇ.
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಆಡಿದ ಕಾಲಮಾನದಲ್ಲಿ ಹೆಚ್ಚಾಗಿ ಕೇವಲ ಎರಡು ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಗಳಷ್ಟೇ ಇದ್ದಿದ್ದು. ಹಾಗಾಗಿಯೇ ಅವರು ಹೆಚ್ಚು ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಯಿತು ಎಂದು ವಿಶ್ಲೇಷಿಸಬಹುದು. ಆದರೆ ಅವರಿಗೆ ಇಂಜ್ಯುರಿ ಅಂದ್ರೆ ಗಾಯಗಳು ಸಹ ಹೆಚ್ಚಾಗಿ ಬಾಧಿಸಿದವು. ಅದರಿಂದ ಅನೇಕ ಮ್ಯಾಚ್ಗಳಲ್ಲಿ ಮೈದಾನದಿಂದ ಹೊರಗುಳಿಯಬೇಕಾಯಿತು. ಅಂದ್ರೆ ಸುಮಾರು 25 ಟೆಸ್ಟ್ ಪಂದ್ಯಗಳನ್ನೇ ಅವರು ಮಿಸ್ ಮಾಡಿಕೊಂಡರು. ಇಲ್ಲಾಂದ್ರೆ ಅವರ ಟೆಸ್ಟ್ ಕೌಂಟ್ ಸುಲಭವಾಗಿ 225 ಅಂಕಿ ತಲುಪುತ್ತಿತ್ತು.
ಸಚಿನ್ ತೆಂಡೂಲ್ಕರ್ ಎಂಬ ರನ್ ಮಷೀನ್
ಅಗ್ರಮಾನ್ಯ ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಗಿದ್ದಕ್ಕೇ ತಮ್ಮ ಖಾತೆಯಲ್ಲಿ ಒಟ್ಟಾರೆ 15921 ಗರಿಷ್ಠ ರನ್ ಪೇರಿಸಲು ಸಾಧ್ಯವಾಯಿತು. ಅದೇ ಆಸ್ಟ್ರೇಲಿಯಾದ ರಿಕಿ ಪಾಟಿಂಗ್ 13,378 ರನ್ ಮಾತ್ರವೇ ದಾಖಲಿಸಲು ಸಾಧ್ಯವಾಯಿತು.
ವಿಶ್ವ ಕಪ್ಗಳಲ್ಲಿ ಹೆಚ್ಚು ಬಾರಿ ಕಾಣಿಸಿಕೊಂಡ ಅಗ್ರ ಆಟಗಾರ:
ಈ ವಿಶ್ವ ಕಪ್ಗಳಲ್ಲಿ ಹೆಚ್ಚು ಬಾರಿ ಕಾಣಿಸಿಕೊಳ್ಳಬೇಕು ಅಂದ್ರೆ ಎರಡು ಅಂಶಗಳು ಪ್ರಧಾನವಾಗುತ್ತವೆ: ಒಂದು, ವಯಸ್ಸು; ಮತ್ತೊಂದು ಫಿಟ್ನೆಸ್. ಇದುವರೆಗೂ ಜಗತ್ತಿನ ಕ್ರಿಕೆಟ್ನಲ್ಲಿ ಒಟ್ಟಾರೆಯಾಗಿ 12 ವಿಶ್ವ ಕಪ್ಗಳು ಜರುಗಿವೆ. ಅದರಲ್ಲಿ ಇಬ್ಬರೇ 6 ವಿಶ್ವ ಕಪ್ಗಳಲ್ಲಿ ಆಡಿರುವವರು! ಮೊದಲಿಗರು ಪಾಕಿಸ್ತಾನದ ಕಲಾತ್ಮಕ ಬ್ಯಾಟ್ಸ್ಮನ್ ಜಾವೀದ್ ಮಿಯಾಂದಾದ! ಮತ್ತೊಬ್ಬರು ನಮ್ಮ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್! 2011ರಲ್ಲಿಯೇ ಸಚಿನ್ ತೆಂಡೂಲ್ಕರ್ ಅವರು ಜಾವೀದ್ ಮಿಯಾಂದಾದ್ ಅವರ ಗರಿಷ್ಠ 6 ರ ಸಂಖ್ಯೆಯನ್ನು ದಾಟಿಬಿಟ್ಟರು. 46 ವರ್ಷ ಕಾಲದ ವಿಶ್ವ ಕಪ್ಗಳ ಇತಿಹಾಸದಲ್ಲಿ ಈ ಇಬ್ಬರೇ ಆಟಗಾರರು ಇಂತಹ ಅಪರೂಪದ ಸಾಧನೆಗೈದವರು.
ಈ ಹಿಂದೆ ಏಕದಿನ ಮಾದರಿಯ ವಿಶ್ವ ಕಪ್ ಟೂರ್ನಿಯಷ್ಟೇ ನಡೆಯುತ್ತಿತ್ತು. ಆದರೆ ಈಗೀಗ ದ್ವೈವಾರ್ಷಿಕವಅಗಿ ನಡೆಯುವ ಟಿ 20 ವರ್ಲ್ಡ್ ಕಪ್ ಟೂರ್ನಿಯನ್ನೂ (ICC T20 World Cup) ಸಹ ಆಯೋಜಿಸಲಾಗುತ್ತಿದೆ.
ಟೆಸ್ಟ್ ಕ್ರಿಕೆಟ್ ಆಡಿದ ಅತಿ ಕಿರಿಯ ಎಂಬ ಕೀರ್ತಿ ಸಚಿನ್ ತೆಂಡೂಲ್ಕರ್ ಅವರದ್ದಾಗಿದೆ:
ಸಚಿನ್ ತೆಂಡೂಲ್ಕರ್ ಕಿರಿಯ ವಯಸ್ಸಿಗೆ ಸಾಧನೆಗೈದ ವಾಮನಮೂರ್ತಿ. ಅಪರೂಪದ ಸಂಗತಿಯೆಂದ್ರೆ ಭಾರತೀಯ ಕ್ರಿಕೆಟ್ ಆಯ್ಕೆ ಮಂಡಳಿ ತೆಂಡೂಲ್ಕರ್ ಅವರನ್ನು 19 ವರ್ಷ ವಯಸ್ಸಿನ ದೇಶೀಯ ಟೂರ್ನಿಯಲ್ಲಿ ಕಡ್ಡಾಯವಾಗಿ ಆಡುವಂತೆ ಸೂಚಿಸಲಿಲ್ಲ. ಆದರೆ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಇರಾನಿ ಕಪ್ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ತಮ್ಮ ಎಂಟ್ರಿಯನ್ನು ಸಾಬೀತುಪಡಿಸಿದ್ದರು. ಸಚಿನ್ ತೆಂಡೂಲ್ಕರ್ ಭಾರತದ ಪರ ಟೆಸ್ಟ್ ಕ್ರಿಕೆಟ್ ಕ್ಯಾಪ್ ಧರಿಸಿದಾಗ ಆ ಹುಡುಗನಿಗೆ ಕೇವಲ 16 ವರ್ಷ 205 ದಿನ ವಯಸ್ಸಾಗಿತ್ತಷ್ಟೇ!
ವಿಶ್ವ ಕಪ್ಗಳಲ್ಲಿ ಹೆಚ್ಚು ರನ್ ಪೇರಿಸಿದ ಪ್ರತಿಭೆ!
ಸಚಿನ್ ತೆಂಡೂಲ್ಕರ್ ಗರಿಷ್ಠ ವಿಶ್ವ ಕಪ್ಗಳನ್ನು ಆಡಿದವರು. ಮೊದಲೇ ಅದ್ಭುತ ಬ್ಯಾಟ್ಸ್ಮನ್. ಹಾಗಾಗಿಯೇ ವಿಶ್ವ ಕಪ್ಗಳಲ್ಲಿ ಅತಿ ಹೆಚ್ಚು ಹೆಚ್ಚು ರನ್ ಪೇರಿಸಿದ ದಾಖಲೆ ಇವರ ಹೆಸರಿನಲ್ಲಿಯೇ ಇದೆ. ಈ ವಿಶ್ವ ಕಪ್ಗಳಲ್ಲಿ ಮಾಸ್ಟರ್ ಬ್ಲಾಸ್ಟರ್ 2,000 ರನ್ ಕೂಡಿಹಾಕಿದ್ದಾರೆ. ಈ ದಾಖಲೆಗಳನ್ನು ಬೇರೆ ಯಾವುದೇ ಆಟಗಾರನಿಗೆ ಮುರಿಯಲು ಸಾಧ್ಯವಾಗದೇ ಇರಬಹುದು.. ಅಲ್ಲವೇ!? (Sachin Tendulkar 48th birthday: Sachin Tendulkar has many unbeatable records in his bag here is a list)
Published On - 11:09 am, Sat, 24 April 21